ಕಾರವಾರ: ಪೊಲೀಸ್ ಬಂದೋಬಸ್ತ್ನಲ್ಲಿ ವಾಣಿಜ್ಯ ಬಂದರು ವಿಸ್ತರಣೆ ಕಾಮಗಾರಿ ಮುಂದುವರಿದ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿದು ಪ್ರತಿಭಟನೆಗೆ ಮುಂದಾದಾಗ ಇಬ್ಬರು ನೀರು ಕುಡಿದು ಅಸ್ವಸ್ತಗೊಂಡಿದ್ದಾರೆ.
ನಗರದ ಠ್ಯಾಗೋರ ಕಡಲಿಗೆ ಇಳಿದು ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಪ್ರತಿಭಟನೆಗೆ ಮುಂದಾದಾಗ ಮೀನು ಮಾರಾಟಗಾರ ಮಹಿಳೆ ಉಮಾ ಹಾಗೂ ಮೀನುಗಾರ ಅಶೋಕ ಎಂಬುವವರು ನೀರಿನಲ್ಲಿ ಮುಳುಗಿ ಅಸ್ವಸ್ತಗೊಂಡಿದ್ದಾರೆ. ತಕ್ಷಣ ಅವರನ್ನು ಇತರೆ ಪ್ರತಿಭಟನಾ ನಿರತ ಮೀನುಗಾರರು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಲೆ ತಡೆಗೋಡೆ ನಿರ್ಮಾಣದ ಮೂಲಕ ನಮ್ಮ ಬದುಕಿನ ಮೇಲೆ ಕಲ್ಲು ಹಾಕುತ್ತಿರುವುದಾಗಿ ಆರೋಪಿಸಿರುವ ಮೀನುಗಾರರು ಪೊಲೀಸರು ಕೂಡ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.