ETV Bharat / state

ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ: ಸಿಎಂ ಪ್ರವಾಸ ಮೊಟಕು

ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಇಂದು ಕಾರವಾರದ ಕದ್ರಾ ಹಾಗೂ ಗೋಟೆಗಾಳಿಯಲ್ಲಿ ನೆರೆಹಾನಿಯ ಪರಿಶೀಲನೆ ನಡೆಸಲಿದ್ದರು. ಆದ್ರೆ ಅಧಿಕ ಮಳೆ ಹಿನ್ನೆಲೆ ಸಿಎಂ ಪ್ರವಾಸ ಮೊಟಕುಗೊಂಡಿದೆ.

ಸಿಎಂ ಪ್ರವಾಸ ಮೊಟಕು
author img

By

Published : Aug 31, 2019, 11:53 AM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆ ಇಂದೂ ಸಹ ಮುಂದುವರೆದಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಇಂದು ಕಾರವಾರದ ಕದ್ರಾ ಹಾಗೂ ಗೋಟೆಗಾಳಿಯಲ್ಲಿ ನೆರೆಹಾನಿಯ ಪರಿಶೀಲನೆ ನಡೆಸಲಿದ್ದರು. ಆದ್ರೆ ಅಧಿಕ ಮಳೆಯ ಹಿನ್ನೆಲೆ ಸಿಎಂ ಪ್ರವಾಸ ಮೊಟಕುಗೊಂಡಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ

ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಶನಿವಾರ ಬೆಳಗ್ಗೆಯಿಂದಲೇ ಉತ್ತಮ ಮಳೆಯಾಗುತ್ತಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣವಿದೆ. ಇದೇ ವಾತಾವರಣ ಮುಂದುವರಿದ ಹಿನ್ನೆಲೆ ಹೆಲಿಕಾಪ್ಟರ್ ಇಳಿಸಲು ಕಷ್ಟವಾಗುವ ಕಾರಣ ಸಿಎಂ ಪ್ರವಾಸ ಮೊಟಕುಗೊಂಡಿದೆ.

ಇನ್ನು ಕರಾವಳಿಯ, ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರದಲ್ಲಿ ಬೆಳಗ್ಗೆಯಿಂದಲೂ ಮಳೆಯಾಗುತ್ತಿದ್ದು, ಹೊನ್ನಾವರ ಹಾಗೂ ಭಟ್ಕಳ ರಾಷ್ಟ್ರೀಯ ಹೆದ್ದಾರಿ 66 ರ ರಂಗಿನ ಕಟ್ಟೆ ಬಳಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದೆ‌.

Intro:Body:ಉತ್ತರಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ....ಸಿಎಂ ಪ್ರವಾಸ ಮೊಟಕುಗೊಳ್ಳುವ ಆತಂತ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆ ಶನಿವಾರವೂ ಮುಂದುವರಿದಿದ್ದು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರೆ ಪ್ರವಾಸ ವಿಳಂಭವಾಗಿದೆ.
ರಾಜ್ಯದ ನೂತನ ಮುಖ್ಯಮಂತ್ರಿಯಾದ ಬಳಿಕ ಇದೆ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ಬಿ.ಎಸ್. ಯಡಿಯೂರಪ್ಪ ಇಂದು ಕಾರವಾರದ ಕದ್ರಾ ಹಾಗೂ ಗೋಟೆಗಾಳಿಯಲ್ಲಿ ನೆರೆಹಾನಿಯ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಹಾವೇರಿ ಜಿಲ್ಲೆಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಇದಕ್ಕಾಗಿ ನಗರದ ಸರ್ಕ್ಯೂಟ್ ಹೌಸ್ ಬಳಿ ಪೊಲೀಸ್ ಹಾಗೂ ಬೆಂಬಲಿಗರು ಕಾದು ಕುಳಿತಿದ್ದಾರೆ. ಆದರೆ ಬೆಳಿಗ್ಗೆ ೧೦ ಕ್ಕೆ ಕಾರವಾರಕ್ಕೆ ಆಗಮಿಸಬೇಕಿದ್ದ ಮುಖ್ಯಮಂತ್ರಿ ೧೧ ಗಂಟೆಯಾದರು ಆಗಮಿಸಿಲ್ಲ.
ಜಿಲ್ಲೆಯ ಕಾರವಾರ ಸೇರಿದಂತೆ ಕರಾವಳಿ ಹಾಗೂ ಮಲೆನಾಡುಗಳಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಉತ್ತಮ ಮಳೆಯಾಗುತ್ತಿದ್ದು, ಸಂಪೂರ್ಣ ಮೋಡ ಕವಿದ ವಾತಾವರಣ ಇದೆ. ಇದೇ ವಾತಾವರಣ ಮುಂದುವರಿದಲ್ಲಿ ಹೆಲಿಕಾಪ್ಟರ್ ಇಳಿಸಲು ಕಷ್ಟವಾಗುವ ಕಾರಣ ಸಿಎಂ ಪ್ರವಾಸಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ.
ಇನ್ನು ಕರಾವಳಿಯ, ಕಾರವಾರ, ಅಂಕೋಲಾ, ಭಟ್ಕಳ, ಹೊನ್ನಾವರದಲ್ಲಿ ಬೆಳಿಗ್ಗೆಯಿಂದಲೂ ಮಳೆಯಾಗುತ್ತಿದ್ದು, ಹೊನ್ನಾವರ ಹಾಗೂ ಭಟ್ಕಳ ರಾಷ್ಟ್ರೀಯ ಹೆದ್ದಾರಿ ೬೬ ರ ರಂಗಿನ ಕಟ್ಟೆ ಬಳಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದೆ‌. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.