ಕಾರವಾರ: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿಯಾಗಿ ಮೀನುಗಾರನೋರ್ವ ಸಮುದ್ರಪಾಲಾಗಿರುವ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಬಳಿ ನಡೆದಿದೆ.
ಹೊನ್ನಾವರದ ತನ್ವೀರ್(22) ಕಣ್ಮರೆಯಾಗಿರುವ ಮೀನುಗಾರ. ಐದು ಮಂದಿಯ ತಂಡ ಎರಡು ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ದೋಣಿ ಪಲ್ಟಿಯಾದ ಕಾರಣ ಎಲ್ಲರೂ ಸಮುದ್ರಪಾಲಾಗಿದ್ದರು.
ಅದರಲ್ಲಿ ನಾಲ್ವರು ಪುನಃ ದೋಣೆ ಏರಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದಾನೆ. ಇದೀಗ ನಾಪತ್ತೆಯಾದ ಮೀನುಗಾರನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.