ಭಟ್ಕಳ (ಉತ್ತರ ಕನ್ನಡ): ಟಾಟಾ ಏಸ್ನಲ್ಲಿ ಅಕ್ರಮವಾಗಿ ಅಕ್ಕಿಯನ್ನು ತುಂಬಿಕೊಂಡು ಭಟ್ಕಳದ ಕಡೆ ಹೊರಟಿದ್ದ ಓರ್ವನನ್ನು ವಾಹನ ಸಮೇತ ಆಹಾರ ನಿರೀಕ್ಷಕರು ತಾಲೂಕಿನ ಶಿರಾಲಿ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಪುರವರ್ಗ ನಿವಾಸಿ ಅಬ್ದುಲ್ ರೆಹಮಾನ್ ಎಂಬಾತ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿ. ವಾಹನದಲ್ಲಿದ್ದ 6.96 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಶಿರಾಲಿ, ತಟ್ಟಿ ಹಕ್ಕಲು ಮತ್ತಿತರ ಪ್ರದೇಶಗಳಿಗೆ ಗುಜರಿ ವ್ಯಾಪಾರಿಯ ಸೋಗಿನಲ್ಲಿ ಮನೆಗಳಿಗೆ ತೆರಳಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿದ್ದ ಎಂದು ಹೇಳಲಾಗ್ತಿದೆ. ಪೊಲೀಸರು ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.