ಭಟ್ಕಳ/ಉತ್ತರ ಕನ್ನಡ : ಭಟ್ಕಳ ತಾಲೂಕಿನ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ವತಿಯಿಂದ ನೇತ್ರಾಣಿ ಗುಡ್ಡದ ಸಮುದ್ರದಲ್ಲಿ 20 ಅಡಿ ಕನ್ನಡ ಬಾವುಟ ಹಾರಿಸುವ ಮೂಲಕ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯ್ತು.
ಸೋಮವಾರದಂದು ಬೆಳಗ್ಗೆ ನೇತ್ರಾಣಿ ಅಡ್ವೆಂಚರ್ಸ್ ಮಾಲೀಕರಾದ ಗಣೇಶ ಹರಿಕಾಂತ ನೇತೃತ್ವದ ತಂಡದ ಯುವಕರು ಓಷಿಯನ್ ಅಡ್ವೆಂಚರ್ಸ್ ಹೆಸರಿನ ಬೋಟ್ ಮೇಲೆ ಕನ್ನಡದ ಬಾವುಟ ಹಾರಿಸಿ ಕನ್ನಡ ಪ್ರೇಮ ಮೆರೆದಿದ್ದಾರೆ.
ಮುಂದುವರಿದು ಈ ತಂಡದ ಸ್ಕೂಬಾ ಡೈವರ್ಸ್ ಸೇರಿ 6 ಮಂದಿ ನೇತ್ರಾಣಿ ಗುಡ್ಡದ ಸಮೀಪದ ಸಮುದ್ರದೊಳಗಿಳಿದು 10 ಅಡಿ ಆಳದಲ್ಲಿ ಸುಮಾರು 20 ಅಡಿ ಉದ್ದದ ಕನ್ನಡದ ಬಾವುಟ ಹಾರಿಸಿ ಗಮನ ಸೆಳೆದಿದ್ದಾರೆ.
ಗಣೇಶ ಹರಿಕಾಂತ ಹಾಗೂ ನವೀನ ಕಾರವಾರ ಅವರು ಕನ್ನಡ ಬಾವುಟದ ಧ್ವಜ ಹಿಡಿದು ಸಮುದ್ರದೊಳಗೆ ಪ್ರದರ್ಶಿಸಿದರು. ಈ ತಂಡದಲ್ಲಿ ಹರೀಶ ದುರ್ಗೇಕರ್, ಮೋಹಿನ್ ಸೇರಿ ಎರಡು ಮಂದಿ ಸ್ಕೂಬಾ ಡೈವರ್ಸ್ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಗಡಿ ಭಾಗ ಮಂಗಸೂಳಿಯಲ್ಲಿ 65 ವರ್ಷದ ನಂತರ ಮೊದಲ ಬಾರಿಗೆ ಕರ್ನಾಟಕ ರಾಜೋತ್ಸವ ಆಚರಣೆ