ETV Bharat / state

ಕುಮಟಾ: ಕಂಠಪೂರ್ತಿ ಕುಡಿದು ಶಿಕ್ಷಕನ ರಂಪಾಟ, ಸಾರ್ವಜನಿಕರ ಆಕ್ರೋಶ - Primary school teacher

ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಮದ್ಯ ಸೇವಿಸಿದ ಅಮಲಿನಲ್ಲಿ ಅಂಗಡಿ ಮುಂದೆ ರಂಪಾಟ ನಡೆಸಿದರು.

drunken teacher made scene in Kumata
ಕಂಠಪೂರ್ತಿ ಕುಡಿದು ತೂರಾಡಿದ ಶಿಕ್ಷಕ
author img

By

Published : Nov 21, 2022, 6:50 AM IST

Updated : Nov 21, 2022, 9:13 AM IST

ಕಾರವಾರ: ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ಕಂಠಪೂರ್ತಿ ಕುಡಿದು ತೂರಾಡುತ್ತಾ ಅಂಗಡಿ ಮುಂದೆ ರಂಪ ಮಾಡಿದ ಘಟನೆ ಕುಮಟಾ ತಾಲ್ಲೂಕಿನ ಕತಗಾಲದಲ್ಲಿ ನಡೆಯಿತು. ಬೇಜವಾಬ್ದಾರಿ ಶಿಕ್ಷಕನ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಮಟಾದ ಹೆಗಡೆಕಟ್ಟೆ ಮೂಲದ ಶಿಕ್ಷಕರಾಗಿರುವ ಇವರು ಸರಿಯಾಗಿ ನಿಲ್ಲುವುದಕ್ಕೂ ಸಾಧ್ಯವಾಗದೆ ಅಂಗಡಿಯೊಂದರ ಬಳಿ ತೆರಳಿ ತೂರಾಡಿ ಬಿದ್ದು ಗಾಯಗೊಂಡಿದ್ದಾರೆ. ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು.

ಕಂಠಪೂರ್ತಿ ಕುಡಿದು ತೂರಾಡಿದ ಶಿಕ್ಷಕ

ಕತಗಾಲಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ದಂಧೆಯ ವಿರುದ್ದ ಕ್ರಮ ಕೈಗೊಳ್ಳುವ ಬದಲು ಒಳ್ಳೆಯ ಎಸ್ಪಿಯನ್ನು ಇಲ್ಲಿಂದ ವರ್ಗಾವಣೆ ಮಾಡಿದ್ದಾರೆ ಎಂದು ಜನರು ದೂರಿದ್ದಾರೆ.

ಇದನ್ನೂ ಓದಿ: ಕಂಠಪೂರ್ತಿ ಕುಡಿದ ಯುವಕರ ರಂಪಾಟ ಕಂಡು ಪೊಲೀಸರೇ ಸುಸ್ತು! ವಿಡಿಯೋ

Last Updated : Nov 21, 2022, 9:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.