ETV Bharat / state

5 ವರ್ಷದಿಂದ ಪರಿಹಾರ ಕಾಣದ ಕುಟುಂಬ ಕಲಹ ತಹಶೀಲ್ದಾರ್ ಮಧ್ಯಸ್ಥಿಕೆಯಿಂದ ಇತ್ಯರ್ಥ..

author img

By

Published : Oct 22, 2019, 11:34 PM IST

2014ರಲ್ಲಿ ಊರಿನ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಹುಟ್ಟಿಕೊಂಡಿದ್ದ ಸಣ್ಣ ಜಗಳದಿಂದ ಗಾಭಿತವಾಡದ ಸುಮಾರು 500ಕ್ಕೂ ಹೆಚ್ಚು ಮನೆಯವರು ತಮ್ಮ ಕುಟುಂಗಳನ್ನು ಪ್ರತ್ಯೇಕ ಇಟ್ಟಿದ್ದರು.

ತಹಶೀಲ್ದಾರ್ ನೇತೃತ್ವದಲ್ಲಿ ರಾಜಿ ಸಂಧಾನ ನಡೆಯಿತು

ಕಾರವಾರ: ಕಳೆದ ಐದು ವರ್ಷಗಳ ಹಿಂದೆ ಕುಟುಂಬವೊಂದಕ್ಕೆ ಸಮಾಜದವರು ಹಾಕಿದ್ದರು ಎನ್ನಲಾದ ಜಾತಿ ಬಹಿಷ್ಕಾರವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಇತ್ಯರ್ಥಪಡಿಸಿದ ಘಟನೆ ಕಾರವಾರದ ಸುಂಕೇರಿಯ ಗಾಭಿತವಾಡದಲ್ಲಿ ನಡೆದಿದೆ.

2014ರಲ್ಲಿ ಊರಿನ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಹುಟ್ಟಿಕೊಂಡಿದ್ದ ಸಣ್ಣ ಜಗಳದಿಂದ ಗಾಭಿತವಾಡದ ಸುಮಾರು 500ಕ್ಕೂ ಹೆಚ್ಚು ಮನೆಯವರು ತಮ್ಮ ಕುಟುಂಗಳನ್ನು ಪ್ರತ್ಯೇಕ ಇಟ್ಟಿದ್ದರು. ತಮ್ಮೊಂದಿಗೆ ಯಾರೂ ಮಾತನಾಡುವುದಿಲ್ಲ. ತಮ್ಮ ವೃತ್ತಿಗೆ ಅಡ್ಡಿಪಡಿಸುತ್ತಿರುವುದಲ್ಲದೆ ನಮ್ಮ ದೋಣಿಗಳನ್ನು ಇಡಲು ಊರಿನವರು ಅವಕಾಶ ನೀಡುತ್ತಿಲ್ಲ. ಮತ್ತು ದೇವಸ್ಥಾನಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಕಾಶಿನಾಥ ಅಂಕೋಲೇಕರ್ ಎಂಬುವರ ಕುಟುಂಬಸ್ಥರು ಇತ್ತೀಚೆಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.

ತಹಶೀಲ್ದಾರ್ ನೇತೃತ್ವದಲ್ಲಿ ರಾಜಿ ಸಂಧಾನ..

ಅದರಂತೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಾರವಾರ ತಹಶೀಲ್ದಾರ್ ಆರ್‌ ವಿ ಕಟ್ಟಿ, ಹಿಂದುಳಿದ ವರ್ಗದ ಸಮಾಜಕಲ್ಯಾಣ ಇಲಾಖೆಯ ಬಸವರಾಜ್ ಬಡಿಗೇರ್ ಹಾಗೂ ಇತರೆ ಅಧಿಕಾರಿಗಳು ಊರಿಗೆ ತೆರಳಿ ಬಹಿಷ್ಕಾರಕ್ಕೊಳಗಾದ ಕುಟುಂಬದವರು ಹಾಗೂ ಊರಿನವರೊಂದಿಗೆ ದೇವಸ್ಥಾನದಲ್ಲಿ ರಾಜಿ ಸಂಧಾನ ಸಭೆ ನಡೆಸಿದ್ದಾರೆ. ಈ ವೇಳೆ 2014ರಿಂದಲೂ ಊರಿನವರು ನಮ್ಮನ್ನು ದೂರ ಇಟ್ಟಿದ್ದಾರೆ ಎಂದು ಮಹಿಳೆಯೊಬ್ಬಳು ಅಧಿಕಾರಿಗಳ ಎದುರು ಅಲವತ್ತುಕೊಂಡಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಊರಿನವರು ವರ್ಷಕ್ಕೆ ಎರಡು ಮೂರು ಬಾರಿ ಊರಿನಲ್ಲಿ ದೇವಿಯ ವಿಶೇಷ ಪೂಜೆ ನಡೆಯುತ್ತದೆ. ಈ ವೇಳೆ ಉತ್ಸವ ಊರ ಮಧ್ಯೆ ಸಾಗುವುದರಿಂದ ರಸ್ತೆ ಸಾಲುತ್ತಿರಲಿಲ್ಲ.

ಈ ಕಾರಣಕ್ಕೆ ಎಲ್ಲರೂ ಸೇರಿ ರಸ್ತೆ ಅಭಿವೃದ್ಧಿಗೆ ಸ್ವಲ್ಪ ಜಾಗ ಬಿಡುವಂತೆ ಮನವಿ ಮಾಡಲಾಗಿತ್ತು. ಹಲವು ವರ್ಷಗಳಿಂದ ನಡೆದುಕೊಂಡಿದ್ದ ಧಾರ್ಮಿಕ ಆಚರಣೆಗೆ ಎಲ್ಲರೂ ಸಮ್ಮತಿ ಸಹ ಸೂಚಿಸಿದ್ದರು. ಆದರೆ, ಈ ಕುಟುಂಬದವರು ಮಾತ್ರ ಜಾಗ ಬಿಟ್ಟಿರಲಿಲ್ಲ. ಇದರಿಂದ ಅವರೊಂದಿಗೆ ನಾವು ಯಾವುದೇ ಒಡನಾಟ ಬೆಳೆಸುತ್ತಿಲ್ಲ. ಆದರೆ, ನಮ್ಮ ಸಮಾಜದಿಂದ ಯಾವುದೇ ರೀತಿಯ ಬಹಿಷ್ಕಾರ ಹಾಕಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹೀಗೆ ಇಬ್ಬರ ವಾದವನ್ನು ಆಲಿಸಿದ ತಹಶೀಲ್ದಾರ್ ಆರ್‌ ವಿ ಕಟ್ಟಿ ಮಾತನಾಡಿ, ಜಾತಿ ಬಹಿಷ್ಕಾರ ಕಾನೂನಿಗೆ ವಿರುದ್ಧವಾಗಿದೆ. ಯಾರೇ ಈ ಕೃತ್ಯ ಎಸಗಿದರು ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಒಂದು ಕುಟುಂಬವನ್ನು ಪ್ರತ್ಯೇಕಿಸುವುದು ಸರಿಯಲ್ಲ. ನಮ್ಮ ನಡುವೆ ಇರುವ ಸಮಸ್ಯೆಗಳನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕು. ಇನ್ಮುಂದೆ ದೇವಸ್ಥಾನ ಎಲ್ಲರಿಗೂ ಮುಕ್ತವಾಗಿದೆ. ಇದಕ್ಕೆ ಯಾರೂ ವಿರೋಧ ಮಾಡದೇ ಇಬ್ಬರು ಒಪ್ಪಲೇಬೇಕು ಎಂದಾಗ ಊರಿನವರು ಹಾಗೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು.

ಇನ್ನು, ರಸ್ತೆಯಿಂದಾಗಿ ಈ ಸಮಸ್ಯೆ ಎದುರಾಗಿದೆ. ಆದರೆ, ಆ ಕುಟುಂಬದ ಹೆಚ್ಚಿನ ಜಾಗ ಹೋಗದಂತೆ ರಸ್ತೆ ಮಾಡಬೇಕಿದೆ. ಈ ಬಗ್ಗೆ ಸುತ್ತಮುತ್ತಲಿನವರು ಒಪ್ಪಿದರೇ ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಿದೆ. ರಸ್ತೆಗೆ ಏನು ಜಾಗ ಬೇಕೋ ಅದನ್ನು ಸರ್ವೆ ಮೂಲಕ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಇನ್ನು, ಇದಕ್ಕೆ ಪ್ರತಿಕ್ರಿಯಿಸಿದ ಕುಟುಂಬದ ಸದಸ್ಯೆ ಸ್ನೇಹಾ ಸಂತೋಷ ಅಂಕೋಲೇಕರ್, ನಮ್ಮ ಜಾಗವನ್ನು ಬಿಡುವ ಮೊದಲು ಸಿಟಿ ಸರ್ವೆ ನಡೆಸಬೇಕು. ಆಗ ಮಾತ್ರ ಈ ಸಂಧಾನವನ್ನು ಒಪ್ಪುತ್ತೇವೆ. ಊರಿನವರು ಈಗ ಒಪ್ಪುತ್ತಾರೆ ಆಮೇಲೆ ಸರ್ವೆ ಮಾಡಲು ಬಿಡುವುದಿಲ್ಲ. ನಮಗೆ ಐದು ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ಒಂದೇ ಸಮಾಜದವರು ಅವರದೇ ಕುಟುಂಬವೊಂದರ ಮೇಲೆ ಬಹಿಷ್ಕಾರ ಹಾಕಿದ್ದಾರೆ ಎಂಬ ದೂರು ಬಂದಿತ್ತು. ಅದರಂತೆ ಇಬ್ಬರನ್ನೂ ಕರೆಸಿ ಸಂಧಾನ ನಡೆಸಲಾಗಿದೆ. ದೇವಸ್ಥಾನಕ್ಕೆ ವರಗಣಿ ನೀಡುವ ಬಗ್ಗೆ ಮತ್ತು ಜಾತಿ ಬಹಿಷ್ಕಾರ ಹಾಕದ ಬಗ್ಗೆ ಇಬ್ಬರು ಒಪ್ಪಿದ್ದಾರೆ. ಜಾಗದ ಸಮಸ್ಯೆಯನ್ನು ಸರ್ವೆ ಮೂಲಕ ಇತ್ಯರ್ಥ ಪಡಿಸಲಾಗುದು ಎಂದು ಇದೇ ವೇಳೆ ತಹಶೀಲ್ದಾರರು ಮಾಹಿತಿ ನೀಡಿದರು.

Intro:

Body:(exclusive)

ಕಾರವಾರ: ಕಳೆದ ಐದು ವರ್ಷಗಳ ಹಿಂದೆ ಕುಟುಂಬವೊಂದಕ್ಕೆ ಸಮಾಜದವರು ಹಾಕಿದ್ದರು ಎನ್ನಲಾದ ಜಾತಿ ಬಹಿಷ್ಕಾರವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಇತ್ಯರ್ಥಪಡಿಸಿದ ಘಟನೆ ಕಾರವಾರದ ಸುಂಕೇರಿಯ ಗಾಭಿತವಾಡದಲ್ಲಿ ಇಂದು ನಡೆದಿದೆ.
೨೦೧೪ ರಲ್ಲಿ ಊರಿನ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಹುಟ್ಟಿಕೊಂಡಿದ್ದ ಸಣ್ಣ ವ್ಯಾಜ್ಯದಲ್ಲಿ ಗಾಭೀತವಾಡದ ಸುಮಾರು ೫೦೦ ಕ್ಕೂ ಹೆಚ್ಚು ಮನೆಯವರು ತಮ್ಮ ಕುಟುಂಬವನ್ನು ಪ್ರತ್ಯೇಕವಾಗಿ ಇಟ್ಟಿದ್ದಾರೆ. ತಮ್ಮೊಂದಿಗೆ ಯಾವುದೇ ಮಾತನಾಡುವುದಿಲ್ಲ. ತಮ್ಮ ವೃತ್ತಿಗೆ ಅಡ್ಡಿಪಡಿಸುತ್ತಿರುವುದಲ್ಲದೆ ನಮ್ಮ ದೋಣಿಗಳನ್ನು ಊರಿನವರು ಇಡುವಲ್ಲಿ ಅವಕಾಶ ನೀಡುವುದಿಲ್ಲ. ದೇವಸ್ಥಾನಕ್ಕೆ ತೆರಳಲು ಮತ್ತು ದೇಣಿಗೆ ಪಡೆಯುವುದಿಲ್ಲ ಎಂದು ಕಾಶಿನಾಥ ಅಂಕೋಲೆಕರ್ ಕುಟುಂಬದವರು ಇತ್ತೀಚೆಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.
ಅದರಂತೆ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕಾರವಾರ ತಹಶಿಲ್ದಾರ್ ಆರ್.ವಿ ಕಟ್ಟಿ, ಹಿಂದುಳಿದ ವರ್ಗದ ಸಮಾಜಕಲ್ಯಾಣ ಇಲಾಖೆಯ ಬಸವರಾಜ್ ಬಡಿಗೇರ್ ಹಾಗೂ ಇತರೆ ಅಧಿಕಾರಿಗಳು ಊರಿಗೆ ತೆರಳಿ ಬಹಿಷ್ಕಾರಕ್ಕೊಳಗಾದ ಕುಟುಂಬದವರು ಹಾಗೂ ಊರಿನವರೊಂದಿಗೆ ದೇವಸ್ಥಾನದಲ್ಲಿ ರಾಜಿ ಸಂಧಾನ ಸಭೆ ನಡೆಸಿದರು.
೨೦೧೪ ರಿಂದಲೂ ಊರಿನವರು ನಮ್ಮನ್ನು ದೂರ ಇಟ್ಟಿದ್ದಾರೆ. ನಾವು ಯಾರ ಜಾಗವನ್ನು ಕಬಳಿಸಿಲ್ಲ. ಆದರೆ ನಮಗೆ ಊರಿನ ಬಳಿ ದೋಣಿ ಇಡಲು ಜಾಗ ನೀಡುತ್ತಿಲ್ಲ. ಇದರಿಂದ ಒಂದು ಕಿ. ಮೀ ದೂರದಲ್ಲಿ ದೋಣಿ ಇಟ್ಟು ಬರುತ್ತಿದ್ದೇವೆ. ಅಲ್ಲದೆ ನಾವು ಇಡುವ ಜಾಗದಲ್ಲಿಯೂ ಆ ಊರಿನವರಿಗೆ ಇಡಲು ಅವಕಾಶ ಕೊಡದಂತೆ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಬರಲು ನೀಡುವುದಿಲ್ಲ. ದೇವಸ್ಥಾನಕ್ಕೆ ದೇಣಿಗೆ ಪಡೆಯುವುದಿಲ್ಲ ಎಂದು ಕುಟುಂಬ ಮಹಿಳೆಯೊಬ್ಬಳು ಅಧಿಕಾರಿಗಳ ಎದುರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಊರಿನವರು ಊರಿನಲ್ಲಿ ವರ್ಷಕ್ಕೆ ಎರಡು ಮೂರು ಭಾರಿ ದೇವಿಯ ವಿಶೇಷ ಪೂಜೆ ನಡೆಯುತ್ತದೆ. ಈ ವೇಳೆ ಪಾಲಿಕೆ ಊರ ಮಧ್ಯೆ ಸಾಗುವುದರಿಂದ ರಸ್ತೆ ಸಾಲುತ್ತಿರಲಿಲ್ಲ. ಈ ಕಾರಣಕ್ಕೆ ಊರಿನವರೂ ಎಲ್ಲರೂ ಸೇರಿ ರಸ್ತೆ ಅಭಿವೃದ್ಧಿಗೆ ಸ್ವಲ್ಪ ಜಾಗ ಬಿಡುವಂತೆ ಮನವಿ ಮಾಡಲಾಗಿತ್ತು. ಹಲವು ವರ್ಷಗಳಿಂದ ನಡೆದುಕೊಂಡಿದ್ದ ಧಾರ್ಮಿಕ ಆಚರಣೆಗೆ ಎಲ್ಲರೂ ಸಮ್ಮತಿ ಸಹ ಸೂಚಿಸಿದ್ದರು. ಆದರೆ ಈ ಕುಟುಂಬದವರು ಮಾತ್ರ ಬಿಟ್ಟಿಲ್ಲ. ಇದರಿಂದ ಅವರೊಂದಿಗೆ ನಾವು ಯಾವುದೇ ಒಡನಾಟ ಬೆಳೆಸುತ್ತಿಲ್ಲ. ಆದರೆ ನಮ್ಮ ಸಮಾಜದಿಂದ ಯಾವುದೇ ರಿತಿಯ ಬಹಿಷ್ಕಾರ ಹಾಕಿಲ್ಲ ಎಂದು ಅಧಿಕಾರಿಗಳ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹೀಗೆ ಇಬ್ಬರ ವಾದವನ್ನು ಆಲಿಸಿದ ತಹಶೀಲ್ದಾರ್ ಆರ್. ವಿ. ಕಟ್ಟಿ ಬಳಿಕ ಮಾತನಾಡಿ, ಜಾತಿ ಬಹಿಷ್ಕಾರ ಕಾನೂನಿಗೆ ವಿರುದ್ಧವಾಗಿದೆ. ಯಾರೇ ಈ ಕೃತ್ಯ ಎಸಗಿದರು ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಒಂದು ಕುಟುಂಬವನ್ನು ಪ್ರತ್ಯೇಕಿಸುವುದು ಸರಿಯಲ್ಲ. ನಮ್ಮ ನಡುವೆ ಇರುವ ಸಮಸ್ಯೆಗಳನ್ನು ಮಾತಿನ ಮೂಲಕ ಬಗೆಹರಿಸಿಕೊಳ್ಳಬೇಕು. ಇನ್ನುಮುಂದೆ ದೇವಸ್ಥಾನ ಎಲ್ಲರಿಗೂ ಮುಕ್ತವಾಗಿದೆ. ಇದಕ್ಕೆ ಯಾರು ವಿರೋಧ ಮಾಡದೇ ಇಬ್ಬರು ಒಪ್ಪಲೇ ಬೇಕು ಎಂದಾಗ ಊರಿನವರು ಹಾಗೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದರು.
ಇನ್ನು ರಸ್ತೆ ಸಮಸ್ಯೆಯಿಂದಾಗಿ ಈ ಸಮಸ್ಯೆ ಎದುರಾಗಿದೆ. ಆದರೆ ಆ ಕುಟುಂಬದ ಹೆಚ್ಚಿನ ಜಾಗ ಹೋಗದಂತೆ ರಸ್ತೆ ಮಾಡಬೇಕಿದೆ. ಈ ಬಗ್ಗೆ ಸುತ್ತಮುತ್ತಲಿನವರು ಒಪ್ಪಿದರೇ ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಿದೆ. ರಸ್ತೆಗೆ ಏನು ಜಾಗ ಬೇಕೋ ಅದನ್ನು ಸರ್ವೆ ಮೂಲಕ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಇನ್ನು ಇದಕ್ಕೆ ಪ್ರತಿಕ್ರಯಿಸಿದ ಕುಟುಂಬದ ಸದಸ್ಯೆ ಸ್ನೇಹಾ ಸಂತೋಷ ಅಂಕೋಲೆಕರ್, ನಮ್ಮ ಜಾಗವನ್ನು ಬಿಡುವ ಮೊದಲು ಸಿಟಿ ಸರ್ವೆ ನಡೆಸಬೇಕು. ಆಗ ಮಾತ್ರ ಈ ಸಂಧಾನವನ್ನು ಒಪ್ಪುತ್ತೇವೆ. ಊರಿನವರು ಈಗ ಒಪ್ಪುತ್ತಾರೆ ಆಮೇಲೆ ಸರ್ವೆ ಮಾಡಲು ಬಿಡುವುದಿಲ್ಲ. ನಮಗೆ ಐದು ವರ್ಷದಿಂದ ಬಹಿಷ್ಕಾರ ಹಾಕಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಒಂದೇ ಸಮಾಜದವರು ಅವರದೇ ಕುಟುಂಬವೊಂದರ ಮೇಲೆ ಬಹಿಷ್ಕಾರ ಹಾಕಿದ್ದಾರೆ ಎಂಬ ದೂರು ಬಂದಿತ್ತು. ಅದರಂತೆ ಇಬ್ಬರನ್ನು ಕರೆಸಿ ಸಂಧಾನ ನಡೆಸಲಾಗಿದೆ. ದೇವಸ್ಥಾನಕ್ಕೆ ವರಗಣಿ ನೀಡುವ ಬಗ್ಗೆ ಮತ್ತು ಜಾತಿ ಬಹಿಷ್ಕಾರ ಹಾಕದ ಬಗ್ಗೆ ಇಬ್ಬರು ಒಪ್ಪಿದ್ದಾರೆ. ಜಾಗದ ಸಮಸ್ಯೆಯನ್ನು ಸರ್ವೆ ಮೂಲಕ ಇತ್ಯರ್ಥ ಪಡಿಸಲಾಗುದು ಎಂದು ಇದೇ ವೇಳೆ ತಹಶೀಲ್ದಾರರು ಮಾಹಿತಿ ನೀಡಿದರು.

ಬೈಟ್ ೧ ಸ್ನೇಹಾ ಸಂತೋಷ್ ಅಂಕೋಲೆಕರ್, ಬಹಿಷ್ಕಾರಕ್ಕೊಳಗಾದ ಕುಟುಂಬದ ಸದಸ್ಯೆ

ಬೈಟ್ ೨ ಆರ್. ವಿ. ಕಟ್ಟಿ , ಕಾರವಾರ ತಹಶೀಲ್ದಾರರು

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.