ಶಿರಸಿ: ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಕಾರ್ಯಕರ್ತರು,ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾಗಿರುವ ಕಾಗೇರಿ, ಕೆಲ ದಿನಗಳ ಹಿಂದೆ ಸ್ಪೀಕರ್ ಆಗಿ ಆಯ್ಕೆಯಾಗಿದ್ದರು. ಸ್ಪೀಕರ್ ಆದ ನಂತರ ಮೊದಲ ಬಾರಿಗೆ ಶಿರಸಿಯಲ್ಲಿರುವ ಸಭಾಧ್ಯಕ್ಷರ ಕಾರ್ಯಾಲಯಕ್ಕೆ ಆಗಮಿಸಿದ್ದ ಅವರಿಗೆ ಹೂಮಾಲೆ ಹಾಕಿ, ಫಲ-ಪುಷ್ಪಗಳನ್ನು ನೀಡಿ ಅಭಿನಂದಿಸಿದರು.
ಸ್ಪೀಕರ್ ಆಗಮನದ ಹಿನ್ನಲೆ, ಶಿಷ್ಠಾಚಾರದಂತೆ ಎಲ್ಲಾ ಇಲಾಖೆಗಳ ಸಿಬ್ಬಂದಿಗಳು ಕಾರ್ಯಾಲಯಕ್ಕೆ ಆಗಮಿಸಿ, ಕಾಗೇರಿ ಅವರಿಗೆ ಶುಭಕೋರಿದರು.