ETV Bharat / state

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ.. ಹೈಕೋರ್ಟ್ ಆದೇಶದಿಂದ ಹೋರಾಟ ಸಮಿತಿಗೆ ಸಂತಸ - ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆ

ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆ ದಶಕಗಳ ಕನಸಾಗಿದ್ದು, ಈ ಯೋಜನೆ ಜಾರಿಗೊಳಿಸುವಂತೆ ಸಾಕಷ್ಟು ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ಪರಿಸರವಾದಿಗಳ ಅಡ್ಡಗಾಲಿನಿಂದಾಗಿ ಯೋಜನೆ ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿದೆ. ಆದ್ರೆ ಖುಷಿಯ ವಿಚಾರ ಎನ್ನುವಂತೆ ಸದ್ಯ ನಡೆದ ವಿಚಾರಣೆಯಲ್ಲಿ ಯೋಜನೆ ಜಾರಿ ಕುರಿತು ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ankola-hubli-railway-project
ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆ
author img

By

Published : Dec 9, 2021, 3:55 PM IST

ಕಾರವಾರ : ಅದು ರಾಜ್ಯದ ಕರಾವಳಿಯನ್ನ ಉತ್ತರ ಕರ್ನಾಟಕಕ್ಕೆ ಸಂಪರ್ಕಿಸುವ ಮಹತ್ತರವಾದ ಯೋಜನೆ. ಈ ಯೋಜನೆ ಪೂರ್ಣಗೊಂಡಿದ್ದರೆ ಕೇವಲ ಒಂದು ಜಿಲ್ಲೆ ಮಾತ್ರವಲ್ಲದೇ ಇಡೀ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ಆದ್ರೆ ಈ ಯೋಜನೆಗೆ ಅಡಿಗಲ್ಲು ಹಾಕಿ ಎರಡು ದಶಕಗಳೇ ಕಳೆದರೂ ಕೆಲ ಪರಿಸರವಾದಿಗಳ ವಿರೋಧದಿಂದಾಗಿ ವಿಳಂಬವಾಗುತ್ತಾ ಬಂದಿತ್ತು. ಇದೀಗ ಹೈಕೋರ್ಟ್ ಯೋಜನೆ ಜಾರಿಯ ಕುರಿತು ಪರಿಶೀಲನೆಗೆ ವನ್ಯಜೀವಿ ಮಂಡಳಿಗೆ ಆದೇಶಿಸಿದ್ದು ಯೋಜನೆ ಪರ ಹೋರಾಟಗಾರರಿಗೆ ಸಂತಸ ಮೂಡಿಸಿದೆ.

ಅಂಕೋಲಾ ಹುಬ್ಬಳ್ಳಿ ರೈಲ್ವೆ ಯೋಜನೆ ಪರಿಶೀಲನೆ

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಯೋಜನೆ ದಶಕಗಳ ಕನಸಾಗಿದ್ದು, ಈ ಯೋಜನೆ ಜಾರಿಗೊಳಿಸುವಂತೆ ಸಾಕಷ್ಟು ವರ್ಷಗಳಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತಿದೆ. ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ 1999ರಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಿದ್ದು ಅದಾದ ಬಳಿಕ ಪರಿಸರವಾದಿಗಳ ಅಡ್ಡಗಾಲಿನಿಂದಾಗಿ ಯೋಜನೆ ಅನುಷ್ಠಾನಗೊಳ್ಳದೇ ನೆನೆಗುದಿಗೆ ಬಿದ್ದಿದೆ. ಆದ್ರೆ ಖುಷಿಯ ವಿಚಾರ ಎನ್ನುವಂತೆ ಸದ್ಯ ನಡೆದ ವಿಚಾರಣೆಯಲ್ಲಿ ಯೋಜನೆ ಜಾರಿ ಕುರಿತು ಅಧ್ಯಯನ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಅಂಕೋಲಾ-ಹುಬ್ಬಳ್ಳಿ ಯೋಜನೆ ಜಾರಿಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಕೆಲ ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಯೋಜನೆ ಇನ್ನೂ ಜಾರಿಯಾಗಿರಲಿಲ್ಲ. ಕಳೆದ ವರ್ಷ ಅಂದಿನ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಯೋಜನೆ ಜಾರಿಗೆ ಸಮ್ಮತಿ ನೀಡಿದ್ದು, ಯೋಜನೆ ಜಾರಿಯಾಗಬೇಕು ಎಂದು ಕನಸಿಟ್ಟುಕೊಂಡಿದ್ದ ಜಿಲ್ಲೆಯ ಜನರ ಮುಖದಲ್ಲಿ ಖುಷಿ ಮೂಡಿಸಿತ್ತು. ಆದರೆ ಬೆಂಗಳೂರಿನ ಎನ್.ಜಿ.ಓ ಒಂದು ವನ್ಯಜೀವಿ ಮಂಡಳಿಯ ಅನುಮೋದನೆಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿತ್ತು.

ಈ ನಡುವೆ ಉತ್ತರಕನ್ನಡದ ರೈಲ್ವೆ ಸೇವಾ ಸಮಿತಿಯೊಂದು ಯೋಜನೆಗೆ ತಡೆಯಾಜ್ಞೆ ತೆರವು ಮಾಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಉಚ್ಛನ್ಯಾಯಾಲಯ ಇದೀಗ ಯೋಜನೆ ಜಾರಿಯ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ನಿರ್ದೇಶನ ನೀಡಿದ್ದು ಇದರಿಂದ ಯೋಜನೆಗೆ ಪೂರಕವಾದಂತಾಗಿದೆ.

ಹೋರಾಟಕ್ಕೆ ಪೂರಕ ಶಕ್ತಿ ಸಿಕ್ಕಿದೆ : ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗದ ಕುರಿತು ಅಧ್ಯಯನ ನಡೆಸಲು ವನ್ಯಜೀವಿ ಮಂಡಳಿಗೆ ಹೈಕೋರ್ಟ್ ಆದೇಶ ನೀಡಿರುವುದನ್ನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸ್ವಾಗತಿಸಿದ್ದಾರೆ. ಈ ರೈಲ್ವೆ ಮಾರ್ಗ ಜಿಲ್ಲೆಯ ಜನರ ಹಲವು ವರ್ಷಗಳ ಕನಸಾಗಿದ್ದು ದಶಕಗಳಿಂದಲೂ ಯೋಜನೆ ಜಾರಿಗೆ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಇದೀಗ ಹೈಕೋರ್ಟ್ ಆದೇಶ ನೀಡಿರುವುದು ಹೋರಾಟಕ್ಕೆ ಪೂರಕ ಶಕ್ತಿ ನೀಡಿದಂತಾಗಿದ್ದು, ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ವತಂತ್ರವಾಗಿ ಅಧ್ಯಯನ ನಡೆಸಿ ಯೋಜನೆಯ ಕುರಿತು ತನ್ನ ವರದಿ ನೀಡಲಿದೆ.

ಜಿಲ್ಲೆಯ ಎಲ್ಲ ರಾಜಕಾರಣಿಗಳೂ ಪಕ್ಷಾತೀತವಾಗಿ ಯೋಜನೆಯನ್ನ ಬೆಂಬಲಿಸುತ್ತಿದ್ದು ವನ್ಯಜೀವಿ ಮಂಡಳಿಗೆ ಯೋಜನೆ ಕುರಿತು ಮನವರಿಕೆ ಮಾಡಿಕೊಡಲಾಗುವುದು. ಈ ಯೋಜನೆ ಜಾರಿಯಾದಲ್ಲಿ ಉತ್ತರಕನ್ನಡದೊಂದಿಗೆ ಉತ್ತರ ಕರ್ನಾಟಕದ ಅಭಿವೃದ್ಧಿಗೂ ಸಹ ಸಹಕಾರಿಯಾಗಲಿದ್ದು ಈ ನಿಟ್ಟಿನಲ್ಲಿ ವನ್ಯಜೀವಿ ಮಂಡಳಿ ಯೋಜನೆಗೆ ಪೂರಕವಾಗುವಂತೆ ವರದಿ ನೀಡಲಿದೆ ಅಂತಾ ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೇ ಸರಿಸುಮಾರು ಎರಡು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಕೋಲಾ ಹುಬ್ಬಳ್ಳಿ ರೈಲ್ವೇ ಯೋಜನೆ ಜಾರಿಯಾಗುವ ಲಕ್ಷಣಗಳು ಕಂಡು ಬರುತ್ತಿದ್ದು ರಾಷ್ಟ್ರೀಯ ವನ್ಯಜೀವಿ ಮಂಡಳಿ ನೀಡುವ ವರದಿಯ ಮೇಲೆ ಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.