ಶಿರಸಿ: ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಜಾನಪದ ಕಲಾ ತಂಡಗಳ ಮೆರವಣಿಗೆಯೊಂದಿಗೆ ಪ್ರಸಿದ್ಧ ಬನವಾಸಿ ಕದಂಬೋತ್ಸವ (ಕದಂಬ ಜ್ಯೋತಿ) ಉದ್ಘಾಟನಾ ಸಮಾರಂಭ ಇಂದು ವಿಜೃಂಭಣೆಯಿಂದ ನೆರವೇರಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಗುಡ್ನಾಪುರದ ಬಂಗಾರೇಶ್ವರ ದೇವಸ್ಥಾನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ಕದಂಬ ಜ್ಯೋತಿ ಉದ್ಘಾಟಿಸಿದರು.
ಬಂಗಾರೇಶ್ವರ ದೇವಾಲಯದಿಂದ ಹೊರಟ ಕದಂಬ ಜ್ಯೋತಿ ಮೆರವಣಿಗೆ ಗುಡ್ನಾಪುರದ ವಿವಿಧೆಡೆ ಸಂಚರಿಸಿ ರಾಣಿ ನಿವಾಸ ತಲುಪಿತು.