ETV Bharat / state

ಉತ್ತರಕನ್ನಡ ಜಿಲ್ಲಾದ್ಯಂತ  ಐದು ದಿನ ನಿಷೇದಾಜ್ಞೆ... ಭಟ್ಕಳ ಸಂಪೂರ್ಣ ಶಟ್​​ ಡೌನ್...! - ಉತ್ತರಕನ್ನಡ ಜಿಲ್ಲೆಯಾದ್ಯಂತ ಐದು ದಿನ ನಿಷೇದಾಜ್ಞೆ

ಜನರು ಸ್ವಯಂ ಪ್ರೇರಿತರಾಗಿ ರೋಗ ತಡೆಯಲು ಮುಂದೆ ಬರಬೇಕು. ಅಂಗಡಿ, ಮುಂಗಟ್ಟು, ಹೋಟೆಲ್​ಗಳಲ್ಲಿ ಯಾವುದೇ ಕಾರಣಕ್ಕೂ ಗುಂಪು ಸೇರಬಾರದು. ಜನರಿಗೆ ಅವಶ್ಯ ಸಾಮಗ್ರಿಗಳನ್ನು ಪೂರೈಸುವ ಹಾಲು, ಕಿರಾಣಿ ಸಾಮಗ್ರಿ ಸೇರಿದಂತೆ ಹೋಟೆಲ್​​​ ಮಾಲೀಕರುಗಳು ಮನೆ ಬಾಗಿಲಿಗೆ ತಲುಪಿಸಲು ಪ್ರಯತ್ನಿಸಬೇಕು. ಅನವಶ್ಯಕವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆಗೆಯದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

curfew on Uttara Kannada district
ಉತ್ತರಕನ್ನಡ ಜಿಲ್ಲೆಯಾದ್ಯಂತ ಐದು ದಿನ ನಿಷೇದಾಜ್ಞೆ
author img

By

Published : Mar 23, 2020, 7:00 PM IST

Updated : Mar 23, 2020, 10:06 PM IST

ಕಾರವಾರ: ಕೊರೊನಾ ವೈರಸ್ ತಡೆಗಟ್ಟುವ ಸಂಬಂಧ ಉತ್ತರಕನ್ನಡ ಜಿಲ್ಲಾದ್ಯಂತ ಮಂಗಳವಾರದಿಂದ ಐದು ದಿನಗಳ ಕಾಲ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಭಟ್ಕಳ ಪಟ್ಟಣ ಮಾತ್ರ ಸಂಪೂರ್ಣ ಶಟ್ ಡೌನ್ ಆಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ. ಹರೀಶಕುಮಾರ್ ಹೇಳಿದರು.

ಉತ್ತರಕನ್ನಡ ಜಿಲ್ಲೆಯಾದ್ಯಂತ ಐದು ದಿನ ನಿಷೇದಾಜ್ಞೆ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಂಕು ನಿಯಂತ್ರಿಸುವ ಸಂಬಂಧ ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಜನರು ಗುಂಪುಗೂಡುವುದು ಹೆಚ್ಚಾಗುತ್ತಿದೆ. ಈ ಕಾರಣದಿಂದ ಸಮಾಜದಲ್ಲಿ ಗುಂಪು ಸೇರಿ ವೈರಾಣು ಹರಡುವುದನ್ನು ತಡೆಯುವ ಸಂಬಂಧ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಇದಕ್ಕೆ ಜನರೆ ಸ್ವಯಂ ಪ್ರೇರಿತರಾಗಿ ಅನಾವಶ್ಯಕವಾಗಿ ಬೀದಿ ಬದಿ ಓಡಾಡದೇ ಮನೆಯಲ್ಲಿಯೇ ಇದ್ದು ಸಹಕಾರ ನೀಡಬೇಕು. ಯಾರಾದರೂ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು ಕಂಡು ಬಂದಲ್ಲಿ ಮೊದಲು ಅದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜನರು ಸ್ವಯಂ ಪ್ರೇರಿತರಾಗಿ ರೋಗ ತಡೆಯಲು ಮುಂದೆ ಬರಬೇಕು. ಅಂಗಡಿ, ಮುಂಗಟ್ಟು, ಹೋಟೆಲ್​ಗಳಲ್ಲಿ ಯಾವುದೇ ಕಾರಣಕ್ಕೂ ಗುಂಪು ಸೇರಬಾರದು. ಜನರಿಗೆ ಅವಶ್ಯ ಸಾಮಗ್ರಿಗಳನ್ನು ಪೂರೈಸುವ ಹಾಲು, ಕಿರಾಣಿ ಸಾಮಗ್ರಿ ಸೇರಿದಂತೆ ಹೋಟೆಲ್​​​​ ಮಾಲೀಕರುಗಳು ಮನೆ ಬಾಗಿಲಿಗೆ ತಲುಪಿಸಲು ಪ್ರಯತ್ನಿಸಬೇಕು. ಅನವಶ್ಯಕವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ತೆಗೆಯದಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಈಗಾಗಲೇ ಅವಶ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದ್ದು, ಯಾವುದೇ ಸೊಂಕಿತ ಪ್ರಕರಣಗಳು ದೃಢಪಟ್ಟಿಲ್ಲ. ಆದರೆ, ದುಬೈನಿಂದ ವಿಮಾನ ಮೂಲಕ ಮಂಗಳೂರು ಬಂದಿದ್ದ ಭಟ್ಕಳ ಮೂಲದ ವ್ಯಕ್ತಿಗೆ ಕ್ವಾರಂಟೈನ್ ಮಾಡುತ್ತಿರುವಾಗ ಸೋಂಕು ಇರುವುದು ಧೃಡಪಟ್ಟಿದೆ. ಈ ಬಗ್ಗೆ ಅವರ ಸಂಪರ್ಕದಲ್ಲಿರುವವರ ತಪಾಸಣೆ ನಡೆಸಲಾಗಿದೆ. ಆದರೆ, ಅತಿ ಹೆಚ್ಚು ಜನರು ವಿದೇಶದಿಂದ ಭಟ್ಕಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಪಟ್ಟಣವನ್ನು ಐದು ದಿನ ಸಂಪೂರ್ಣ ಲಾಕ್​​ಡೌನ್​ ಮಾಡಲಾಗುತ್ತದೆ. ಅಗತ್ಯ ವಸ್ತುಗಳ ಮಾರಾಟ ಹೊರತು ಪಡಿಸಿ ಯಾವುದೇ ಅಂಗಡಿ ಮುಂಗಟ್ಟು ತೆರೆಯುವಂತಿಲ್ಲ. ಜನರು ಅನವಶ್ಯವಾಗಿ ಓಡಾಡುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಭಟ್ಕಳ ಸಂಪೂರ್ಣ ಶಟ್​​ ಡೌನ್...!

ಇನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಂ ರೋಷನ್ ಮಾತನಾಡಿ, ಕೊರೊನಾ ವೈರಸ್ ತಡೆಗಟ್ಟುವ ಸಂಬಂಧ ಈಗಾಗಲೇ ಸಾಕಷ್ಟು ಮುಂಜಾಗೃತೆ ಕ್ರಮ ಕೈಗೊಂಡಿದ್ದು, ತುರ್ತು ಪರಿಸ್ಥಿತಿಗೆ 1500 ಬೆಡ್ ಹಾಗೂ ಪ್ರತಿ ತಾಲೂಕು ಮಟ್ಟದಲ್ಲಿ ಹಾಸ್ಟಲ್​ಗಳನ್ನು ಗುರುತಿಸಿ ಕೊರಂಟೈನ್​ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ‌. ಇನ್ನು ಈ ಐದು ದಿನವೂ ಜನರು ಮನೆಯಲ್ಲಿ ಉಳಿಯುವುದರಿಂದ ಪಡಿತರ ಹಾಗೂ ಇನ್ನಿತರ ಯಾವುದೇ ವಸ್ತುಗಳು ತೊಂದರೆಯಾಗದಂತೆ ನೋಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನದಲ್ಲಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಜನತಾ ಕರ್ಪ್ಯೂ ಬಳಿಕ ಜನ ಸಂಜೆಯಾಗುತ್ತಿದ್ದಂತೆ ಬೀದಿಗೆ ಇಳಿದಿದ್ದರು. ಅಂಗಡಿ ಮುಂಗಟ್ಟುಗಳನ್ನು ಒಪನ್ ಮಾಡಲಾಗಿತ್ತು. ಆದರೆ ಜನರು ಅರ್ಥಮಾಡಿಕೊಳ್ಳುವ ಅವಶ್ಯಕತೆ. ನಾವು ಸ್ವಯಂ ಪ್ರೇರಿತರಾಗಿ ವೈರಾಣು ತಡೆಗಟ್ಟಲು ಮುಂದೆ ಬರಬೇಕು. ನಾವು ಒಮ್ಮೆ ಸೋಂಕಿಗೆ ತುತ್ತಾದಲ್ಲಿ ನಮ್ಮ ಕುಟುಂಬ, ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಿಷೇಧಾಜ್ಞೆ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

Last Updated : Mar 23, 2020, 10:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.