ETV Bharat / state

ಕಾರವಾರ: ವಿಶೇಷಚೇತನ ಮಗನನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣು.. - ಕುಮಟಾ ಠಾಣೆ ಪೊಲೀಸರು

ವಿಶೇಷಚೇತನ ಮಗನನ್ನು ಕೊಂದ ತಂದೆ, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಕುಮಟಾ ಪಟ್ಟಣದಲ್ಲಿ ನಡೆದಿದೆ

father-killed-his-gifted-son-and-committed-suicide-in-karwar
ಕಾರವಾರ:ವಿಶೇಷಚೇತನ ಮಗನನ್ನು ಕೊಂದು ತಂದೆ ಆತ್ಮಹತ್ಯೆಗೆ ಶರಣು..
author img

By

Published : May 20, 2023, 6:50 PM IST

ಕಾರವಾರ: ವಿಶೇಷಚೇತನ ಮಗನನ್ನು ಕೊಂದ ತಂದೆ, ತಾನು ಆತ್ಮಹತ್ಯೆಗೆ ಶರಣಾದ ಘಟನೆ ಕುಮಟಾ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹಳೇ ಮೀನು ಮಾರುಕಟ್ಟೆ ಸಮೀಪದ ಪುರಸಭೆಯ ವಸತಿ ಗೃಹದಲ್ಲಿ ವಾಸುಸುತ್ತಿದ್ದ ಪೌರಕಾರ್ಮಿಕ ಶ್ರೀಧರ್ ಹರಿಜನ್ (45) ವಿಕಲಚೇತನ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಶುಕ್ರವಾರ ತಡರಾತ್ರಿ ವಿಶೇಷಚೇತನ ಮಗನನ್ನು ಕೊಲೆ ಮಾಡಿದ ನಂತರ ಶ್ರೀಧರ್ ಹರಿಜನ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮುಂಜಾನೆ ವಿಷಯ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕುಮಟಾ ಠಾಣೆ ಪೊಲೀಸರು, ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮಗ ಜನಿಸುತ್ತಲೇ ಅಂಗವಿಕಲನಾಗಿದ್ದು, ಚಿಕಿತ್ಸೆಗಾಗಿ ಸಾಕಷ್ಟು ಕಷ್ಟಪಟ್ಟರು ಸಹ ಮಗ ಸರಿಹೊಗಿದೇ ಇದ್ದ ಕಾರಣ ನೊಂದ ತಂದೆ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ:ಪತಿ ಹತ್ಯೆ ಮಾಡಿ ಆತ್ಮಹತ್ಯೆ ಕಥೆ ಕಟ್ಟಿದ ಪತ್ನಿ, ಪ್ರಿಯಕರ ಬೆಂಗಳೂರಿನಲ್ಲಿ ಸೆರೆ

ಐದು ವರ್ಷದ ಮಗಳ ಕೊಂದು ಸಾವಿಗೆ ಶರಣಾಗಿದ್ದ ದಂಪತಿ: ಪತಿ ಮತ್ತು ಪತ್ನಿ ಹಾಗೂ ಐದು ವರ್ಷದ ಬಾಲಕಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದಿತ್ತು. ಈ ದಂಪತಿ ಮೊದಲಿಗೆ ತಮ್ಮ ಮಗಳನ್ನು ಕೊಂದು ನಂತರ ತಾವೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಾಥಮಿಕ ಮಾಹಿತಿಯಿಂದ ಲಭ್ಯವಾಗಿತ್ತು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು. ಇಲ್ಲಿನ ಸತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ವಾಲ್ಡಗಾಂವ್‌ನಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿತ್ತು. ಮೃತರನ್ನು ಮೋಹನ್ ಪ್ರತಾಪ್ ಸಿಂಗ್ ದಂಗರ್ (30), ಪತ್ನಿ ಪೂಜಾ ದಂಗರ್ (25) ಮತ್ತು ಇವರ ಐದು ವರ್ಷದ ಪುತ್ರಿ ಎಂದು ಗುರುತಿಸಲಾಗಿತ್ತು. ಕೃಷಿ ಮಾಡುತ್ತಿದ್ದ ಮೋಹನ್ ತಮ್ಮ ಕುಟುಂಬ ಸಮೇತವಾಗಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಗುರುವಾರ ಎಲ್ಲರೂ ಊಟ ಮಾಡಿ ಮಲಗಿದ್ದರು. ಪೂಜಾ ಅವರ ಸೋದರ ಸಂಬಂಧಿ ಸಹ ಇಲ್ಲೇ ಸಮೀಪದಲ್ಲಿ ವಾಸವಾಗಿದ್ದರು. ಪ್ರತಿ ನಿತ್ಯ ಬೆಳಗ್ಗೆ ಮಗಳು ಅವರ ಮನೆಗೆ ಹೋಗುತ್ತಿದ್ದಳು. ಆದರೆ, ಶುಕ್ರವಾರ ಬೆಳಗ್ಗೆ ಬಾಲಕಿ ಬಾರದೇ ಇದ್ದಾಗ ಅಜ್ಜಿಯೇ ಪೂಜಾ ಮನೆಗೆ ಬಂದಿದ್ದರು. ಈ ವೇಳೆ ಮೂವರು ಸಹ ಶವವಾಗಿ ಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.

ನಂತರ ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಸತಾರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದರು. ಆದರೆ, ಸದ್ಯಕ್ಕೆ ಮೋಹನ್ ಮತ್ತು ಪೂಜಾ ದಂಪತಿಯು ನಿರ್ಧಾರಕ್ಕೆ ಕಾರಣವೇನು ಎಂಬುವುದು ಗೊತ್ತಾಗಿಲ್ಲ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದರು.

ಇದನ್ನು ಓದಿ: ಬ್ಯಾಂಕ್​ನಿಂದ ಹಣ ಪಡೆದು ಬರುತ್ತಿದ್ದ ವ್ಯಕ್ತಿಯ ಬ್ಯಾಗ್ ಕಿತ್ತುಕೊಂಡು ಹೋದ ಕಳ್ಳರು..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.