ETV Bharat / state

ಕೈ ಮುರಿದ ವ್ಯಕ್ತಿ ಮೇಲೆ ಹಲ್ಲೆ: ವಿಡಿಯೋ ವೈರಲ್ ಬೆನ್ನಲ್ಲೇ ಹೆಚ್ಚಿನ ತನಿಖೆಗೆ ಸೂಚಿಸಿದ ಎಸ್​ಪಿ - ಕೈ ಮುರಿದ ವ್ಯಕ್ತಿ ಮೇಲೆ ಹಲ್ಲೆ

ನಗರದ ಬಾಡ ಐಟಿಐ ಕಾಲೇಜಿನ ರಸ್ತೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಗುಂಪೊಂದು ದೊಣ್ಣೆಯಿಂದ ಹಲ್ಲೆ ಮಾಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿತ್ತಿದೆ. ಕೈ ಮುರಿದ ವ್ಯಕ್ತಿ ಮೇಲೆ ಹಲ್ಲೆ ಮಾಡಿರುವ ಈ ವಿಡಿಯೋ ಭಾರೀ ವೈರಲ್​ ಆಗುತ್ತಿದೆ.

ಕೈ ಮುರಿದ ವ್ಯಕ್ತಿ ಮೇಲೆ ಹಲ್ಲೆ: ವಿಡಿಯೋ ವೈರಲ್ ಬೆನ್ನಲ್ಲೇ ಹೆಚ್ಚಿನ ತನಿಖೆಗೆ ಸೂಚಿಸಿದ ಎಸ್​ಪಿ

author img

By

Published : Aug 22, 2022, 9:10 PM IST

ಕಾರವಾರ(ಉತ್ತರ ಕನ್ನಡ): ವ್ಯಕ್ತಿಯೋರ್ವನಿಗೆ ದೊಣ್ಣೆಯಿಂದ ರಸ್ತೆ ಮೇಲೆಯೇ ಗುಂಪೊಂದು ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್​ ಪೆನ್ನೇಕರ್ ಹೆಚ್ಚಿನ‌ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ನಗರದ ಬಾಡ ಐಟಿಐ ಕಾಲೇಜಿನ ರಸ್ತೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಗುಂಪೊಂದು ದೊಣ್ಣೆಯಿಂದ ಕೈ ಮುರಿದ ವ್ಯಕ್ತಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೋರ್ವನನ್ನು ಸುತ್ತುವರಿದ ಗುಂಪು ಮನಬಂದಂತೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಆತ ಕೈಮುರಿದ ವ್ಯಕ್ತಿ ಅನ್ನೋದನ್ನು ಸಹ ನೋಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ವಿಡಿಯೋ ವೈರಲ್ ಬೆನ್ನಲ್ಲೇ ಹೆಚ್ಚಿನ ತನಿಖೆಗೆ ಸೂಚಿಸಿದ ಎಸ್​ಪಿ

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೇಳಿದಾಗ ಘಟನೆ ಕುರಿತು ಕೆಲ ದಿನಗಳ ಹಿಂದಷ್ಟೇ ಕಾರವಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಪ್ರಕಾಶ್ ಎಂದು ಗುರುತಿಸಲಾಗಿದೆ. ಅವರು ನೀಡಿದ್ದ ದೂರಿನಲ್ಲಿ ಅಂಗಡಿಯಲ್ಲಿ ಪಡೆದಿದ್ದ ವಸ್ತುವಿಗೆ ಹಣ ನೀಡಿಲ್ಲ ಎಂದು ವಿನೋದ್ ಬಿಣಗೇಕರ್, ಕಾರ್ತಿಕ ನಾಯ್ಕ ಹಾಗೂ ಸೂರ್ಯಕಾಂತ ಕಳಸ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.

ದೂರು ನೀಡಿದವರು ಹಣದ ವಿಚಾರಕ್ಕೆ ಕೇವಲ ಹಲ್ಲೆ ಎಂದಷ್ಟೇ ತಿಳಿಸಿದ್ದು, ಈ ಹಿನ್ನೆಲೆ ಸಣ್ಣ ಪ್ರಕರಣವೆಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಈ ಬಳಿಕ ವಿಡಿಯೋ ವೈರಲ್ ಆದ ಹಿನ್ನೆಲೆ ಘಟನೆಯ ಗಂಭೀರತೆ ಅರಿವಿಗೆ ಬಂದಿದೆ. ಇನ್ನಷ್ಟು ಮಂದಿ ಪ್ರಕರಣದಲ್ಲಿರುವ ಹಿನ್ನೆಲೆ ಅವರನ್ನೂ ಸಹ ಬಂಧಿಸಲಾಗುತ್ತದೆ ಎಂದು ಎಸ್​ ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ತಾಯಿ ಮನೆಯಲ್ಲಿದ್ದ ಹೆಂಡತಿ ಕರೆಸಿ ಹತ್ಯೆ; ಗಂಡನೂ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.