ETV Bharat / state

'ದೇಶದ ಕಾನೂನೇ ಸರಿಯಿಲ್ಲ, ಸಾಮಾಜಿಕ ಜಾಲತಾಣ ನಿಂದಕರ ವಿರುದ್ಧ ಕೇಸು ಕೊಟ್ಟರೂ ಪ್ರಯೋಜನವಾಗುತ್ತಿಲ್ಲ': ಸಚಿವ ಮಂಕಾಳು ವೈದ್ಯ - ವಿರೋಧ ಪಕ್ಷದ ನಾಯಕ

ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.

Minister Mankal Vaidya spoke to reporters.
ಸುದ್ದಿಗಾರರೊಂದಿಗೆ ಸಚಿವ ಮಂಕಾಳು ವೈದ್ಯ ಮಾತನಾಡಿದರು.
author img

By

Published : Jun 30, 2023, 4:38 PM IST

Updated : Jun 30, 2023, 5:17 PM IST

ಸುದ್ದಿಗಾರರೊಂದಿಗೆ ಸಚಿವ ಮಂಕಾಳ ವೈದ್ಯ ಮಾತನಾಡಿದರು.

ಕಾರವಾರ: ಈ ದೇಶದ‌ ಕಾನೂನೇ ಸರಿಯಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದವರ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ್ಳದೇ ಅಸಹಾಯಕರಾಗಿದ್ದಾರೆ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು.

ಕಾರವಾರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಗರಿಗೆ ಕೆಲಸ ಇಲ್ಲ. ಸಾಮಾಜಿಕ ಜಾಲಾತಾಣದಲ್ಲಿ ಕೆಟ್ಟದಾಗಿ ಟೀಕೆ ಮಾಡುತ್ತಾರೆ. ಅವರ ಮನಸ್ಥಿತಿಯೇ ಸರಿಯಿಲ್ಲ. ನಾನೇ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಐದು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರೂ ಯಾವುದು ಪ್ರಯೋಜನವಾಗಿಲ್ಲ ಎಂದರು.

ದೇಶ ಕಾನೂನು ತಂದಿದೆ. ಕೋರ್ಟ್ ಅದನ್ನು ತಡೆ ಹಿಡಿದಿದೆ. ಇದರಿಂದ ಪೊಲೀಸ್ ಇಲಾಖೆ‌ಯೂ ಸಹ ಅಸಹಾಯಕವಾಗಿದೆ. ಆದರೆ ಹೊಸ ಕಾನೂನನ್ನು ತಂದು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಬಿಜೆಪಿಯವರು ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ. ರಾಜ್ಯದಲ್ಲಿ ಐದು ವರ್ಷ ಕೇಂದ್ರದಲ್ಲಿ ಹತ್ತು ವರ್ಷ ಕೇಂದ್ರದಲ್ಲಿ ಅಧಿಕಾರ ಕೊಟ್ಟರೂ ಯಾವುದೇ ಆಭಿವೃದ್ಧಿ ಮಾಡಿಲ್ಲ. ಆದರೆ ಆಗಬಾರದ್ದನ್ನು ಹೆಚ್ಚಾಗಿ ಮಾಡಿದ್ದಾರೆ. ಬಿಜೆಪಿಗರಿಗೆ ರಾಜಕಾರಣವೇ ಮಾಡಲು ಬರುವುದಿಲ್ಲ. ಅವರಿಗೆ ವಿರೋಧ ಪಕ್ಷದ ನಾಯಕರನ್ನೂ ಮಾಡಲು ಸಾಧ್ಯವಾಗಿಲ್ಲ. ರಾಜ್ಯ ಕಳೆದುಕೊಂಡ ಮೇಲೆ ಇನ್ನೂ ಬಿಜೆಪಿಗರು ಒಂದಾಗಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನಿಂದ ಬಂದವರಿಂದ ಶಿಸ್ತು ಹಾಳಾಗುತ್ತದೆ ಎಂದು ಈಗ ಬಿಜೆಪಿಗರು ಹೇಳುತ್ತಾರೆ. ಆದರೆ ಶಿಸ್ತು ಹೊಂದಿದ್ದ ಬಿಜೆಪಿಯವರು ಹದಿನಾಲ್ಕು ಜನ ಕಾಂಗ್ರೆಸ್ ಶಾಸಕರನ್ನು ಏಕೆ ತೆಗೆದುಕೊಂಡರು?. ಕಾಂಗ್ರೆಸ್‌ನಿಂದ ಹೋದವರು ಶಿಸ್ತು ತರಲು ಪ್ರಯತ್ನ ಮಾಡಿದರು. ಆದರೆ ಅದು ಆಗಲಿಲ್ಲ. ಅದಕ್ಕೆ ವಾಪಾಸ್ ಕಾಂಗ್ರೆಸ್‌ನತ್ತ ಬರುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಮುಂಗಾರು ವೇಳೆ ಕಡಲ್ಕೊರೆತ ತಡೆಗೆ ಕ್ರಮ: ಕರಾವಳಿ ಭಾಗದಲ್ಲಿ ಕಡಲ ಕೊರೆತ ಹೆಚ್ಚಾಗಿದೆ. ಮುಂಗಾರು ವೇಳೆ ಕಡಲ ಕೊರೆತ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಮೀನುಗಾರರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಡಲ ಕೊರೆತ ಆಗದಂತೆ ಕ್ರಮ ವಹಿಸುತ್ತೇವೆ. 300 ಕಿ.ಮೀ ದೂರ ಕಡಲ ವ್ಯಾಪ್ತಿ ಇದೆ. ಎಲ್ಲಿ ಹೆಚ್ಚು ಕಡಲ ಕೊರೆತ ಇದೆಯೋ ಅದನ್ನು ಗುರುತಿಸುವ ಕೆಲಸ ಆಗಿದೆ. ಕಾರವಾರ, ಮಲ್ಪೆ, ಬಂದರು ಅಭಿವೃದ್ದಿ ಕಾರ್ಯ ಅರ್ಧಕ್ಕೆ ನಿಂತಿದೆ. ಅರ್ಧ ನಿಂತಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಕೆಲಸವನ್ನು ಮೊದಲು ಮಾಡಲಾಗುವುದು ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಮತ್ತು ಬಂದರು ಇಲಾಖೆ ಆರಂಭಕ್ಕೆ ಪರಿಶೀಲನೆ ಮಾಡಿದ್ದು, ಕೆಲಸ ಪ್ರಾರಂಭ ಮಾಡಿದ್ದೇನೆ. ಎಲ್ಲೆಡೆ ಹೋಗಿ ಮೀನುಗಾರರ ಸಮಸ್ಯೆ ಆಲಿಸಿ,‌ ಅದನ್ನು ಬಗೆಹರಿಸಲು ಪ್ರಯತ್ನ ಮಾಡುವೆ. ರಾಜ್ಯದ ಎಲ್ಲ ಜಿಲ್ಲೆಯಲ್ಲೂ, ಅದರಲ್ಲೂ ವಿಶೇಷವಾಗಿ ಮೂರು ಜಿಲ್ಲೆಗಳಲ್ಲಿ ಮೀನುಗಾರರಿಗೆ ಯಾವುದೇ ಸಮಸ್ಯೆಗಳು ಆಗದಂತೆ ಸಂದರ್ಭಕ್ಕೆ ಅನುಗುಣವಾಗಿ ಯೋಜನೆಗಳನ್ನು ತರುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಇದನ್ನೂಓದಿ: Annabhagya Scheme: ನಾಳೆಯಿಂದಲೇ ಅನ್ನಭಾಗ್ಯದ ಹಣ ಫಲಾನುಭವಿಗಳ ಖಾತೆಗೆ ಜಮೆ... ಸಚಿವ ಕೆ ಹೆಚ್ ಮುನಿಯಪ್ಪ

Last Updated : Jun 30, 2023, 5:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.