ETV Bharat / state

ವಿದ್ಯುತ್​ ಶಾರ್ಟ್​​ ಸರ್ಕ್ಯೂಟ್​ನಿಂದ ಹುಲ್ಲಿನ ಬಣವೆಗೆ ಬೆಂಕಿ - uttarkannada news

ವಿದ್ಯುತ್ ​ಲೈನ್​ ಶಾರ್ಟ್​ ಸರ್ಕ್ಯೂಟ್​ನಿಂದ ಹೊತ್ತಿಕೊಂಡ ಬೆಂಕಿ, ಹತ್ತಿರದ ಹುಲ್ಲಿನ ಬಣವೆಗೆ ತಾಗಿ ಸಂಪೂರ್ಣ ಬಣವೆ ಸುಟ್ಟು ಹೋದ ಘಟನೆ ಯಲ್ಲಾಪುರ ತಾಲೂಕಿನ ಕವಡಿಕೆರೆ ಬಳಿ ನಡೆದಿದೆ.

Fire from an electrical short circuit to a  Stack of grass
ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಹುಲ್ಲಿನ ಬಣವೆಗೆ ಬೆಂಕಿ!
author img

By

Published : Jan 29, 2020, 2:08 PM IST

ಶಿರಸಿ: ವಿದ್ಯುತ್ ​ಲೈನ್​ ಶಾರ್ಟ್​ ಸರ್ಕ್ಯೂಟ್​ನಿಂದ ಹೊತ್ತಿಕೊಂಡ ಬೆಂಕಿ, ಹತ್ತಿರದ ಹುಲ್ಲಿನ ಬಣವೆಗೆ ತಾಗಿ ಸಂಪೂರ್ಣ ಬಣವೆ ಸುಟ್ಟು ಹೋದ ಘಟನೆ ಯಲ್ಲಾಪುರ ತಾಲೂಕಿನ ಕವಡಿಕೆರೆ ಬಳಿ ನಡೆದಿದೆ.

ಕವಡಿಕೆರೆಯ ಸುಬ್ರಾಯ ಭಟ್ಟ ಎಂಬುವರಿಗೆ ಸೇರಿದ ಹುಲ್ಲಿನ ಬಣವೆ ಸಮೀಪವಿದ್ದ ವಿದ್ಯುತ್ ಲೈನ್‍ಗೆ ಪಕ್ಕದ ಮರದ ಟೊಂಗೆ ತಗುಲಿದ ಪರಿಣಾಮ ಶಾರ್ಟ್​ ಸರ್ಕ್ಯೂಟ್​ ಸಂಭವಿಸಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸಿದ್ದಾರೆ.

ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.