ETV Bharat / state

37 ಕೋಣಗಳ ಅಕ್ರಮ ಸಾಗಣೆ: ಐವರು ಆರೋಪಿಗಳ ಬಂಧನ! - Trafficking illegal buffalo

ಕುಮಟಾ ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ಪರವಾನಗಿ ಇಲ್ಲದೇ ಅಕ್ರಮವಾಗಿ ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದ 37 ಕೋಣಗಳನ್ನು ರಕ್ಷಣೆ ಮಾಡಲಾಗಿದೆ.

karwar
ಕೋಣಗಳ ಅಕ್ರಮ ಸಾಗಾಟ
author img

By

Published : Sep 29, 2020, 9:41 PM IST

ಕಾರವಾರ: ಪರವಾನಗಿಗೆ ಇಲ್ಲದೇ ಅಕ್ರಮವಾಗಿ ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದ 37 ಕೋಣಗಳನ್ನು ರಕ್ಷಣೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಹಿರೇಗುತ್ತಿ ಚೆಕ್ ಪೋಸ್ಟ್ ಬಳಿ ನಡೆದಿದೆ.

ಅಂಕೋಲಾದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಹರಿಯಾಣ ಮೂಲದ ಲಾರಿಯಲ್ಲಿ 37 ಕೋಣದ ಮರಿಗಳನ್ನು ನಿಲ್ಲಲೂ ಜಾಗವಿಲ್ಲದ ಸ್ಥಿತಿಯಲ್ಲಿ ಹಿಂಸಾತ್ಮಕವಾಗಿ ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ಚೆಕ್ ಪೋಸ್ಟ್ ಬಳಿ ತಡೆದು ಪರಿಶೀಲನೆ ನಡೆಸಿದಾಗ ಪರವಾನಗಿ ಇಲ್ಲದೇ ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಾಗಣೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಐವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

five accused arrested
37 ಕೋಣಗಳನ್ನು ಅಕ್ರಮ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಜೊತೆಗೆ 15 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.‌ ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.