ಶಿರಸಿ: ಯಲ್ಲಾಪುರ ವಿಧಾನಸಭಾ ಉಪ ಚುನಾವಣಾ ಅಖಾಡದಲ್ಲಿ ವಯಕ್ತಿಕ ಕೆಸರಾಟಗಳು ಹೆಚ್ಚಾಗುತ್ತಿದೆ. ಬೆಂಗಳೂರಿನ ಖಾಸಗಿ ಪತ್ರಿಕೆಯೊಂದರಲ್ಲಿ ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ವಿರುದ್ಧ ಅವಹೇಳನಕಾರಿ ಲೇಖನ ಪ್ರಕಟಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನಿ ಟ್ರಾಪ್ ಪ್ರಕರಣದಲ್ಲಿ ಅನರ್ಹ ಶಾಸಕ ಹೆಬ್ಬಾರ್ ಹೆಸರೂ ಸಹ ಥಳುಕು ಹಾಕಿಕೊಂಡಿರುವ ಕಾರಣ ಖಾಸಗಿ ಪತ್ರಿಕೆಯಲ್ಲಿ ವಯಕ್ತಿಕ ವರ್ಚಸ್ಸಿಗೆ ಧಕ್ಕೆ ತರುವ ಲೇಖನ ಪ್ರಕಟವಾಗಿದೆ. ಇದನ್ನು ಕಾಂಗ್ರೆಸ್ ನವರು ಚುನಾವಣಾ ತಂತ್ರವಾಗಿ ಬಳಸಿಕೊಂಡು, ಲಕ್ಷಕ್ಕೂ ಅಧಿಕ ಪತ್ರಿಕೆಯನ್ನು ಕ್ಷೇತ್ರದಲ್ಲಿ ಹಂಚುತ್ತಿದ್ದಾರೆ ಎಂದು ಸ್ವತಃ ಹೆಬ್ಬಾರ್ ಆರೋಪಿಸಿದ್ದಾರೆ.
ಇನ್ನು ಆ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಹಾಗೆಯೇ ಇನ್ನಷ್ಟು ಪತ್ರಿಕೆ ಹಂಚಲೂ ಅಧಿಕಾರ ಕೊಡುತ್ತೇನೆ ಎಂದು ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ.