ETV Bharat / state

ಉತ್ತರಕನ್ನಡಕ್ಕೂ ಹೈ-ಕ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿ.. ಬಿ ಕೆ ಹರಿಪ್ರಸಾದ್​ ಬಳಿ ಜನಶಕ್ತಿ ವೇದಿಕೆ ಒತ್ತಾಯ

author img

By

Published : Jul 31, 2020, 7:18 PM IST

ಉತ್ತರಕನ್ನಡ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡಿರುವ ಸೌಲಭ್ಯಗಳನ್ನು ಕೊಡಿಸಲು ರಾಜ್ಯಸಭೆಯಲ್ಲಿ ಪ್ರಯತ್ನಿಸುವಂತೆ ಜನಶಕ್ತಿ ವೇದಿಕೆ ಪದಾಧಿಕಾರಿಗಳು ವಿಧಾನಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ಒತ್ತಾಯಿಸಿದ್ದಾರೆ..

Janashakthi Forum  Appeal To Assembly Member  BK Hariprasad
ಉತ್ತರಕನ್ನಡಕ್ಕೂ ಹೈ-ಕ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿ...ಬಿ.ಕೆ.ಹರಿಪ್ರಸಾದ್​ ಬಳಿ ಜನಶಕ್ತಿ ವೇದಿಕೆ ಒತ್ತಾಯ

ಕಾರವಾರ : ಸೀಬರ್ಡ್, ಕೈಗಾ ಸೇರಿ ಹತ್ತಾರು ಯೋಜನೆಗಳಿಗೆ ಸರ್ವಸ್ವವನ್ನೂ ತ್ಯಾಗ ಮಾಡಿರುವ ಉತ್ತರಕನ್ನಡ ಜಿಲ್ಲೆ ಸಾಕಷ್ಟು ಹಿಂದುಳಿದಿದೆ. ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡಿರುವ ಸೌಲಭ್ಯಗಳನ್ನು ಕೊಡಿಸಲು ರಾಜ್ಯಸಭೆಯಲ್ಲಿ ಪ್ರಯತ್ನಿಸುವಂತೆ ಜನಶಕ್ತಿ ವೇದಿಕೆ ಪದಾಧಿಕಾರಿಗಳು ವಿಧಾನಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ಒತ್ತಾಯಿಸಿದರು.

ಉತ್ತರಕನ್ನಡಕ್ಕೂ ಹೈ-ಕ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಿ.. ಬಿ ಕೆ ಹರಿಪ್ರಸಾದ್​ ಬಳಿ ಜನಶಕ್ತಿ ವೇದಿಕೆ ಒತ್ತಾಯ

ಕಾರವಾರಕ್ಕೆ ಆಗಮಿಸಿದ್ದ ಅವರನ್ನು ಭೇಟಿಯಾದ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು, ಉತ್ತರಕನ್ನಡ ಹಲವು ಯೋಜನೆಗಳಿಗಾಗಿ ತನ್ನನ್ನು ತಾನು ತ್ಯಾಗ ಮಾಡಿಕೊಂಡ ಜಿಲ್ಲೆ. ಸೀಬರ್ಡ್, ಕೈಗಾ ಅಣು ವಿದ್ಯುತ್ ಸ್ಥಾವರ, ಕೊಂಕಣ ರೈಲ್ವೆ, ವಿಮಾನ ನಿಲ್ದಾಣ, ಹೆದ್ದಾರಿ, ಬಂದರು ನಿರ್ಮಾಣ ಸೇರಿ ವಿವಿಧ ಯೋಜನೆಗಳಿಗೆ ನೆಲ, ಜಲವನ್ನು ಈ ಜಿಲ್ಲೆ ತ್ಯಾಗ ಮಾಡಿದೆ. ಈಗಾಗಲೇ ಅಲಗೇರಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಮತ್ತೆ ಭೂಮಿ ತ್ಯಾಗ ಮಾಡುವ ಪರಿಸ್ಥಿತಿ ಬಂದಿದೆ. ನಮ್ಮಲ್ಲಿ ಈಗಾಗಲೇ ಇರುವ ಜನವಸತಿ ಭೂಮಿಯೇ ಕಡಿಮೆ. ಅಲ್ಲದೇ, ಈ ಜಿಲ್ಲೆಯು ರಾಜ್ಯದ ಗಡಿಭಾಗವಾಗಿದೆ. ಹೀಗಾಗಿ ನಮ್ಮ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡಿರುವ ಸೌಲಭ್ಯಗಳನ್ನೂ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ತಾವು ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಇದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬೇಕು. ಇಲ್ಲಿ ಯಾವುದೇ ಯೋಜನೆಗಳು ಬಂದರೂ ಸ್ಥಳೀಯರಿಗೆ ಉದ್ಯೋಗ ನೀಡಲಾಗುತ್ತದೆ ಎಂದು ಮೌಖಿಕವಾಗಿ ನಂಬಿಸಲಾಗುತ್ತದೆ. ಆದರೆ, ಇಂತಿಷ್ಟು ಪಟ್ಟು ಜಿಲ್ಲೆಯವರಿಗೆ, ಸ್ಥಳೀಯರಿಗೆ ನೀಡುತ್ತೇವೆ ಎಂದು ಮೀಸಲಿಡಿ. ಭೂಮಿ ಕಳೆದುಕೊಂಡವರಿಗೆ ಇಂತಿಷ್ಟು ಪಾಲು, ಸ್ಥಳೀಯರಿಗೆ ಇಂತಿಷ್ಟು ಪಾಲು ಎಂದು ಶೇಕಡಾವಾರು ಉದ್ಯೋಗ ಮೀಸಲಾತಿ ಇಟ್ಟು, ಲಿಖಿತವಾರು ನಮಗೆ ಭರವಸೆ ನೀಡಬೇಕು. ಈ ಬಗ್ಗೆಯೂ ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದಾರೆ.

ಗಡಿಭಾಗವಾದ ಇಲ್ಲಿ ಯಾವುದೇ ಕೈಗಾರಿಕೆಗಳಿಲ್ಲ. ಹೀಗಾಗಿ ಕೈಗಾರಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಸಲು ಕ್ರಮವಹಿಸಬೇಕು‌. ವಿದ್ಯುತ್‌ನ ಕಡಿಮೆ ದರದಲ್ಲಿ 24 ಗಂಟೆ ನೀಡುವ ವ್ಯವಸ್ಥೆ ಆಗಬೇಕು. ನಮ್ಮಲ್ಲೇ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಹೀಗಾಗಿ, ಇದು ನಮ್ಮಲ್ಲೇ ಬಳಕೆ ಆಗಬೇಕು‌. ಕೈಗಾರಿಕೆ ಸ್ಥಾಪಿಸುವವರಿಗೆ ಇಂತಿಷ್ಟು ವರ್ಷ ತೆರಿಗೆ ರಿಯಾಯಿತಿ ನೀಡಬೇಕು. ಕಾರವಾರದ ಮುಡಗೇರಿಯ ಕೈಗಾರಿಕಾ ವಸಾಹತು ಸ್ಥಾಪನೆಗೆ ಕಾದಿರಿಸಿಟ್ಟಿರುವ ಜಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ರೈತರಿಗೆ ಪರಿಹಾರ ನೀಡಿಲ್ಲ. ಇದರಿಂದಾಗಿ ಇಲ್ಲಿನ ಯುವಜನತೆಗೆ ಉದ್ಯೋಗ ಇಲ್ಲದಾಗಿದೆ ಎಂದು ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿ ಕೆ ಹರಿಪ್ರಸಾದ್, ಹೈದರಾಬಾದ್ ಕರ್ನಾಟಕದ ಸಲುವಾಗಿ ಒಂದು ವಿಸ್ತೃತ ವರದಿ ತಯಾರಿಸಿ, ಅದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ ಕೊಡಿ. ಖಂಡಿತವಾಗಿಯೂ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.