ETV Bharat / state

ಅಸ್ಥಿಪಂಜರವಾದ ಮೀನುಗಾರರ ಶೆಡ್: ಮಾತು ಮರೆತ ಜಿಲ್ಲಾಡಳಿತದ ವಿರುದ್ಧ ಮೀನುಗಾರರ ಆಕ್ರೋಶ - karwar fishermen

ಅಸ್ಥಿಪಂಜರದಂತಾದ ಬೃಹತ್ ಗಾತ್ರದ ಮೂರು ತಾತ್ಕಾಲಿಕ ಶೆಡ್ - ಸಂಪೂರ್ಣ ಶಿಥಿಲಾವಸ್ಥೆ ತಲುಪಿದ ಕಡಲತೀರದಲ್ಲಿ ನಿರ್ಮಿಸಿದ ಶೆಡ್‌ಗಳು- ಜಿಲ್ಲಾಡಳಿತದ ವಿರುದ್ಧ ಮೀನುಗಾರರು ಆಕ್ರೋಶ

karwar fisherman shed
ಮೀನುಗಾರರ ಶೆಡ್
author img

By

Published : Feb 13, 2023, 9:19 AM IST

ಜಿಲ್ಲಾಡಳಿತದ ವಿರುದ್ಧ ಮೀನುಗಾರರು ಆಕ್ರೋಶ

ಕಾರವಾರ: ಕಾರವಾರದ ಜನರಿಗೆ ಮೀನುಗಾರಿಕೆಯೇ ಪ್ರಮುಖ ಉದ್ಯೋಗ. ಈ ಹಿಂದೆ ಮೀನುಗಾರಿಕೆ ನಡೆಸಿದ ಬಳಿಕ ಬಹುತೇಕ ಮೀನುಗಾರರು ಬಲೆ ಬೋಟ್​ಗಳನ್ನು ಕಡಲತೀರದಲ್ಲಿಯೇ ಇಡುತ್ತಿದ್ದರು. ಆದರೆ, ಕಳೆದ ಐದು ವರ್ಷಗಳ ಹಿಂದೆ ಜಿಲ್ಲಾಡಳಿತವು ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಕಡಲತೀರದ ಬಳಿ ಮೀನುಗಾರರು ಕಟ್ಟಿಕೊಂಡಿದ್ದ ನೂರಾರು ಶೆಡ್​ಗಳನ್ನು ತೆರವುಗೊಳಿಸಿ ಬೃಹತ್ ಗಾತ್ರದ ಮೂರು ತಾತ್ಕಾಲಿಕ ಶೆಡ್ ನಿರ್ಮಿಸಿಕೊಟ್ಟಿತ್ತು. ಅದು ಕೂಡ ಇದೀಗ ತುಕ್ಕು ಹಿಡಿದು ಅಸ್ಥಿಪಂಜರದಂತಾಗಿದೆ.

ಹೌದು, ಕಾರವಾರದಲ್ಲಿ ಕಡಲ ಮಕ್ಕಳಿಗೆ ಮೀನುಗಾರಿಕೆಯೇ ಬದುಕು. ಈ ಹಿಂದಿನಿಂದಲೂ ಸಾಂಪ್ರದಾಯಿಕ ಮೀನುಗಾರರು ಕಡಲತೀರದಲ್ಲಿ ತಮ್ಮ ಬೋಟು, ಬಲೆಗಳನ್ನು ಇರಿಸಿ ಮೀನುಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ಕಡಲತೀರದಲ್ಲೇ ತಾತ್ಕಾಲಿಕವಾಗಿ ಶೆಡ್‌ಗಳನ್ನು ನಿರ್ಮಿಸಿ ತಮ್ಮ ಮೀನುಗಾರಿಕಾ ಸಲಕರಣೆಗಳನ್ನು ಇರಿಸಿಕೊಳ್ಳುತ್ತಿದ್ದರು. ಆದರೆ, ಕಳೆದ 2016ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಉಜ್ವಲ್ ಕುಮಾರ ಘೋಷ್ ಅವರು ಪ್ರವಾಸೋದ್ಯಮಕ್ಕೆ ಪೂರಕವಾಗುವಂತೆ ಅಭಿವೃದ್ಧಿ ನಡೆಸುವ ಉದ್ದೇಶದಿಂದ ಕಡಲತೀರದಲ್ಲಿ ಮೀನುಗಾರರು ನಿರ್ಮಿಸಿದ್ದ ಶೆಡ್‌ಗಳನ್ನ ಒತ್ತಾಯಪೂರ್ವಕವಾಗಿ ತೆರವುಗೊಳಿಸಿದ್ದರು. ಇದಕ್ಕೆ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾದ ನಂತರ ಜಿಲ್ಲಾಡಳಿತದಿಂದಲೇ ಸುಸಜ್ಜಿತ ಶೆಡ್‌ಗಳನ್ನು ನಿರ್ಮಿಸಿಕೊಡೋದಾಗಿ ಭರವಸೆ ನೀಡಿದ್ದರು. ಅದಾದ ಬಳಿಕ ನಗರದ ಬಿಲ್ಟ್ ವೃತ್ತದ ಬಳಿ ಕಡಲತೀರಕ್ಕೆ ಹೊಂದಿಕೊಂಡೇ ಮೂರು ಶೆಡ್‌ಗಳನ್ನು ನಿರ್ಮಿಸಿದ್ದರಾದರೂ ಅವು ಇದೀಗ ಸಂಪೂರ್ಣ ಶಿಥಿಲಾವಸ್ಥೆಯನ್ನು ತಲುಪಿವೆ. ಶೆಡ್ ಸಂಪೂರ್ಣ ಹಾಳಾಗಿ ಕೇವಲ ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ ಎಂದು ಮೀನುಗಾರ ಪ್ರಕಾಶ ಹರಿಕಂತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಿಷೇಧದ ನಡುವೆಯೂ ಜೋರಾದ ಬೆಳಕು ಮೀನುಗಾರಿಕೆ: ಇಲಾಖೆಯ ದಂಡಕ್ಕೆ ಡೋಂಟ್​ ಕೇರ್​!

ಬೇಡಿಕೆ ಈಡೇರದಿದ್ದರೆ ಉಗ್ರ ಹೋರಾಟ: ಕಡಲತೀರದಲ್ಲಿನ ಮೀನುಗಾರಿಕಾ ಶೆಡ್‌ಗಳನ್ನು ತೆರವುಗೊಳಿಸಿದ್ದ ವೇಳೆ ಜಿಲ್ಲಾಡಳಿತದಿಂದಲೇ ಶೆಡ್‌ಗಳನ್ನು ನಿರ್ಮಿಸಿಕೊಡುವ ಇಲ್ಲವೇ ಪರ್ಯಾಯ ಜಾಗವನ್ನು ನೀಡುವ ಭರವಸೆ ನೀಡಲಾಗಿತ್ತು. ಆದರೆ, ಹೆಸರಿಗೆ ಮಾತ್ರ ಎನ್ನುವಂತೆ ಕಡಲತೀರದ ಒಂದು ಮೂಲೆಯಲ್ಲಿ ಮಾತ್ರ ಮೂರು ಶೆಡ್‌ಗಳನ್ನು ನಿರ್ಮಿಸಿದ್ದು, ಅವೂ ಸಹ ಅವೈಜ್ಞಾನಿಕವಾಗಿ ನಿರ್ಮಿಸಿದ್ದರಿಂದಾಗಿ ಕಟ್ಟಿದ ಮೂರ್ನಾಲ್ಕು ವರ್ಷಗಳಲ್ಲೇ ಸಂಪೂರ್ಣ ಕಿತ್ತುಹೋಗಿವೆ. ಅಲ್ಲದೇ, ಟ್ಯಾಗೋರ್ ಕಡಲತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಸಾಂಪ್ರದಾಯಿಕ ಮೀನುಗಾರಿಕಾ ಬೋಟುಗಳಿದ್ದು, ಇರುವ ಮೂರು ಶೆಡ್‌ಗಳು ಯಾವುದಕ್ಕೂ ಸಾಲುತ್ತಿಲ್ಲ. ಹೀಗಾಗಿ, ಜಿಲ್ಲಾಡಳಿತ ಮೀನುಗಾರರಿಗೆ ಹೊಸದಾಗಿ ಶೆಡ್‌ಗಳನ್ನು ನಿರ್ಮಿಸಿಕೊಡಬೇಕು. ಇಲ್ಲವೇ ಜಾಗವನ್ನಾದರೂ ಲೀಸ್‌ಗೆ ನೀಡಬೇಕು. ಒಂದು ವೇಳೆ ಮೀನುಗಾರರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸೋದಾಗಿ ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಭಾರತದ ಅತಿದೊಡ್ಡ ಸರೋವರದಲ್ಲಿ ಮುಳುಗಿದ ದೋಣಿ.. ನಾಲ್ವರು ಮೀನುಗಾರರ ರಕ್ಷಣೆ

ಒಟ್ಟಾರೆ, ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಮೀನುಗಾರ ಶೆಡ್‌ಗಳನ್ನು ತೆರವುಗೊಳಿಸಿದ್ದ ಜಿಲ್ಲಾಡಳಿತ ನಂತರದ ದಿನಗಳಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳದಿರುವುದು ಇದೀಗ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮೀನುಗಾರರು ಜಿಲ್ಲಾಡಳಿತದ ಮೊರೆ ಹೋಗಿದ್ದು, ಈ ಬಗ್ಗೆ ಅಧಿಕಾರಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಕಾರವಾರ: ಬಾರದ ಸೀಮೆ ಎಣ್ಣೆಯಿಂದ ಬರಿದಾದ ಮೀನುಗಾರರ ಬದುಕು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.