ETV Bharat / state

ಅತಿವೃಷ್ಟಿಗೆ ಬಾಳೆ, ಶುಂಠಿ ಬೆಳೆ ನಾಶ: ರೈತರು ಕಂಗಾಲು - ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಮುಂಡಗೋಡ, ಯಲ್ಲಾಪುರ ಭಾಗಗಳಲ್ಲಿ ಸುರಿದ ಭಾರಿ ಮಳೆಗೆ ಬಾಳೆ ಹಾಗೂ ಶುಂಠಿ ಸಂಪೂರ್ಣ ನಾಶವಾಗಿದೆ. ಸರ್ಕಾರದಿಂದ ಪರಿಹಾರಕ್ಕಾಗಿ ರೈತರು ಒತ್ತಾಯಿಸುತ್ತಿದ್ದಾರೆ.

ಅತಿವೃಷ್ಟಿಯಿಂದ ಬಾಳೆ, ಶುಂಠಿ ಬೆಳೆ ನಾಶ
author img

By

Published : Oct 27, 2019, 11:52 AM IST

ಶಿರಸಿ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಗೆ ರೈತರು ತತ್ತರಿಸಿದ್ದಾರೆ. ಶಿರಸಿ, ಮುಂಡಗೋಡ, ಯಲ್ಲಾಪುರ ಭಾಗಗಳಲ್ಲಿ ಬೆಳೆದು ನಿಂತ ಬಾಳೆ ನೆಲಕಚ್ಚಿದೆ. ಬನವಾಸಿಯಲ್ಲಿ 200ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಬಾಳೆ ನಾಶವಾಗಿದೆ.

ಅತಿವೃಷ್ಟಿಯಿಂದ ಬಾಳೆ, ಶುಂಠಿ ಬೆಳೆ ನಾಶ

ಇನ್ನೇನು ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸಬೇಕಿದ್ದ ಬಾಳೆಗೊನೆಗಳು ಸಂಪೂರ್ಣವಾಗಿ ಹಾಳಾಗಿದೆ. ಎಕರೆ ಬೆಳೆಗೆ 1 ಲಕ್ಷದವರೆಗೆ ಹಣ ಖರ್ಚು ಮಾಡಲಾಗಿದೆ. ಸರ್ಕಾರ ಪರಿಹಾರ ನೀಡಿದರೆ ರೈತರು ಬದುಕಿಕೊಳ್ಳುತ್ತಾರೆ ಎನ್ನುತ್ತಾರೆ ರೈತ ಚಂದ್ರಶೇಖರ ಗೌಡ.

ಬಾಳೆ ಜೊತೆ ಬಯಲುಸೀಮೆ ಬೆಳೆಗಳಾದ ಶುಂಠಿ ಸಹ ಹಾಳಾಗಿದೆ. ಗದ್ದೆಗಳಲ್ಲಿ ನೀರು ನಿಂತು ಕೊಳೆತು ಹೋಗಿದೆ. ಖರ್ಚು ಮಾಡಿದ ಅರ್ಧದಷ್ಟಾದ್ರೂ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮಂಜುನಾಥ ಮನವಿ ಮಾಡಿದ್ದಾರೆ.

ಅತಿವೃಷ್ಟಿಯಿಂದ ರೈತರ ಬದುಕು ಬರಡಾಗಿದ್ದು, ಸರ್ಕಾರ ಶೀಘ್ರವೇ ಕೂಡಲೇ ನೆರವಿಗೆ ದಾವಿಸಬೇಕು ಎಂಬುದು ರೈತಾಪಿ ವರ್ಗದ ಒತ್ತಾಯವಾಗಿದೆ.

Intro:ಶಿರಸಿ :
ಅತಿವೃಷ್ಟಿ ಹಾಗೂ ಪ್ರಸ್ತುತ ಸುರಿಯುತ್ತಿರುವ ಮಳೆಗೆ ಬಾಳೆ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿದೆ. ಬಾಳೆ ಕಾಯಿಗಳು ಸರಿಯಾಗಿ ಬಲಿಯದಿರುವುದು ಒಂದೆಡೆಯಾದರೆ ಮಳೆ ರಭಸಕ್ಕೆ ಮರಗಳೇ ಧರೆಗುರುಳುತ್ತಿರುವುದು ರೈತರ ಶ್ರಮಕ್ಕೆ ಧಕ್ಕೆ ನೀಡಿದೆ.

ಜಿಲ್ಲೆಯ ಶಿರಸಿ, ಮುಂಡಗೋಡ, ಯಲ್ಲಾಪುರ ಭಾಗಗಳಲ್ಲಿ ಬಾಳೆ ಬೆಳೆಗೆ ಹೆಚ್ಚಿನ ಹೊಡೆತ ಬಿದ್ದಿದೆ. ಶಿರಸಿಯ ಪೂರ್ವ ಭಾಗ ಬನವಾಸಿಯಲ್ಲಿ ೨೦೦ ಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ನಾಶವಾಗಿದೆ. ಮುಂಡಗೋಡ ಭಾಗದ ರೈತರ ಜೀವನಾಡಿಯಾಗಿರುವ ಬಾಳೆ ಇನ್ನಿಲ್ಲದಂತೆ ಬೆಲಕಚ್ಚಿದೆ. ಇದರಿಂದ ಸಾಲ ಮಾಡಿ ಬೆಳೆ ಬೆಳೆದ ರೈತನ ಜೀವನ ಬರಡದಾಗಿದೆ.

ಎಕರೆಯೊಂದಕ್ಕೆ ೫೦ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ಬೆಳೆಯಲಾಗಿದೆ. ತಿಂಗಳೊಳಗೆ ಬಾಳೆಗೊನೆ ಮಾರುಕಟ್ಟೆಗೆ ಹೋಗಲು ಸಿದ್ಧವಾಗುತ್ತಿತ್ತು. ಆದರೆ ಮಳೆ ಹಾಗೂ ಗಾಳಿಗೆ ಮರಗಳೇ ನೆಲಕ್ಕುರುಳಿದೆ. ಅತಿವೃಷ್ಟಿ ಆದ ಕಾರಣ ಬಾಳೆ ನೆಟ್ಟು ೧೧ ತಿಂಗಳಾದರೂ ಗೊನೆಯಲ್ಲಿನ ಕಾಯಿಗಳು ಹೀಚಿನಂತಿವೆ. ಥರ್ಡ್ ಗ್ರೇಡ್ ಕಾಯಿಯಂತಿವೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರತೀ ಮಿಟಗ ಬಾಳೆ ೧೦-೧೨ ಕೆಜಿ ತೂಗುತ್ತಿತ್ತು. ಆದರೆ ಈ ಬಾರಿ ೪-೬ಕೆಜಿ ತೂಗಿದರೆ ಹೆಚ್ಚು. ಬೆಳೆ ಅರ್ಧದಷ್ಟು ಇಳಿಮುಖವಾಗಿದೆ. ದರ ಮಾತ್ರ ಏರುಗತಿ ಇಲ್ಲ. ಕೆಲವೆಡೆ ಭತ್ತದ ಗದ್ದೆಗಳು ಬಾಳೆಯ ತೋಟಗಳಾಗಿವೆ. ಆದರೆ ವಾತಾವರಣದಲ್ಲಿನ ಅತಿಯಾದ ತೇವಾಂಶ ಹಾಗೂ ನಿರಂತರ ಮಳೆಗೆ ಬಾಳೆಕಾಯಿ ಬೆಳವಣಿಗೆಯಾಗಿಲ್ಲ. ಗಾಳಿಮಳೆಗೆ ಬಾಳೆ ಮರಗಳು ನೆಲಕಚ್ಚುತ್ತಿದ್ದು ಎನ್ನುತ್ತಾರೆ ರೈತರು.

ಬೈಟ್ (೧) : ಚಂದ್ರಶೇಖರ ಗೌಡ, ರೈತ

Body:ಬಾಳೆ ಬೆಳೆಯ ಜೊತೆಗೆ ಬಯಲುಸೀಮೆ ಬೆಳೆಗಳಾದ ಶುಂಠಿ ಸಹ ಹಾಳಾಗಿದೆ. ಗದ್ದೆಗಳಲ್ಲಿ ನೀರು ನಿಂತು ಕೊಳೆತ ಪರಿಣಾಮ ಇನ್ನಿಲ್ಲದಂತೆ ಬೆಳೆ ಹಾಳಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಬೆಳೆ ಹಾಳಾಗಿದ್ದು, ಅದಕ್ಕೆ ಇನ್ನೂ ಪರಿಹಾರವೂ ದೊರಕಿಲ್ಲ. ಖರ್ಚು ಮಾಡಿದ ಅರ್ಧದಷ್ಟಾರೂ ಸರ್ಕಾರ ನೀಡಿದಲ್ಲಿ ಅನುಕೂಲ ಎನ್ನುವುದು ರೈತರ ಬೇಡಿಕೆ.

ಬೈಟ್ (೨) : ಮಂಜುನಾಥ ಕುರುಬರ, ರೈತ.

ಒಟ್ಟಾರೆಯಾಗಿ ರೈತರ ಸಮಸ್ಯೆ ಎಂದೂ ಮುಗಿಯದಂತಾಗಿದೆ. ಅತಿವೃಷ್ಟಿಯಿಂದ ರೈತರ ಜೀವನಕ್ಕೆ ಭಾರೀ ಹೊಡೆತ ಬಿದ್ದಿದ್ದು, ಸರ್ಕಾರ ಅವರನ್ನು ಮೇಲೆತ್ತಲು ಪ್ರಯತ್ನಿಸಲಿ ಎನ್ನುವುದು ನಮ್ಮ ಆಶಯವಾಗಿದೆ.

..........
ಸಂದೇಶ ಭಟ್ ಶಿರಸಿ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.