ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮರಲಿಗೆ ಊರಲ್ಲಿ ವಾಸಿಸುತ್ತಿರುವ ಕುಟುಂಬವೊಂದರ ಜೀವನ ಚಿಂತಾಜನಕವಾಗಿದೆ. ಕೇಶವ ಮೇಸ್ತಾ ದಂಪತಿ ಮನೆ ಕಳೆದ ವರ್ಷ ಸುರಿದ ಭಾರೀ ಮಳೆಗೆ ಸಂಪೂರ್ಣ ನೆಲಸಮವಾಗಿದೆ. ಇದೀಗ ಮುರುಕಲು ಮನೆಯಲ್ಲೇ ವಾಸ ಮಾಡುತ್ತಿದ್ದಾರೆ.
ಕೇಶವ ಮೇಸ್ತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರನ್ನೂ ಓದಿಸೋಕೆ ಸಾಧ್ಯವಾಗದೇ ತಮ್ಮ ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದಾರೆ. ಮನೆಯಿಲ್ಲದ ಕಾರಣ ಈ ನಿರ್ಧಾರ ಕೈಗೊಂಡಿದ್ದಾರೆ. ಕೂಲಿ ಕೆಲಸಕ್ಕೆ ಹೋದ್ರೆ ಮಾತ್ರ ಇವರ ಜೀವನ ಸಾಗುತ್ತದೆ. ಮನೆಯ ಯಜಮಾನ ಕೇಶವ ಮೇಸ್ತಾ ಕೂಲಿ ಕೆಲಸಕ್ಕೆ ಹೋಗ್ತಾರೆ. ಇವರ ಪತ್ನಿ ಅನಿತಾ ಮನೆಗೆಲಸ ಮಾಡಿಕೊಂಡು ಮನೆಯಲ್ಲೇ ಇರುತ್ತಾರೆ.
ಹಿಂದಿನ ವರ್ಷದ ಮಳೆಗೆ ಮನೆ ಸಂಪೂರ್ಣ ನೆಲಕಚ್ಚಿದ ಮೇಲೆ ಸ್ಥಳೀಯ ವಿಲೇಜ್ ಅಕೌಂಟೆಂಟ್ ಬಂದು ಮನೆ ನೋಡಿದ್ದರು. ಅದಾದ ಮೇಲೆ ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಿದ್ರು. ಆದ್ರೆ, ಮನೆಯಲ್ಲಿ ವಾಸಿಸಲಾಗದ ಸ್ಥಿತಿ ಇದ್ರೂ ಕೂಡ ಇವರಿಗೆ ಬಂದಿರೋ ಪರಿಹಾರದ ಮೊತ್ತ ಮಾತ್ರ 50 ಸಾವಿರ ರೂಪಾಯಿ.
ಬಂದಿರುವ 50 ಸಾವಿರ ರೂ. ಮೊತ್ತದಲ್ಲಿ ಮನೆಯನ್ನ ಸ್ವಲ್ಪ ನಿರ್ಮಿಸಿ ಅದಕ್ಕೆ ಹೊದಿಕೆ ಮಾಡಿಕೊಂಡಿದ್ದಾರೆ. ದಿನಾಲೂ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿರುವಾಗ ಮನೆ ನಿರ್ಮಿಸೋದು ಹೇಗೆ? ಈ ಕುರಿತು ಜಿಲ್ಲಾಧಿಕಾರಿಗಳಿಗೆ ಈ ಕುಟುಂಬ ಪತ್ರ ಬರೆದು ವಿನಂತಿಸಿದೆ.
ಓದಿ: ಸ್ನಾನದ ಕೋಣೆಯಲ್ಲಿ ಬಾಲಕಿಗೆ ಬೆಂಕಿ: ಚಿಕಿತ್ಸೆ ಫಲಿಸದೇ ಸಾವು
ಆದ್ರೆ, ಅದಕ್ಕೆ ಇನ್ನೂ ಉತ್ತರವೇ ಬಂದಿಲ್ಲ. ಯಾವುದೇ ಸ್ವಂತ ಜಮೀನು ಹೊಂದಿರದ ಈ ಕುಟುಂಬ ಫಾರೆಸ್ಟ್ನಿಂದ ಜಿಪಿಎಸ್ ಆದ ಜಾಗದಲ್ಲಿ ಈಗ ವಾಸ ಮಾಡ್ತಿದೆ. ಕಾಮನ್ ಆಗಿ ಶೌಚಾಲಯ ಇಲ್ಲದಿದ್ರೆ ಕೂಡಲೇ ನಿರ್ಮಿಸಿಕೊಳ್ಳಿ ಅಂತಾ ಸರ್ಕಾರ ಪಂಚಾಯತ್‌ಗೆ ಅನುದಾನ ನೀಡಿದೆ. ಆದ್ರೆ, ನಮಗೆ ಶೌಚಾಲಯ ಕೂಡ ನಿರ್ಮಿಸಿಕೊಟ್ಟಿಲ್ಲ. ಮಳೆಗಾಲದಲ್ಲಿ ಮನೆಯಲ್ಲಿ ಇರೋಕೆ ಕಷ್ಟವಾಗುತ್ತೆ. ಜೋರಾಗಿ ಗಾಳಿ ಬೀಸಿದ್ರೆ ಮನೆ ಬಿಳುತ್ತೇನೋ ಅನ್ನೋ ಭಯದಲ್ಲಿ ವಾಸ ಮಾಡ್ತಿದ್ದೀವಿ ಅಂತಾರೆ ಅನಿತಾ ಕೇಶವ್.