ಭಟ್ಕಳ: ಗುಜರಾತ್‍ನ ಕೆಡಾ ಲೋಕಸಭಾ ಕ್ಷೇತ್ರದ ಸಂಸದ ದೇವಸಿಂಹ್ ಚೌವ್ಹಾಣ್ ಹಾಗೂ ಅವರ ಕುಟುಂಬದವರು ರಾಜ್ಯದ ಪ್ರಸಿದ್ಧ ಮುರ್ಡೇಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
![Gujarat MP Devasimh Chauhan visits Murdeshwar](https://etvbharatimages.akamaized.net/etvbharat/prod-images/kn-bkl-03-devasinh-chauhan-a-gujarat-mp-visit-murdeshwar-kac-10002_18112020190729_1811f_1605706649_956.jpg)
ಕೆಡಾ ಲೋಕಸಭಾ ಕ್ಷೇತ್ರದ ಸಂಸದ ದೇವಸಿಂಹ್ ಚೌವ್ಹಾಣ್ ಹಾಗೂ ಅವರ ಕುಟುಂಬದವರು ಮೊದಲು ಮಾತೋಬಾರನ ದರ್ಶನ ಪಡೆದು ನಂತರ ಮುರ್ಡೇಶ್ವರದ ಸೊಬಗನ್ನು ವಿಕ್ಷೀಸಿದರು.
ಭಟ್ಕಳ ಬಿಜೆಪಿ ಘಟಕ ಗಜರಾತ್ ಸಂಸದರನ್ನು ಸ್ವಾಗತಿಸಿ ಆತಿಥ್ಯ ನೀಡಿತು. ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಸುಬ್ರಾಯ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿರಣ್ ನಾಯ್ಕ ಹಾಗೂ ಯುವ ಮೋರ್ಚಾ ಉಪಾಧ್ಯಕ್ಷ ಜಯಂತ ಮೂಡಲಮನೆ ಸೇರಿದಂತೆ ಇತರರು ಇದ್ದರು.