ETV Bharat / state

ಹಳ್ಳಿಮಕ್ಕಳ ಆನ್‌ಲೈನ್‌ ಶಿಕ್ಷಣಕ್ಕಾಗಿ ಮನೆಯಲ್ಲೇ ಉಚಿತ ಇಂಟರ್ನೆಟ್‌ ಕಲ್ಪಿಸಿದ ಯುವಕ

ಈಗ ಶಾಲಾ-ಕಾಲೇಜು ತೆರೆಯದ ಹಿನ್ನೆಲೆ ಹಳ್ಳಿಯಲ್ಲಿಯೇ ಕುಳಿತು ಆನ್‌ಲೈನ್ ಶಿಕ್ಷಣ ಪಡಯುವ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ವಂತ ಖರ್ಚಿನಲ್ಲಿ ಈ‌ ವ್ಯವಸ್ಥೆ ಕಲ್ಪಿಸಿದ್ದಾರೆ..

free internet facility to rural students
ಉಚಿತ ಇಂಟರ್​ನೆಟ್​ ಕಲ್ಪಿಸಿದ ನಾಯ್ಕ್
author img

By

Published : Sep 18, 2020, 8:50 PM IST

ಕಾರವಾರ : ಕೊರೊನಾದಿಂದಾಗಿ ಶಾಲೆಗಳು ಮುಚ್ಚಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆನ್​ಲೈನ್ ಮೂಲಕ ಪಾಠ ಮಾಡಲಾಗುತ್ತಿದೆ. ಆದರೆ, ನೆಟ್​ವರ್ಕ್ ಸಿಗದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.

ಉಚಿತ ಇಂಟರ್ನೆಟ್​ ಕಲ್ಪಿಸಿದ ನಾಯ್ಕ್

ಈ ಸಮಸ್ಯೆ ಅರಿತ ಇವರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಇಂಟರ್ನೆಟ್‌ ವ್ಯವಸ್ಥೆ ಕಲ್ಪಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಕ್ಕಳ ಕಲಿಕಾ ಆಸಕ್ತಿ ಕುಗ್ಗಬಾರದು ಎನ್ನುವ ದೃಷ್ಟಿಯಿಂದ ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್​ಲೈನ್ ಶಿಕ್ಷಣ ಆರಂಭಿಸಿವೆ. ಆದರೆ, ಗ್ರಾಮೀಣ ಭಾಗದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ತುತ್ತಾಗಿದೆ.

ಕಾರವಾರ ತಾಲೂಕಿನ ಸಿದ್ದರ ಸಮಾಜ ಸೇವಕ ಸಾಗರ ನಾಯ್ಕ್ ಉಚಿತ ಇಂಟರ್ನೆಟ್‌ ಒದಗಿಸಿದ್ದಾರೆ. ಬಿಎಸ್​ಎನ್​ಎಲ್ ಹೊರತುಪಡಿಸಿ ಬೇರೆ ಯಾವುದೇ ನೆಟ್​ವರ್ಕ್​ ಬಾರದ ಕಾರಣ ಬ್ರಾಡ್ ಬ್ಯಾಂಡ್ ಮೂಲಕ ತಮ್ಮ ಮನೆಯ ಒಂದು ಕೋಣೆಯನ್ನು ಮಕ್ಕಳ ಆನ್​ಲೈನ್ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದಾರೆ.

ಬಹುತೇಕ ಮಕ್ಕಳು ಹೆಚ್ಚಿನ ಶಿಕ್ಷಣಕ್ಕಾಗಿ ಮಂಗಳೂರು, ಹುಬ್ಬಳ್ಳಿ ಹೀಗೆ ಬೇರೆ ಜಿಲ್ಲೆ ಅವಲಂಬಿಸಿದ್ದಾರೆ. ಆದರೆ, ಈಗ ಶಾಲಾ-ಕಾಲೇಜು ತೆರೆಯದ ಹಿನ್ನೆಲೆ ಹಳ್ಳಿಯಲ್ಲಿಯೇ ಕುಳಿತು ಆನ್‌ಲೈನ್ ಶಿಕ್ಷಣ ಪಡಯುವ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ವಂತ ಖರ್ಚಿನಲ್ಲಿ ಈ‌ ವ್ಯವಸ್ಥೆ ಕಲ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.