ಕಾರವಾರ: ಕಾಡಿನಲ್ಲಿ ಬಚ್ಚಿಟ್ಟಿದ್ದ 68 ಸಾವಿರ ರೂಪಾಯಿ ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ ಘಟನೆ ಕಾರವಾರದ ಮುಡಗೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ದಾಸ್ತಾನು ಮಾಡುತ್ತಿರುವ ಬಗ್ಗೆ ಸುಳಿವು ಲಭ್ಯವಾದ ಹಿನ್ನೆಲೆಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಸುವರ್ಣಾ ಬಿ. ನಾಯ್ಕ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ದಯಾನಂದ, ಬಸವರಾಜ ಕರವಿನಕೊಪ್ಪ ಹಾಗೂ ಸಿಬ್ಬಂದಿ ಮುಡಗೇರಿ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿತ್ತು. ಅರಣ್ಯ ಪ್ರದೇಶದಲ್ಲಿ ದಾಸ್ತಾನಿಟ್ಟ 90 ಲೀಟರ್ ಗೋವಾ ಮದ್ಯ, 54 ಲೀ ಗೋವಾ ಫೆನ್ನಿ ಹಾಗೂ 36 ಲೀ ಗೋವಾ ಬಿಯರ್ ಸೇರಿ ಅಂದಾಜು 68,400 ರೂಪಾಯಿ ಮೌಲ್ಯದ ಅಕ್ರಮ ಮದ್ಯ ಪತ್ತೆಯಾಗಿದೆ.
ಇನ್ನು ಈ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಅಕ್ರಮ ಮರಳು ಸಾಗಣೆ: ವಾಹನಗಳನ್ನು ವಶಕ್ಕೆ ಪಡೆದ ರಾಣೆಬೆನ್ನೂರು ಪೊಲೀಸರು