ETV Bharat / state

ಪ್ರಾಣ ರಕ್ಷಿಸಿದ ಲೈಫ್ ಗಾರ್ಡ್ ಮೇಲೆಯೇ ಹಲ್ಲೆ: ಮದ್ಯದ ಅಮಲಿನಲ್ಲಿ ಪ್ರವಾಸಿಗರ ರಂಪ - ETv Bharat kannada news

ಸಮುದ್ರದ ಅಲೆಗಳಿಂದ ತಮ್ಮನ್ನು ರಕ್ಷಣೆ ಮಾಡಿದ ಲೈಫ್ ಗಾರ್ಡ್ ಮೇಲೆಯೇ ಮದ್ಯ ಸೇವಿಸಿದ ಪ್ರವಾಸಿಗರು ಹಲ್ಲೆ ಮಾಡಿದ್ದಾರೆ.

Protection of those caught in the waves
ಅಲೆಗಳಲ್ಲಿ ಸಿಲುಕಿದವರ ರಕ್ಷಣೆ
author img

By

Published : Jan 16, 2023, 9:28 AM IST

ಕಾರವಾರ (ಉತ್ತರ ಕನ್ನಡ) : ಮದ್ಯದ ಅಮಲಿನಲ್ಲಿ ಸಮುದ್ರಕ್ಕಿಳಿದು ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದವರನ್ನು ರಕ್ಷಣೆ ಮಾಡಿದ ಲೈಫ್‌ಗಾರ್ಡ್​ಗಳ ಮೇಲೆಯೇ ಪ್ರವಾಸಿಗರು ಹಲ್ಲೆ ನಡೆಸಿದ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ನಡೆದಿದೆ. ನೀಲಪ್ಪ ಬಾಲರೆಡ್ಡಿ ಮತ್ತು ಪ್ರಶಾಂತ ಹಳ್ಳಿಗಂಡಿ ರಕ್ಷಣೆಗೊಳಗಾಗಿ ಹಲ್ಲೆ ನಡೆಸಿದ ಪ್ರವಾಸಿಗರು ಎಂದು ತಿಳಿದು ಬಂದಿದೆ. ನೀಲಪ್ಪ ಬಾಲರೆಡ್ಡಿ ಮತ್ತು ಪ್ರಶಾಂತ ಹಳ್ಳಿಗಂಡಿ ಗದಗ ಜಿಲ್ಲೆಯಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಆಗಮಿಸಿದ್ದು ಕಡಲತೀರದಲ್ಲಿ ಅಪಾಯ ಮಟ್ಟದಲ್ಲಿ ಈಜಾಡುತ್ತಿದ್ದರು. ಲೈಫ್​ಗಾರ್ಡ್​ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಲೆಕ್ಕಿಸದೆ ಮದ್ಯದ ಅಮಲಿನಲ್ಲಿದ್ದ ಕಾರಣ ಅಲೆಗೆ ಕೊಚ್ಚಿ ಹೋಗಿದ್ದಾರೆ.

ಇದನ್ನು ಗಮನಿಸಿದ ಲೈಫ್​ಗಾರ್ಡ್​ ತ​ಕ್ಷಣವೇ ತೆರಳಿ ಪ್ರವಾಸಿಗರನ್ನು ರಕ್ಷಿಸಿ ಕರೆತಂದಿದ್ದರು.
ಆದರೆ ಮದ್ಯದ ನಶೆಯಲ್ಲಿದ್ದ ಇಬ್ಬರು ಪ್ರವಾಸಿಗರು ನಾವು ಎಕ್ಸ್‌ಪರ್ಟ್ ಈಜುಪಟುಗಳು. ನಮ್ಮನ್ನು ಯಾಕೆ ಎಳೆದು ತಂದಿದ್ದೀರಿ ಎಂದು ಲೈಫ್​ಗಾರ್ಡ್​ಗಳೊಮದಿಗೆ​ ವಾಗ್ವಾದಕ್ಕಿಳಿದಿದ್ದಾರೆ. ಅಷ್ಟೇ ಅಲ್ಲ, ಏಕಾಏಕಿ ಲೈಫ್​ಗಾರ್ಡ್ ಓರ್ವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಲೈಫ್​ಗಾರ್ಡ್​ಗೆ ಸಣ್ಣಪುಟ್ಟ ಗಾಯಗಳಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋಕರ್ಣದಲ್ಲಿ ಅಪ್ಪ, ಮಗನ ರಕ್ಷಣೆ: ಗೋಕರ್ಣದ ಮುಖ್ಯ ಕಡಲತೀರದಲ್ಲಿ ಅಲೆಯ ಸುಳಿಗೆ ಸಿಲುಕಿ ಕೊಚ್ಚಿಹೋಗುತಿದ್ದ ಅಪ್ಪ, ಮಗನನ್ನು ಲೈಫ್​ಗಾರ್ಡ್ ಇತ್ತೀಚೆಗೆ ರಕ್ಷಣೆ ಮಾಡಿದ್ದರು. ಧಾರವಾಡ ಮೂಲದ ಸೋಮಶೇಖರ್ (53), ಕೇಶವ್ (21) ರಕ್ಷಣೆಗೊಳಗಾದವರು. ಕುಟುಂಬದೊಂದಿಗೆ ಒಟ್ಟು ಎಂಟು ಜನರು ಪ್ರವಾಸಕ್ಕೆ ಬಂದಿದ್ದರು. ಇವರು ಆಳ ಸಮುದ್ರಕ್ಕೆ ತೆರಳಿ ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಲೈಫ್ ಗಾರ್ಡ್ ತೆರಳಿ ಇಬ್ಬರನ್ನು ರಕ್ಷಣೆ ಮಾಡಿದ್ದರು.

ಜನವರಿ 14ರಂದು ಕುಂಟುಂಬಸಮೇತ ಗೋಕರ್ಣಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬಳ್ಳಾರಿ ಮೂಲದ ಮೂವರು ಮಕ್ಕಳು ಅಲೆಯಲ್ಲಿ ಸಿಲುಕಿ ಕೊಚ್ಚಿ ಹೋಗಿದ್ದರು. ಲೈಫ್​ಗಾರ್ಡ್​ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ತೆರಳಿ ರಕ್ಷಣೆ ಮಾಡಿದ್ದರು.

ಲೈಫ್​ಗಾರ್ಡ್​ ಸಲಹೆ ನಿರ್ಲಕ್ಷ್ಯ: ಕಡಲತೀರಗಳಲ್ಲಿ ಪ್ರವಾಸಿಗರು ಅಪಾಯಕಾರಿ ಸ್ಥಳಗಳಲ್ಲಿ ನೀರಿಗಿಳಿಯದಂತೆ ಮಾಹಿತಿ ನೀಡಲು ಮತ್ತು ತೊಂದರೆಗೆ ಸಿಲುಕಿಕೊಂಡವರನ್ನು ರಕ್ಷಣೆ ಮಾಡಲು ಹಾಗೂ ತೀರ ಪ್ರದೇಶಗಳಲ್ಲಿ ಎಚ್ಚರವಹಿಸಲು ಲೈಫ್​ಗಾರ್ಡ್​ಗಳನ್ನು ನೇಮಕ ಮಾಡಲಾಗಿದೆ. ಆದರೆ, ಗೋಕರ್ಣ, ಮುರುಡೇಶ್ವರ, ಕಾರವಾರ ಸೇರಿದಂತೆ ಬಹುತೇಕ ಸ್ಥಳಗಳಲ್ಲಿ ಎಚ್ಚರಿಕೆವಹಿಸುವಂತೆ, ಅಪಾಯಕಾರಿ ಪ್ರದೇಶಕ್ಕೆ ತೆರಳದಂತೆ ಸೂಚಿಸಲಾಗುತ್ತಿದೆ. ಆದರೆ, ಲೈಫ್​ಗಾರ್ಡ್​ ಮಾತಿಗೆ ಪ್ರವಾಸಿಗರು ಕಿವಿಕೊಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ ವಾಹನಗಳನ್ನು ಬೀಚ್​ಗೆ ಇಳಿಸುತ್ತಿದ್ದು, ಇದರಿಂದ ವಾಹನಗಳು ನೀರಿನಲ್ಲಿ ಸಿಲುಕಿಕೊಂಡ ಉದಾಹರಣೆಗಳಿವೆ.

ಇದನ್ನೂ ಓದಿ: ಗೋಕರ್ಣ ಮುರುಡೇಶ್ವರದಲ್ಲಿ ಅಲೆಗೆ ಕೊಚ್ಚಿ ಹೋಗುತ್ತಿದ್ದ 4 ಮಕ್ಕಳು: ಲೈಫ್ ಗಾರ್ಡ್ಸ್​ನಿಂದ ಮರುಜೀವ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.