ಕಾರವಾರ: ಮಹಿಳೆ ಹೊಟ್ಟೆಯಲ್ಲಿ ಬೆಳೆದಿದ್ದ ಒಂದು ಮುಕ್ಕಾಲು ಕೆಜಿ ತೂಕದ ಗಡ್ಡೆಯೊಂದನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಪಾಟೀಲ್ ಆಸ್ಪತ್ರೆಯಲ್ಲಿ ನಡೆದಿದೆ.
ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿಯ 45 ವರ್ಷದ ಸರಸ್ವತಿ ಬೇಕವಾಡಕರ ಎಂಬವರಿಗೆ ಕಳೆದ ಒಂದು ತಿಂಗಳ ಹಿಂದೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಪಟ್ಟಣದ ಪಾಟೀಲ ಆಸ್ಪತ್ರೆಯಲ್ಲಿ ತೋರಿಸಿದ್ದರು. ಈ ವೇಳೆ, ಪರಿಶೀಲಿಸಿದ್ದ ಡಾ. ಮೋಹನ ಪಾಟೀಲ, ಹೊಟ್ಟೆಯಲ್ಲಿ ಗಡ್ಡೆಯಿರುವುದನ್ನು ತಿಳಿಸಿ, ಇದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಯಬೇಕು ಎಂದು ಒಂದು ತಿಂಗಳು ಬಿಟ್ಟು ಬರುವಂತೆ ಅಗತ್ಯ ಔಷಧ ನೀಡಿದ್ದರು.
ಅದರಂತೆ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಸರಸ್ವತಿ ಅವರಿಗೆ ಡಾ. ಮೋಹನ ಪಾಟೀಲ ನೇತೃತ್ವದ ತಂಡ ಶಸ್ತ್ರಚಿಕಿತ್ಸೆ ನಡೆಸಿ, ಹೊಟ್ಟೆಯಲ್ಲಿದ್ದ 1.75 ಕೆಜಿ ತೂಕದ ಪೈಬ್ರಾಯಿಡ್ ಗಡ್ಡೆಯನ್ನು ಹೊರ ತೆಗೆದು ಮಹಿಳೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಇದನ್ನೂ ಓದಿ: 6 ಗಂಟೆ ಶಸ್ತ್ರಚಿಕಿತ್ಸೆ, 20 ವರ್ಷದ ಮಹಿಳೆ ಹೊಟ್ಟೆಯಿಂದ 16 ಕೆ.ಜಿ ಗಡ್ಡೆ ಹೊರತೆಗೆದ ವೈದ್ಯರು!
ಶಸ್ತಚಿಕಿತ್ಸೆಗೆ ಸಹಾಯಕರಾಗಿ ಈಶ್ವರ ಪೂಜಾರಿ ಮತ್ತು ನರ್ಸ್ ಹೃತಿಕಾ ಸಹಕರಿಸಿದರು. ಡಾ. ಮೋಹನ ಪಾಟೀಲ ಹಾಗೂ ಅವರ ತಂಡದ ಕಾರ್ಯಕ್ಕೆ ಸರಸ್ವತಿ ಬೇಕವಾಡಕರ ಪರಿವಾರದವರು ಮೆಚ್ಚುಗೆ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.