ಮಂಗಳೂರು/ಕಾರವಾರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 314 ಕೋವಿಡ್ ಪ್ರಕರಣಗಳು ಕಂಡು ಬಂದಿವೆ. ಇಂದು ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 612ಕ್ಕೆ ಏರಿದೆ.
ಇಂದು 486 ಮಂದಿ ಗುಣಮುಖರಾಗಿದ್ದು, ಈವರೆಗೆ ಗುಣಮುಖರ ಸಂಖ್ಯೆ 27,146ಕ್ಕೆ ಏರಿದೆ. ಇನ್ನುಳಿದ 4,110 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7,219 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 8,65,185 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ಇನ್ನು ಕಾರವಾರದಲ್ಲಿ ಇಂದು 157 ಮಂದಿಗೆ ಕೋವಿಡ್ ವಕ್ಕರಿಸಿದ್ದು, ಸೋಂಕಿತರ ಸಂಖ್ಯೆ 11,463ಕ್ಕೆ ಏರಿಕೆಯಾಗಿದೆ. ಒಂದೇ ದಿನ 227 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕು ಪತ್ತೆಯಾದ ಪೈಕಿ ಕಾರವಾರದಲ್ಲಿ 13, ಅಂಕೋಲಾ 9, ಕುಮಟಾದಲ್ಲಿ 10, ಹೊನ್ನಾವರ 30, ಭಟ್ಕಳ 8, ಶಿರಸಿ 11, ಸಿದ್ದಾಪುರ 1, ಯಲ್ಲಾಪುರ 6, ಮುಂಡಗೋಡ 65, ಹಳಿಯಾಳದಲ್ಲಿ 4 ಮಂದಿಗೆ ಕೊರೊನಾ ದೃಢಪಟ್ಟಿದೆ.
ಇನ್ನು ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಕಾರವಾರದಲ್ಲಿ 12, ಅಂಕೋಲಾದಲ್ಲಿ 11, ಕುಮಟಾದಲ್ಲಿ 19, ಹೊನ್ನಾವರದಲ್ಲಿ 15, ಭಟ್ಕಳದಲ್ಲಿ 2, ಶಿರಸಿಯಲ್ಲಿ 51, ಸಿದ್ದಾಪುರದಲ್ಲಿ 13, ಮುಂಡಗೋಡದಲ್ಲಿ 84, ಹಳಿಯಾಳದಲ್ಲಿ 16 ಹಾಗೂ ಜೊಯಿಡಾದಲ್ಲಿ 4, ಒಟ್ಟು 227 ಸೋಂಕಿತರು ಗುಣಮುಖರಾಗಿದ್ದಾರೆ.
ಮುಂಡಗೋಡ, ಕುಮಟಾ ಹಾಗೂ ಶಿರಸಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. 731 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದರೆ, 505 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.