ETV Bharat / state

ಕಾರವಾರ ಕದಂಬ ನೌಕಾನೆಲೆಗೆ ಐಎನ್ಎಸ್ ವಿಕ್ರಾಂತ್: ಮೊದಲ ಬಾರಿಗೆ ಆಗಮಿಸಿದ ಸ್ವದೇಶಿ ನಿರ್ಮಿತ ನೌಕೆ - ಸ್ವದೇಶಿ ನಿರ್ಮಿತ ನೌಕೆ

ಮೊದಲ ಬಾರಿಗೆ ಕಾರವಾರದ ಕದಂಬ ನೌಕಾಲೆನೆಗೆ ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಆಗಮಿಸಿದೆ.

INS Vikrant
ಐಎನ್ಎಸ್ ವಿಕ್ರಾಂತ್ ನೌಕೆ
author img

By

Published : May 22, 2023, 1:55 PM IST

ಕಾರವಾರ (ಉತ್ತರ ಕನ್ನಡ): ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಇದೇ ಮೊದಲ ಬಾರಿಗೆ ಕಾರವಾರದ ಕದಂಬ ನೌಕಾಲೆನೆಗೆ ಆಗಮಿಸಿದೆ. ಕಳೆದ ವರ್ಷ ಕೊಚ್ಚಿನ್ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಂಡಿದ್ದ ಭಾರತದ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಐಎನ್‌ಎಸ್ ವಿಕ್ರಾಂತ್ ನೌಕೆ ಇದೇ ಮೊದಲ ಬಾರಿಗೆ ಕದಂಬ ನೌಕಾನೆಲೆಯ ಹಡಗು ತಂಗುದಾಣಕ್ಕೆ ಬಂದು ಸೇರಿದೆ.

ಐಎನ್‌ಎಸ್ ವಿಕ್ರಮಾದಿತ್ಯದ ಜೊತೆಗೆ ಐಎನ್‌ಎಸ್ ವಿಕ್ರಾಂತ್ ವಿಮಾನವಾಹಕ ನೌಕೆಯನ್ನು ಕಾರವಾರದ ಕದಂಬ ನೌಕಾನೆಲೆಯಲ್ಲಿ ಎರಡು ಪ್ರತ್ಯೇಕ ನಿಲ್ದಾಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ 11 ಪ್ರಮುಖ ಯುದ್ಧ ನೌಕೆಗಳು ಇಲ್ಲಿರುವುದು ಹೊಸ ಮೈಲುಗಲ್ಲಿಗೆ ಸಾಕ್ಷಿಯಾಗಿದೆ.

ನೌಕಾಪಡೆ ಇತಿಹಾಸದಲ್ಲಿಯೇ ಅತೀ ದೊಡ್ಡ ಹಡಗು ಐಎನ್‌ಎಸ್ ವಿಕ್ರಾಂತ್: ಐಎನ್‌ಎಸ್ ವಿಕ್ರಾಂತ್ ಭಾರತದ ಪ್ರಮುಖ ಕೈಗಾರಿಕಾ ಸಂಸ್ಥೆಗಳು ಮತ್ತು 100 ಕ್ಕೂ ಹೆಚ್ಚು ಎಂಎಸ್‌ಎಂಇಗಳು ಒದಗಿಸಿದ ದೇಶೀಯ ಉಪಕರಣಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ. ಇದು ಭಾರತದ ನೌಕಾಪಡೆ ಇತಿಹಾಸದಲ್ಲಿ ನಿರ್ಮಿಸಲಾದ ಅತಿದೊಡ್ಡ ಹಡಗು ಮತ್ತು ಅತ್ಯಾಧುನಿಕ ಯಾಂತ್ರೀಕೃತ ವೈಶಿಷ್ಟ್ಯಗಳನ್ನು ಹೊಂದಿದೆ.

ಕೇರಳದ ಕೊಚ್ಚಿಯ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್​ನಲ್ಲಿ ನಿರ್ಮಿಸಲಾಗಿರುವ ಐಎನ್‌ಎಸ್ ವಿಕ್ರಾಂತ್ 40,000 ಟನ್ ತೂಕ ಹೊಂದಿದ್ದು, 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲವಿದೆ. ಐಎನ್ಎಸ್ ವಿಕ್ರಾಂತ್ ನಿವೃತ್ತವಾದ ಬಳಿಕ ಮತ್ತು ಐಎನ್ಎಸ್ ವಿಕ್ರಮಾದಿತ್ಯ ಆಗಮನದ ನಂತರ 1997ರ ಜನವರಿಯಲ್ಲಿ ಈ ಸ್ವದೇಶಿ ವಿಕ್ರಾಂತ್ ನಿರ್ಮಿಸುವ ಯೋಜನೆಯನ್ನು ಯೋಜಿಸಿ ಕಳೆದ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಾರ್ಪಣೆಗೊಳಿಸಲಾಗಿತ್ತು.

ನೌಕೆಯನ್ನು ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ ವಿನ್ಯಾಸಗೊಳಿಸಿದ್ದು, ಇದು ವಿಮಾನವಾಹಕ ನೌಕೆಯನ್ನು ವಿನ್ಯಾಸಗೊಳಿಸುವ ಮೊದಲ ಯೋಜನೆಯಾಗಿದೆ. ಇನ್ನು ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿ 13 ಸಾವಿರ ಕೋಟಿ ವೆಚ್ಚದಲ್ಲಿ ಸೀಬರ್ಡ್ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿದೆ.

ಇದರಲ್ಲಿ ಹೆಚ್ಚುವರಿ ಜಟ್ಟಿಗಳ ನಿರ್ಮಾಣ, ಯುದ್ಧ ಹಡಗಳನ್ನು ರಿಪೇರಿಗೆ ಜಾಗ, ನೌಕಾ ವಿಮಾನ ನಿಲ್ದಾಣ ಮುಂತಾದ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಸೀಬರ್ಡ್ 2ಎ ಯೋಜನೆ ಸಂಪೂರ್ಣ ಮುಕ್ತಾಯವಾದ ಬಳಿಕ ಇಲ್ಲಿ ಸುಮಾರು 30 ಯುದ್ಧ ಹಡಗುಗಳು ಕಾಯಂ ನೆಲೆ ಹೊಂದಲಿವೆ. 2ಬಿ ಮುಕ್ತಾಯದ ಹೊತ್ತಿಗೆ 50 ಹಡಗುಗಳು ಬಂದು ನಿಲ್ಲಲಿವೆ.

ನವಮಂಗಳೂರಿಗೆ ಆಗಮಿಸಿತ್ತು 7ನೇ ಕ್ರೂಸ್​ ಹಡಗು MV INSIGNIA: ಈ ತಿಂಗಳ 13 ರಂದು ನವಮಂಗಳೂರು ಬಂದರಿಗೆ ಈ ವರ್ಷದ ಏಳನೇ ಕ್ರೂಸ್ ಹಡಗು MV INSIGNIA (ಎಂವಿ ಇನ್ಸ್​ಗ್ನಿಯ) ಆಗಮಿಸಿತ್ತು. 466 ಪ್ರಯಾಣಿಕರು ಮತ್ತು 399 ಸಿಬ್ಬಂದಿ ಹೊತ್ತ ಮಾರ್ಷಲ್ ಐಲ್ಯಾಂಡ್ ಧ್ವಜದ ಹಡಗು ನವಮಂಗಳೂರಿನ ಬಂದರಿನ ಬರ್ತ್ ನಂ. 04ರಲ್ಲಿ ಲಂಗರು ಹಾಕಿತ್ತು.

ಈ ಹಡಗಿನ ಒಟ್ಟಾರೆ ಉದ್ದ 180.05 ಮೀಟರ್ ಆಗಿದ್ದು, 30,277 ಒಟ್ಟು ಟನ್ ಭಾರ ಸಾಗಿಸುವ ಸಾಮರ್ಥ್ಯ ಹೊಂದಿದೆ. ನಾರ್ವೇಜಿಯನ್ ಕ್ರೂಸ್ ಲೈನ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಂಗಸಂಸ್ಥೆ ಮಿಯಾಮಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಓಷಿಯಾನಿಯಾ ಕ್ರೂಸಸ್ ಒಡೆತನದಲ್ಲಿ ಈ ಹಡಗು ಇದೆ.

ಇದನ್ನೂ ಓದಿ: 138 ಚಕ್ರದ ಬೃಹತ್ ವಾಹನ ಸಂಚಾರ; ಅಂಕೋಲಾ ಬಳಿ ಬಿರುಕು ಬಿಟ್ಟ ಸೇತುವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.