ಶಿರಸಿ: ತಾಲೂಕಿನಾದ್ಯಂತ ಶಿವರಾತ್ರಿಯಂದು ವರುಣ ಆರ್ಭಟಿಸಿದ್ದು, ಭರ್ಜರಿ ಮಳೆ ಸುರಿದಿದೆ. ಗಾಳಿ ಸಹಿತ ಗುಡುಗು ಸಿಡಿಲಿನ ಅಕಾಲಿಕ ಮಳೆಗೆ ಜನರು ಕಂಗಾಲಾಗಿದ್ದು, ಶಿವರಾತ್ರಿ ಆಚರಣೆಗೆ ಅಡ್ಡಿಯಾಗಿದೆ.
ಶಿವರಾತ್ರಿಯಂದು ಈ ಹಿಂದೆ ಶಿರಸಿಯಲ್ಲಿ ಮಳೆ ಸುರಿದ ಯಾವುದೇ ದಾಖಲೆಯಿಲ್ಲ. ಆದರೆ ಈ ಬಾರಿ ಶಿರಸಿ ನಗರ ಹಾಗೂ ಸುತ್ತಮುತ್ತ ಭರ್ಜರಿ ಮಳೆಯಾಗಿದೆ. ಮಧ್ಯಾಹ್ನ ಮಳೆ ಆರಂಭವಾಗಿದ್ದು, ಮಲೆನಾಡಿನ ಉಳಿದ ತಾಲೂಕುಗಳಲ್ಲಿ ಮೋಡ ಕವಿದ ವಾತಾವರಣವಿದೆ.
ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇರುವುದಾಗಿ ಹವಾಮಾನ ಇಲಾಖೆ ಹೇಳಿತ್ತು. ಆದರೆ ಇಂದು ಭರ್ಜರಿ ಮಳೆಯಾಗಿದೆ. ಕೆಲವೆಡೆ ಆಲಿಕಲ್ಲು ಬಿದ್ದಿದ್ದು, ಸಹಸ್ರಲಿಂಗ ಸೇರಿದಂತೆ ವಿವಿಧೆಡೆ ಶಿವರಾತ್ರಿ ಹಬ್ಬ ಆಚರಣೆಗೆ ಮಳೆರಾಯ ಅಡ್ಡಿಯಾಗಿದ್ದಾನೆ.