ಕಾರವಾರ: ವಾಷಿಂಗ್ ಮಷಿನ್ ತುಂಬಿದ ಲಾರಿಯಲ್ಲಿ ಅಕ್ರಮವಾಗಿ ಸ್ಪಿರಿಟ್ ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಲಾರಿ ಹಾಗೂ ಸ್ಪಿರಿಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆ ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿ ನಡೆದಿದೆ.
ಈ ದಾಳಿಯ ವೇಳೆ 1ಲಕ್ಷದ 80 ಸಾವಿರ ರೂ ಮೌಲ್ಯದ 2,625 ಲೀಟರ್ ಸ್ಪಿರಿಟ್ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ಸಾಲ ಕಟ್ಟದ ಬಡ ಕುಟುಂಬದ ಮನೆ ಜಪ್ತಿಗೆ ಬಂದು ಮನೆಗೇ 'ಮರುಜೀವ' ತುಂಬಿದ ಬ್ಯಾಂಕ್ ನೌಕರರು!
ಲಾರಿಯಲ್ಲಿ ಸುಮಾರು ಹತ್ತು ವಾಷಿಂಗ್ ಮಷಿನ್ಗಳಿದ್ದು, ಇದರ ಮದ್ಯದಲ್ಲಿ ಸ್ಪಿರಿಟ್ ತುಂಬಿದ ಕ್ಯಾನ್ಗಳನ್ನು ಇಡಲಾಗಿತ್ತು. ಈ ಲಾರಿ ಮಾಜಾಳಿಯ ಚೆಕ್ಪೋಸ್ಟ್ ಬಳಿ ಬರುತ್ತಿದ್ದಂತೆ ತಪಾಸಣೆ ನಡೆಸಿದ ಅಬಕಾರಿ ಸಿಬ್ಬಂದಿ ಅಕ್ರಮವನ್ನು ಬಯಲಿಗೆಳೆದಿದ್ದಾರೆ.