ETV Bharat / state

ಪುಣೆಯ ಜರ್ಮನ್​ ಬೇಕರಿ ಸ್ಫೋಟ ಪ್ರಕರಣ.. ಆರೋಪಿಯ ಜಾಡು ಹಿಡಿದು ಭಟ್ಕಳಕ್ಕೆ ಬಂದ ATS - ರಿಯಾಜ್​ ಭಟ್ಕಳ

ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಟಿಎಸ್ ತಂಡ ಭಟ್ಕಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದೆ.

ಭಟ್ಕಳಕ್ಕೆ ಬಂದ ATS
ಭಟ್ಕಳಕ್ಕೆ ಬಂದ ATS
author img

By

Published : Jul 8, 2021, 11:03 AM IST

Updated : Jul 8, 2021, 11:15 AM IST

ಭಟ್ಕಳ: ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಎಟಿಎಸ್ ತಂಡ (ಆ್ಯಂಟಿ ಟೆರರಿಸ್ಟ್ ಸ್ಕ್ವ್ಯಾಡ್ ) ಬುಧವಾರ ಭಟ್ಕಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ರಿಯಾಜ್​ ಭಟ್ಕಳ ಮೂಲದವನಾಗಿರುವುದರಿಂದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಉಗ್ರ ರಿಯಾಜ್​ ಸಂಬಂಧಿಕರು ಭಟ್ಕಳದಲ್ಲಿ ಬೇಕರಿ ನಡೆಸುತ್ತಿದ್ದಾರೆಂಬ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು, ಯಾಸಿನ್​ ಭಟ್ಕಳ್, ಇಕ್ಬಾಲ್ ಭಟ್ಕಳ ಮನೆಗೂ ತೆರಳಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಪಾಸ್ ಪೋರ್ಟ್ ಪಡೆದಿರುವ ಶಂಕೆ:

ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಸಹೋದರರು ಮುಂಬೈನಲ್ಲೇ ಹುಟ್ಟಿ ಬೆಳೆದರೂ ಅವರ ಕುಟುಂಬದ ಮೂಲ ಭಟ್ಕಳವಾಗಿರುವುದರಿಂದ ಇವರ ಕೆಲ ಸಂಬಂಧಿಕರು ಇಲ್ಲೇ ನೆಲೆಸಿದ್ದಾರೆ. ಈ ಸಂಬಂಧ ರಿಯಾಜ್ ಹಾಗೂ ಇಕ್ಬಾಲ್ ಸೋದರರು ಕೆಲಕಾಲ ಭಟ್ಕಳದಲ್ಲಿ ಬಂದು ನೆಲೆಸಿದ್ದರು.

ಮುಂಬೈನಲ್ಲೇ ಹುಟ್ಟಿ ಬೆಳೆದರೂ ಇವರಿಬ್ಬರು ಬೆಂಗಳೂರಿನಲ್ಲಿ ಪಾಸ್​​ಪೋರ್ಟ್ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದು ರಾಜ್ಯದಲ್ಲಿ ಹುಟ್ಟಿ ಇನ್ನೊಂದು ರಾಜ್ಯದ ಪಾಸ್​​ಪೋರ್ಟ್ ಹೇಗೆ ಪಡೆಯಲು ಸಾಧ್ಯ ಎಂಬುದರ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯಿದೆ.

Last Updated : Jul 8, 2021, 11:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.