ಉತ್ತರ ಕನ್ನಡ/ಶಿರಸಿ: ಅವಧಿ ಪೂರ್ವ ಜನಿಸಿದ ಮರಿಯಾನೆ ಮೃತಪಟ್ಟ ಘಟನೆ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ರಸ್ತೆಯಿಂದ ಬಾಳೆಹಳ್ಳಿಗೆ ಹೋಗುವ ರಸ್ತೆಯ ಸಮೀಪದಲ್ಲಿ ನಡೆದಿದೆ.
ಮರಿಯಾನೆ ಮೃತಪಟ್ಟಿದ್ದು ತಾಯಿ ಆನೆ ಸನಿಹದಲ್ಲೇ ಸುತ್ತುತ್ತಾ ಸಂಕಟ ಪಡುತ್ತಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ರು. ಅಲ್ಲದೇ, ಶಿರಸಿ ತಾಲೂಕಿನ ಸಂಚಾರದಲ್ಲಿದ್ದ ಶಾಸಕ ಶಿವರಾಂ ಹೆಬ್ಬಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮೃತಪಟ್ಟ ಮರಿಯಾನೆಯ ಶವ ಪರೀಕ್ಷೆ ನಡೆಸಿದ ನಂತರ ಅರಣ್ಯ ಅಧಿಕಾರಿಗಳು ನಿಯಮಾವಳಿಯಂತೆ ಅಂತ್ಯಕ್ರಿಯೆ ನಡೆಸಿದರು.