ಶಿರಸಿ: ಅಕ್ರಮವಾಗಿ ಹೋರಿಯೊಂದನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಶಿರಸಿ ನಗರದ ಕಾಮತ್ ಫಾರ್ಮ ಹೌಸ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ಸಿಕಂದರ್ ಪಾಟೀಲ್ (37), ಬನವಾಸಿಯ ಜಯಶೀಲ ಗೌಡ (42) ಹಾಗೂ ಬನವಾಸಿಯ ಕುಪ್ಪಗಡ್ಡೆಯ ಮಹಮ್ಮದ್ ಗೌಸ (21) ಬಂಧಿತ ಆರೋಪಿಗಳು. ಖಚಿತ ಮೇರೆಗೆ ಮಾರುಕಟ್ಟೆ ಠಾಣೆ ಪಿಎಸ್ಐ ನಾಗಪ್ಪ ನೇತೃತ್ವದ ತಂಡ ದಾಳಿ ನಡೆಸಿ, ಹೋರಿಯನ್ನು ರಕ್ಷಿಸಿದ್ದಾರೆ. ಆರೋಪಿಗಳಿಂದ 4 ಲಕ್ಷ ರೂ. ಬೆಲೆ ಬಾಳುವ ಟಾಟಾ ಏಸ್ ಕಂಪನಿಯ ವಾಹನ ಹಾಗೂ 7500ರೂ ಬೆಲೆ ಬಾಳುವ ಹೋರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.