ಕಾರವಾರ : ಜಿಲ್ಲೆಯಲ್ಲಿ ಇಂದು 85 ಮಂದಿ ಸೋಂಕಿನಿಂದ ಗುಣಮುಖರಾಗಿದ್ರೆ, 47 ಸೋಂಕಿತರು ಪತ್ತೆಯಾಗಿದ್ದಾರೆ.
ಹಳಿಯಾಳದಲ್ಲಿ 15, ಶಿರಸಿ 9, ಕಾರವಾರ 8, ಹೊನ್ನಾವರ, ಯಲ್ಲಾಪುರ ತಲಾ 5, ಭಟ್ಕಳ 4, ಸಿದ್ದಾಪುರದಲ್ಲಿ ಒಬ್ಬರಿಗೆ ಇಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಹಳಿಯಾಳದಲ್ಲಿ 25, ಶಿರಸಿ 22, ಕುಮಟಾ 19, ಸಿದ್ದಾಪುರ 7, ಹೊನ್ನಾವರ 3 ಮತ್ತು ಜೋಯ್ಡಾದ ಇಬ್ಬರು ಸೋಂಕಿನಿಂದ ಗುಣಮುಖರಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 1,832 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದರಲ್ಲಿ 1,110 ಮಂದಿ ಗುಣಮುಖರಾಗಿದ್ದಾರೆ. 19 ಸೋಂಕಿತರು ಸಾವನ್ನಪ್ಪಿದ್ದು, 633 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.