ETV Bharat / state

ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ: ಏಳು ಜನರ ರಕ್ಷಣೆ - ಕಾರವಾರದಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಮುಳುಗಡೆ

ಕಾರವಾರ ಸಮೀಪದ ಅರಬ್ಬಿ ಸಮುದ್ರಕ್ಕೆ ಶ್ರೀಸೌಪರ್ಣಿಕ ಹೆಸರಿನ ಬೋಟ್​​ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ, ಬೋಟಿನ ತಳಪಾಯ ಹೊಡೆದು ನೀರು ಬೋಟಿನಲ್ಲಿ ತುಂಬಿ ಮುಳುಗಡೆ ಆಗುತ್ತಿತ್ತು. ಕೂಡಲೇ ಕರಾವಳಿ ಕಾವಲು ಪಡೆ ಸಿಬ್ಬಂದಿ ಬೋಟಿನಲ್ಲಿದ್ದ ಏಳು ಜನ ಮೀನುಗಾರರನ್ನು ರಕ್ಷಿಸಿದ್ದಾರೆ.

ಕಾರವಾರದಲ್ಲಿ ಏಳು ಜನರ ರಕ್ಷಣೆ
Seven fishermen saved in Karwar
author img

By

Published : Jan 25, 2021, 7:42 AM IST

ಕಾರವಾರ (ಉತ್ತರಕನ್ನಡ): ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗುತ್ತಿದ್ದಾಗ ಏಳು ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಕಾರವಾರದಲ್ಲಿ ಏಳು ಜನ ಮೀನುಗಾರರ ರಕ್ಷಣೆ

ಮಲ್ಪೆ ಮೂಲದ ದಿನಕರ ಕರಿಕಲ್ ಎಂಬುವವರಿಗೆ ಸೇರಿದ ಶ್ರೀಸೌಪರ್ಣಿಕಾ ಹೆಸರಿನ ಬೋಟ್​​ ಮೀನುಗಾರಿಕೆಗೆ ತೆರಳಿತ್ತು. ಬೋಟ್​​​ನಲ್ಲಿ ಏಳು ಮೀನುಗಾರರು ಮೀನುಗಾರಿಕೆ ನಡೆಸುತ್ತ ಕಾರವಾರದಿಂದ ಸುಮಾರು ಎಂಟು ನಾಟಿಕಲ್ ಮೈಲಿ ದೂರದಲ್ಲಿರುವ ಲೈಟ್​​​​ಹೌಸ್ ಬಳಿ ಬಂದಾಗ ಬೋಟಿನ ತಳಪಾಯ ಒಡೆದು ನೀರು ಬೋಟ್ ಒಳಗೆ ಸೇರತೊಡಗಿತ್ತು. ತಕ್ಷಣ ಮೀನುಗಾರರು ಸಹಾಯಕ್ಕಾಗಿ ಕರಾವಳಿ ಕಾವಲು ಪೊಲೀಸರಲ್ಲಿ ವಿನಂತಿಸಿದ್ದರು.

ಓದಿ: ಬಳ್ಳಾರಿ: ದೇಹದಿಂದ ಬೇರ್ಪಟ್ಟ ಕೈಗಳನ್ನು ಎಳೆದಾಡಿದ ನಾಯಿಗಳು!

ತಕ್ಷಣ ನೆರವಿಗೆ ಧಾವಿಸಿದ ಸಿಬ್ಬಂದಿ ಏಳು ಮೀನುಗಾರರನ್ನು ರಕ್ಷಣೆ ಮಾಡಿ ಬೋಟ್​ ಎಳೆದು ತಂದಿದ್ದಾರೆ. ಅದೃಷ್ಟವಾಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.