ಶಿರಸಿ : ಕಳೆದ ಎರಡು ದಿನಗಳಿಂದ ಉತ್ತರ ಕನ್ನಡದಲ್ಲಿ ಭಾರೀ ಮಳೆ ಆಗಿದ್ದು, ಸಿದ್ದಾಪುರ, ಯಲ್ಲಾಪುರ ಭಾಗಗಳಲ್ಲಿ ಬ್ರಿಡ್ಜ್, ಕಂಪೌಂಡ್ ಕುಸಿತ, ಮನೆಗಳಿಗೆ, ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿ 10 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ನಗರದಲ್ಲಿ ಸುರಿದ ಮಳೆಗೆ ಎಪಿಎಂಸಿ ಹೊರ ಆವರಣದ ಗೋಡೆ ಕುಸಿದು ಇಟ್ಟಿಗೆ ಕಲ್ಲುಗಳು ರಸ್ತೆಯ ತುಂಬಾ ಚೆಲ್ಲಾಪಿಲ್ಲಾಯಾಗಿವೆ. ರಸ್ತೆಗಳ ಮೇಲೆ ಕಲ್ಲುಗಳು ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದ್ದು, ಶೀಘ್ರ ಸ್ವಚ್ಚಗೊಳಿಸಬೇಕಾಗಿದೆ. ಅಲ್ಲದೆ ಆವರಣ ಇನ್ನಷ್ಟು ಕುಸಿಯದಂತೆ ತಡೆಗಟ್ಟುವ ಅಗತ್ಯವಿದ್ದು, ತಾಲೂಕಿನ ಹುಲೇಕಲ್ ಹೋಬಳಿಯ ಬಾಳೆಕಾಯಿಮನೆ ಗ್ರಾಮದಲ್ಲಿ ಬ್ರಿಡ್ಜ್ ಒಡೆದು 4,50,000/- ರೂಗಳಷ್ಟು ಹಾನಿಯಾಗಿದೆ ಎನ್ನಲಾಗುತ್ತಿದೆ.
ತಹಶೀಲ್ದಾರ ಭೇಟಿ:
ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ತಹಶೀಲ್ದಾರರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇದಲ್ಲದೇ ಮನೆಗಳಿಗೆ, ಕೊಟ್ಟಿಗೆಗೆ ಸಣ್ಣ ಪುಟ್ಟ ಹಾನಿಯಾದ ಘಟನೆಗಳು ಅಲ್ಲಲ್ಲಿ ವರದಿಯಾಗಿದೆ.