ETV Bharat / state

ಜೋಯಿಡಾದ ನೂತನ ಪತಂಗ ಪಾರ್ಕ್‌ ಪ್ರವಾಸಿಗರ ಆಕರ್ಷಣೆ

author img

By

Published : Oct 29, 2020, 12:29 PM IST

Updated : Oct 29, 2020, 12:36 PM IST

ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ನೂತನ ಪತಂಗ (ಚಿಟ್ಟೆ) ಪಾರ್ಕ್​ ನಿರ್ಮಾಣಗೊಂಡಿದೆ.

first-butterfly-park-of-state-to-come-up-in-joida-of-uttarakannada
ಜೋಯಿಡಾದ ನೂತನ ಪತಂಗ ಪಾರ್ಕ್‌ ಪ್ರವಾಸಿಗರ ಆಕರ್ಷಣೆ

ಶಿರಸಿ: ಜೋಯಿಡಾದಲ್ಲಿ ಹೊಸದಾಗಿ ಪತಂಗ ಪಾರ್ಕ್​ ನಿರ್ಮಾಣ ಮಾಡಲಾಗಿದ್ದು, ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಗೆ ಮತ್ತೊಂದು ಹಿರಿಮೆ ಬಂದಿದೆ.

ಜೋಯಿಡಾದಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ ಸಾಲು ಮರದ ತಿಮ್ಮಕ್ಕ ಉದ್ಯಾನವನದೊಳಗೆ ಈ ಪತಂಗ ಪಾರ್ಕ್ ಇದೆ. ಪಾರ್ಕ್​ನಲ್ಲಿ ಎಲ್ಲೆಂದೆರಲ್ಲಿ ಹಾಯಾಗಿ ಹಾರಾಡುವ ಪತಂಗಗಳು ಕಾಣುತ್ತವೆ. ಹೂವಿನಿಂದ ಹೂವಿಗೆ ಹಾರುತ್ತಾ ಕಣ್ಣಿಗೆ ಹಬ್ಬವನ್ನುಂಟು ಮಾಡೋ ಈ ಜೀವಿಗಳ ಸಾಲು ಪ್ರವಾಸಿಗರಿಗೆ ಅತ್ಯಂತ ಆಕರ್ಷಣೀಯವಾಗಿದೆ.

ಪತಂಗ ( ಚಿಟ್ಟೆ ) ಪಾರ್ಕ್

ಕಳೆದ ವರ್ಷ ಪಾರ್ಕ್ ನಿರ್ಮಾಣ ಕಾರ್ಯ ಕೈಗೊಂಡ ಅರಣ್ಯ ಇಲಾಖೆ ಈವರೆಗೂ ನೂರಕ್ಕೂ ಹೆಚ್ಚು ನಮೂನೆಯ ಪತಂಗಗಳನ್ನು ಗುರುತಿಸಿದೆ. ಆಂಗ್ಲೆಡ್​ ಪಿಯರೋಟ್‌ ಗ್ರೆ ಕೌಂಟ್, ಗ್ರಾಸ್​ ಡೆಮೊನ್​, ಟಾನಿ ಕಾಸ್ಟರ್​, ಗ್ರೆ ಪಾನ್ಸಿ, ಪ್ಯಾರಿಸ್​ ಪಿಕಾಕ್​, ಕಮ್ಯಾಂಡರ್​, ಡಾರ್ಕ್​ ಬ್ಲೂ ಟೈಗರ್, ಲೈಮ್​ ಬಟರ್ ಪ್ಲೈ, ಪ್ಲೈನ್​ ಟೈಗರ್ ಮೊದಲಾದ ಜಾತಿಯ ಪತಂಗಗಳು ಇಲ್ಲಿವೆ.

ದಾಂಡೇಲಿಯಿಂದ ಜೋಯಿಡಾ ಪ್ರವೇಶಿಸುವ ದಾರಿಯಲ್ಲೇ ಈ ಉದ್ಯಾನವನ ಕಂಡುಬರುತ್ತದೆ.

Last Updated : Oct 29, 2020, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.