ಕಾರವಾರ: ಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯ ಸಹಿತ ಆರೋಪಿಯೋರ್ವನನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಕಾರವಾರ ಕಾಜುಭಾಗದ ಸಮೀರ್ ಕಿನ್ನರಕರ್ ಬಂಧಿತ ಆರೋಪಿ. ಗೋವಾದಿಂದ ಕಾರಿನಲ್ಲಿ ಮದ್ಯದ ಬಾಟಲ್ ತುಂಬಿಕೊಂಡು ಬರುತ್ತಿರುವಾಗ ಚೆಕ್ ಪೋಸ್ಟ್ ಬಳಿ ತಡೆದ ಅಬಕಾರಿ ಸಿಬ್ಬಂದಿ ಕಾರು ತಪಾಸಣೆ ನಡೆಸಿದರು. ಈ ವೇಳೆ ಗೋವಾ ಮದ್ಯ ದೊರೆತಿದ್ದು, ಕಾರು ಸಮೇತ 3 ಲಕ್ಷ 30 ಸಾವಿರ ರೂ. ಮಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಅಬಕಾರಿ ಡಿಸಿ ವೈ.ಆರ್.ಮೋಹನ್ ನಿರ್ದೇಶನದ ಮೇರೆಗೆ ಅಬಕಾರಿ ಉಪ ನಿರೀಕ್ಷಕ ಜಿ.ಎಸ್. ಗುಂಡೂ ಕಾರ್ಯಾಚರಣೆ ನಡೆಸಿದರು.
ಇನ್ನು ಈ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.