ಕಾರವಾರ(ಉತ್ತರ ಕನ್ನಡ) : ಮೀನುಗಾರರ ಬಲೆಯ ದಾರಕ್ಕೆ ಸಿಕ್ಕಿ ಸಮುದ್ರದಲ್ಲಿ ಒದ್ದಾಡುತ್ತಿದ್ದ ಕಡಲಾಮೆಯನ್ನು ಮೀನುಗಾರರು ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ಘಟನೆ ಹೊನ್ನಾವರ ಬಳಿಯ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ನಡೆದಿದೆ. ಸಮುದ್ರದಲ್ಲಿ ಬಲೆಯ ತುಂಡಿಗೆ ಸಿಲುಕಿಕೊಂಡಿದ್ದ ಕಡಲಾಮೆ ಕಂಡು ಮೀನುಗಾರ ರವಿ ಅಂಬಿಗ ಧಾರೇಶ್ವರ ಬೋಟ್ ಮೇಲಿನಿಂದ ಜಿಗಿದು ಒದ್ದಾಡುತ್ತಿದ್ದ ಆ ಆಮೆಯನ್ನು ಹಿಡಿದಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಯುವತಿ ವಿಚಾರಕ್ಕೆ ಸ್ನೇಹಿತನ ಕೊಲೆ, ನಾಲ್ವರ ಬಂಧನ
ಬಳಿಕ ಆಮೆಗೆ ಸುತ್ತಿಕೊಂಡಿದ್ದ ಬಲೆಯನ್ನು ಬಿಡಿಸಿ ಸಂರಕ್ಷಿಸಿದ ಮೀನುಗಾರರು ಅದನ್ನು ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ. ಮೀನುಗಾರರು ಕಡಲಾಮೆಯನ್ನು ಶ್ರೀಹರಿಯ ದಶಾವತಾರದ ರೂಪವೆಂದು ಪೂಜ್ಯ ಭಾವನೆ ಹೊಂದಿದ್ದು, ಇದನ್ನು ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಕ್ಕೆ ಮೀನುಗಾರರಾದ ಆದಿತ್ಯ ಕಾರ್ವಿ, ಅಶೋಕ್ ಸಹಕಾರ ನೀಡಿದ್ದರು.