ಕಾರವಾರ: ಹಾರ್ಪಿಕ್ ಕಾರ್ಟನ್ ಬಾಕ್ಸ್‌ಗಳಲ್ಲಿ ಅಕ್ರಮವಾಗಿ ಗೂಡ್ಸ್ ವಾಹನದ ಮೂಲಕ ಸ್ಪಿರಿಟ್ ಸಾಗಣೆ ಮಾಡಲು ಯತ್ನಿಸುತ್ತಿದ್ದಾಗ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿ ಮಾಲು ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಗೋವಾದಿಂದ ಹೊರಟಿದ್ದ ತಮಿಳುನಾಡು ನೋಂದಣಿಯ ಗೂಡ್ಸ್ ವಾಹನವನ್ನು ಅಬಕಾರಿ ಸಿಬ್ಬಂದಿ ತಡ ರಾತ್ರಿ 2 ಗಂಟೆಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ, ಮೊದಲಿಗೆ ಹಾರ್ಪಿಕ್ ಬಾಕ್ಸ್ಗಳು ಕಾಣಿಸಿವೆ ಅನುಮಾನಗೊಂಡ ಸಿಬ್ಬಂದಿ ಅವುಗಳನ್ನು ತೆಗೆದು ನೋಡಿದಾಗ 35 ಲೀಟರ್‌ನ 43 ಕ್ಯಾನ್‌ಗಳಲ್ಲಿ 1,505 ಲೀಟರ್ ಸ್ಪಿರಿಟ್ ಪತ್ತೆಯಾಗಿದೆ.
ಪ್ರಕರಣ ಸಂಬಂಧ ತಮಿಳುನಾಡು ಮೂಲದ ಆರೋಪಿಗಳಾದ ಶ್ರೀನಾಥ ಪೆರಿಯನ್ನನ್, ಸೆಂಥಿಲ ಕುಮಾರ ಅರುಮುಗಮ್ ಎನ್ನುವವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ವಶಕ್ಕೆ ಪಡೆಯಲಾದ ಸ್ಪಿರೀಟ್ ಮೌಲ್ಯ ಒಟ್ಟು 8,50,000 ಲಕ್ಷ ರೂಪಾಯಿಯದು ಎಂದು ಅಂದಾಜಿಸಲಾಗಿದ್ದು, 12 ಲಕ್ಷ ಮೌಲ್ಯದ ವಾಹನ ಜಪ್ತಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸೋನಿಯಾ ವಿಚಾರಣೆಗೆ ಕಾಂಗ್ರೆಸ್ ವಿರೋಧ: ಧರಣಿ ಕುಳಿತ ರಾಹುಲ್, ಡಿಕೆಸು ಪೊಲೀಸ್ ವಶಕ್ಕೆ