ETV Bharat / state

ಶಿರಸಿ ಪೊಲೀಸರಿಂದ ಅಂತರ್ ಜಿಲ್ಲಾ ದರೋಡೆಕೋರರ ಬಂಧನ - Shirsi robber case

ಶಿರಸಿ ತಾಲೂಕಿನ ಬನವಾಸಿ ಬಳಿ ಚಾಕು ಚೂರಿ ತೋರಿಸಿ ಲಕ್ಷಾಂತರ ರೂಪಾಯಿ ಎಗರಿಸಿದ್ದ ದರೋಡೆಕೋರನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.

Inter district robbers arrested by Shirsi police

author img

By

Published : Nov 26, 2022, 7:29 PM IST

ಶಿರಸಿ: ಕಳೆದ ತಿಂಗಳು ಶಿರಸಿ ತಾಲೂಕಿನ ಬನವಾಸಿ ಬಳಿ ಚಾಕು ಚೂರಿ ತೋರಿಸಿ ಲಕ್ಷಾಂತರ ರೂಪಾಯಿ ಎಗರಿಸಿದ್ದ ದರೋಡೆಕೋರನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 19 ರಂದು ಅಂಡಗಿ ಬಳಿ ಹಸನ್ ಖಾನ್ ಎಂಬುವವರಿಗೆ ಸೇರಿದ 50 ಲಕ್ಷ ರೂಪಾಯಿಗಳನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿ ಹಣದೋಚಿ ಪರಾರಿಯಾಗಿದ್ದರು, ಕಾರಿಗೆ ಅಳವಡಿಸಿದ್ದ ಜಿಪಿಎಸ್ ಟ್ರಾಕರ್ ಸಹಾಯದಿಂದ ದರೊಡೆ ನಡೆಸಿದ್ದರು. ಈ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಂತರ ಈ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಶನಿವಾರದಂದು 9 ಜನ ಅಂತರ್ ಜಿಲ್ಲಾ ದರೊಡೆಕೊರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆಕೋರರಿಂದ 13 ಲಕ್ಷ ರೂ ಹಣವನ್ನು ಜಪ್ತಿ ಮಾಡಲಾಗಿದೆ.

ಸಾಗರದ ಆಸಿಫ್ ಸತ್ತಾರ್, ಅಬ್ದುಲ್ ಸತ್ತಾರ್, ಮನ್ಸೂರ್ ಜಾಪರ್ ಖಾನ್, ನೆಜ್ಜೂರಿನ ಅಜಿಮುಲ್ಲಾ ಸಾಬ್,ಭಟ್ಕಳದ ಅಬ್ದುಲ್ ರೆಹಮಾನ್ ವಟರಾಗ, ಚಿಕ್ಕಮಗಳೂರಿನ ರಿಯಾಜ್ ಫಯಾಜ್, ವಿಶ್ವನಾಥ ಶೆಟ್ಟಿ, ಮನೋಹರ ಶೆಟ್ಟಿ ಹಾಗೂ ತೀರ್ಥಹಳ್ಳಿಯ ಇಕ್ಬಾಲ್ ಅಬ್ದುಲ್ ಕೆ, ಬಂಧಿತ ಆರೋಪಿಗಳು.

ಬಂಧಿತರಿಂದ 13.82 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಒಂದು ರಿಡ್ಜ್ ಹಾಗೂ ಒಂದು ಓಮಿನಿ ಮತ್ತು 12 ಮೊಬೈಲ್ ಹಾಗೂ ಒಂದು ಜಿ.ಪಿ.ಎಸ್.ಟ್ರಾಕರ್ ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳ ಪತ್ತೆ ಮತ್ತು ನಗದು ಜಪ್ತು ಬಾಕಿ ಇದ್ದು ತನಿಖೆ ಮುಂದುವರೆದಿದೆ.

ಇದನ್ನೂ ಓದಿ:ಸಾಲ ಮರುಪಾವತಿಗೆ ಕಿತ್ತಾಟ: ಕೋಪದಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.