ಶಿರಸಿ: ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ತೀವ್ರ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಮಳೆಯ ಜೊತೆಗೆ ಗಾಳಿಯೂ ಸಹ ರಭಸದಿಂದ ಬೀಸುತ್ತಿದ್ದು ಹಲವೆಡೆ ಮರ ಗಿಡಗಳು ಧರೆಗುರುಳಿವೆ. ಇನ್ನು ಮಳೆಯಿಂದ ಹಲವು ಪ್ರಮುಖ ರಸ್ತೆಗಳು ಬಂದ್ ಆಗಿವೆ.
ಯಲ್ಲಾಪುರದ ಬೇಡ್ತಿ ನದಿ, ಶಿರಸಿ - ಸಿದ್ಧಾಪುರದ ಅಘನಾಶಿನಿ ನದಿಯು ತುಂಬಿ ಹರಿಯುತ್ತಿದ್ದು, ಸಿದ್ದಾಪುರದ ಸರಕುಳಿ ಸೇತುವೆಯ ಮೇಲೆ ನೀರು ಹರಿದಿದೆ.
ಹಲವು ಪ್ರದೇಶಗಳಲ್ಲಿ ಮನೆಗಳಗೂ ನೀರು ನುಗ್ಗಿದೆ. ಗಾಳಿಯಿಂದ ಬನವಾಸಿ ರಸ್ತೆ ಬ್ಲಾಕ್ ಆಗಿದ್ದು, ಸಾಕಷ್ಟು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನಿನ್ನೆ ರಾತ್ರಿಯಿಂದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಸರಿಪಡಿಸುವಲ್ಲಿ ನಿರತರಾಗಿದ್ದು, ಹಲವೆಡೆ ಟ್ರಾನ್ಸ್ಫಾರ್ಮರ್ಗಳು ಸಹ ಸುಟ್ಟು ಹೋಗಿದೆ.