ಕಾರವಾರ (ಉತ್ತರಕನ್ನಡ): ಟೋಲ್ಗೇಟ್ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಿದ ಬೆನ್ನಲ್ಲೇ ಮಾಹಿತಿ ಕೊರತೆಯಿಂದ ಸಂಚಾರ ನಡೆಸುತ್ತಿದ್ದ ವಾಹನ ಸವಾರರು ಡಬಲ್ ಹಣ ಕಟ್ಟಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಂಕೋಲಾದ ಹಟ್ಟಿಕೇರಿ ಹಾಗೂ ಕುಮಟಾದ ಹೊಳೆಗದ್ದೆ ಟೋಲ್ಗೇಟ್ ಬಳಿ ಫಾಸ್ಟ್ಯಾಗ್ ಅಳವಡಿಸಿಕೊಳ್ಳದವರಿಗೆ ಒಂದು ಗೇಟ್ ಮೂಲಕ ಮಾತ್ರ ಬಿಡಲಾಗುತ್ತಿದೆ. ಅದು ಕೂಡ ಡಬಲ್ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲದೇ ಬಂದವರು ಹಣ ಕಟ್ಟಿ ತೆರಳಿದ್ದಾರೆ.
ಈ ಸುದ್ದಿಯನ್ನೂ ಓದಿ: ಶ್ರೀಮಂತರು ಬಿಪಿಎಲ್ ಕಾರ್ಡ್ ಹೊಂದಿದ್ದರೆ, ತಕ್ಷಣ ವಾಪಸ್ ಮಾಡಿ: ಸಿಎಂ ಬಿಎಸ್ವೈ
ಇನ್ನು ಫಾಸ್ಟ್ಯಾಗ್ ಇಲ್ಲದವರಿಗೆ ಒಂದೇ ಗೇಟ್ ಮೂಲಕ ಬಿಡುತ್ತಿರುವುದರಿಂದ ಹತ್ತಾರು ವಾಹನಗಳು ಸಾಲುಗಟ್ಟಿ ನಿಂತ ಪರಿಸ್ಥಿತಿ ಅಂಕೋಲಾದ ಹಟ್ಟಿಕೇರಿ ಟೋಲ್ಗೇಟ್ ಬಳಿ ನಿರ್ಮಾಣವಾಗಿದೆ. ಇನ್ನು ವಿಳಂಬದಿಂದ ಬೇಸತ್ತ ಕೆಲ ವಾಹನ ಸವಾರರು ಟೋಲ್ಗೇಟ್ನಲ್ಲೇ ಫಾಸ್ಟ್ಯಾಗ್ ಅಳವಡಿಸಿಕೊಂಡು ಮುಂದೆ ಸಾಗುತ್ತಿದ್ದಾರೆ.