ETV Bharat / state

ನಳೀನ್‌ಕುಮಾರ್‌ ಕಟೀಲ್​ ಪಕ್ಷದ ಶಿಸ್ತನ್ನು ಕಾಪಾಡಬೇಕು.. ಜೆಡಿಎಸ್‌ ಮುಖಂಡ ಎನ್‌ ಹೆಚ್‌ ಕೋನರೆಡ್ಡಿ

ಇಂದು ಯಲ್ಲಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಚೈತ್ರಾಗೌಡ ಪರ ನಾಮಪತ್ರ ಸಲ್ಲಿಕೆಗೆ ಜೆಡಿಎಸ್ ಮುಖಂಡ ಕೋನರೆಡ್ಡಿ ಸಾಥ್​ ನೀಡಿದರು.

Konareddy, ಕೋನ ರೆಡ್ಡಿ
author img

By

Published : Nov 18, 2019, 9:48 PM IST

ಕಾರವಾರ : ತಮ್ಮದು ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್ ಕಟೀಲು ಇಂದು ಆಪರೇಷನ್ ಕಮಲ ಮಾಡಿ ಅನರ್ಹರನ್ನು ಕೈಬಿಟ್ಟಿರುವುದನ್ನು ನೋಡಿದರೆ ಬಿಜೆಪಿ ಏನು ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಜೆಡಿಎಸ್ ಮುಖಂಡ ಎನ್‌ ಹೆಚ್‌ ಕೋನರೆಡ್ಡಿ ಹೇಳಿದ್ದಾರೆ.

ಜೆಡಿಎಸ್ ಮುಖಂಡ ಎನ್‌ ಹೆಚ್‌ ಕೋನರೆಡ್ಡಿ..

ಇಂದು ಯಲ್ಲಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಪರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಅವರು, ನಳೀನ್ ಕುಮಾರ್ ಅವರು ಅನರ್ಹರು ನಮ್ಮೊಂದಿಗೆ ಇದ್ದಾರೆ ಎನ್ನುತ್ತಾರೆ. ಆಪರೇಷನ್ ಕಮಲಕ್ಕೆ ಒಳಗಾಗಿ ಅನರ್ಹತೆಗೊಳಗಾದ ಶಂಕರ್ ಹಾಗೂ ರೋಶನ್ ಬೇಗ್​ ಪರಿಸ್ಥಿತಿ ಏನಾಗಿದೆ ಎಂಬುದು ಜನಕ್ಕೆ ಗೊತ್ತಾಗಿದೆ. ಕಟೀಲ್​ ಅವರು ಬಿಜೆಪಿ ಪಕ್ಷದ ಶಿಸ್ತನ್ನು ಕಾಪಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

ಆಪರೇಷನ್ ಕಮಲದಿಂದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವಂತಾಯಿತು. ಯಾವುದೇ ಪಕ್ಷದಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನ‌ಮಾನ ನೀಡಿಲ್ಲ. ಆದರೆ, ನಮ್ಮ ಪಕ್ಷ ಯಲ್ಲಾಪುರದಲ್ಲಿ ಅಭ್ಯರ್ಥಿ ಹಾಕಿದ್ದು, ಇಲ್ಲಿನ ಜನರು ಗೆಲ್ಲಿಸುವ ವಿಶ್ವಾಸವಿದೆ. ಈ ಚುನಾವಣೆಯ ಮೂಲಕ ರಾಜ್ಯದ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

Intro:

Body:ಕಾರವಾರ: ತಮ್ಮದು ಶಿಸ್ತಿನ ಪಕ್ಷ ಎಂದು ಹೇಳುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ಇಂದು ಆಪರೇಷನ್ ಕಮಲ್ ಮಾಡಿ ಅನರ್ಹರನ್ನು ಕೈಬಿಟ್ಟಿರುವುದನ್ನು ತಿಳಿದುಕೊಂಡರೇ ಬಿಜೆಪಿ ಏನು ಮಾಡುತ್ತಿದೆ ಎಂಬುದು ತಿಳಿಯುತ್ತದೆ ಎಂದು ಜೆಡಿಎಸ್ ಮುಖಂಡ ಕೋನರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಯಲ್ಲಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಪರ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಅವರು, ನಳೀನ್ ಕುಮಾರ್ ಅವರು ಅನರ್ಹರು ನಮ್ಮೊಂದಿಗೆ ಇದ್ದಾರೆ ಎನ್ನುತ್ತಾರೆ. ಆದರೆ ಅವರು ಆಪರೇಶನ್ ಕಮಲ ಮಾಡಿದ್ದಾರೆ. ಈಗಾಗಲೇ ಆಪರೇಶನ್ ಮಾಡಿ ಅನರ್ಹತೆಗೊಳಗಾದ ಶಂಕರ್ ಹಾಗೂ ರೋಶನ್ ಬೇಗ ಪರಿಸ್ಥಿತಿ ಏನಾಗಿದೆ ಎಂಬುದು ಜನಕ್ಕೆ ಗೊತ್ತಾಗಿದೆ. ಇಂತವರಿಗೆ ರಾಜ್ಯ ಜನ ಚುನಾವಣೆ ಮೂಲಕ‌ ಉತ್ತಮ ಸಂದೇಶ ನೀಡಬೇಕು ಎಂದು ಹೇಳಿದರು.
ಇನ್ನು ಉಪಚುನಾವಣೆಯಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನ‌ಮಾನ ನೀಡಿಲ್ಲ. ಆದರೆ ನಮ್ಮ‌ಪಕ್ಷ ಯಲ್ಲಾಪುರದಲ್ಲಿ ಅಭ್ಯರ್ಥಿ ಹಾಕಿದ್ದು, ಇಲ್ಲಿನ ಜನರು ಗೆಲ್ಲಿಸುವ ವಿಶ್ವಾಸವಿದೆ ಎಂದು ಹೇಳಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.