ETV Bharat / state

ನೂತನ ಮೀನು ಮಾರುಕಟ್ಟೆಯಲ್ಲಿ ಅವ್ಯವಹಾರ ಆರೋಪ: ಮಹಿಳಾ ಮೀನುಗಾರರಿಂದ ಪ್ರತಿಭಟನೆ - ಲೆಟೆಸ್ಟ್ ಕಾರವಾರ ಪ್ರೊಟೆಸ್ಟ್ ನ್ಯೂಸ್

ನೂತನ ಮೀನುಮಾರುಕಟ್ಟೆಯಲ್ಲಿ ಮೀನು ಮಾರಾಟಗಾರರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸದೆ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆಯೆಂದು ಆರೋಪಿಸಿ ಮಹಿಳಾ ಮೀನುಗಾರರು ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ನೂತನ ಮೀನುಮಾರುಕಟ್ಟೆಯಲ್ಲಿ ಅವ್ಯವಹಾರ : ಮಹಿಳಾ ಮೀನುಗಾರರಿಂದ ಪ್ರತಿಭಟನೆ
author img

By

Published : Nov 19, 2019, 9:02 AM IST

ಕಾರವಾರ: ನೂತನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರಾಟಗಾರರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸದೆ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಿ ಮಹಿಳಾ ಮೀನುಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ನೂತನ ಮೀನು ಮಾರುಕಟ್ಟೆಯಲ್ಲಿ ಅವ್ಯವಹಾರ ಆರೋಪ : ಮಹಿಳಾ ಮೀನುಗಾರರಿಂದ ಪ್ರತಿಭಟನೆ

ನಗರದಲ್ಲಿರುವ 300ಕ್ಕೂ ಅಧಿಕ ಮೀನುಗಾರ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅನುಕೂಲವಾಗುವಂತೆ ನೂತನ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಆದ್ರೆ ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಕಡಿಮೆ ಸ್ಥಳಾವಕಾಶವನ್ನು ಇರಿಸಿ ಮೀನುಗಾರರಿಗೆ ತಿಳಿಯದಂತೆ ವ್ಯಾಪಾರ ಮಳಿಗೆಗಳಿಗೆ ಹೆಚ್ಚಿನ ಜಾಗವನ್ನು ನಗರಸಭೆ ನಿಗದಿಗೊಳಿಸಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಧರಣಿ ನಡೆಸಿದರು.

ಇನ್ನು, ನಗರದಲ್ಲಿ ಈ ಹಿಂದೆ ಹಳೆಯ ಮಾರುಕಟ್ಟೆ ಇದ್ದ ಜಾಗದಲ್ಲಿ ನಗರಸಭೆ ನೂತನ ಮಾರುಕಟ್ಟೆಗಾಗಿ ಕಾಂಪ್ಲೆಕ್ಸ್ ಕಟ್ಟಡವನ್ನು ಕಟ್ಟುತ್ತಿದೆ. 4.96 ಕೋಟಿ ವೆಚ್ಚದಲ್ಲಿ 2017ರಿಂದ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ 2018ರಲ್ಲೇ ಪೂರ್ಣಗೊಳ್ಳಬೇಕಿದ್ದ ಮಾರುಕಟ್ಟೆ ವರ್ಷ ಕಳೆದ್ರೂ ಪೂರ್ಣಗೊಂಡಿಲ್ಲ. ನೂತನ ಮಾರುಕಟ್ಟೆಯಲ್ಲಿ ಮಳಿಗೆಗಳಿಗೆ ಹೆಚ್ಚಿನ ಸ್ಥಳಾವಕಾಶ ನೀಡಿದ ವಿಚಾರವಾಗಿ ಮಾಜಿ ಶಾಸಕ ಸತೀಶ್ ಸೈಲ್ ನಗರಸಭೆಯ ಹಿಂದಿನ ಅಧಿಕಾರಿ ಹಾಗೂ ಎಂಜಿನಿಯರ್‌ರನ್ನ ತರಾಟೆಗೆ ತೆಗೆದುಕೊಂಡರು. ಮೀನುಗಾರ ಮಹಿಳೆಯರಿಗೆ ಮೋಸ ಮಾಡಿ ಮಳಿಗೆಗಳಿಗೆ ಸ್ಥಳಾವಕಾಶ ನೀಡಲು ಮುಂದಾಗಿರುವುದನ್ನ ನಿಲ್ಲಿಸಿ, ಈ ಸಂಬಂಧ ಮತ್ತೊಮ್ಮೆ ಸಭೆ ನಡೆಸಬೇಕೆಂದು ಆಗ್ರಹಿಸಿದರು.

ಈ ವೇಳೆ ಡಿವೈಎಸ್ಪಿ ಶಂಕರ್ ಮಾರಿಯಾಳ್, ತಾವೇ ಈ ಸಂಬಂಧ ಸಭೆ ಕರೆಯೋದಾಗಿ ಭರವಸೆ ನೀಡಿದ ಬಳಿಕ ಧರಣಿಯನ್ನು ಹಿಂಪಡೆಯಲಾಯಿತು. ಇನ್ನು ಉಪಚುನಾವಣೆ ಹಿನ್ನಲೆ ನೀತಿಸಂಹಿತೆ ಜಾರಿ ಇದ್ದ ವೇಳೆ ಏಕಾಏಕಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.

Intro:Body:ಕಾರವಾರ: ನೂತನ ಮೀನುಮಾರುಕಟ್ಟೆಯಲ್ಲಿ ಮೀನು ಮಾರಾಟಗಾರರಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸದೆ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಇಂದು ಕಾರವಾರದಲ್ಲಿ ನಡೆದಿದೆ.
ನಗರದಲ್ಲಿರುವ 300ಕ್ಕೂ ಅಧಿಕ ಮೀನುಗಾರ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅನುಕೂಲವಾಗುವಂತೆ ನೂತನ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಕಡಿಮೆ ಸ್ಥಳಾವಕಾಶವನ್ನು ಇರಿಸಿ ಮೀನುಗಾರರಿಗೆ ತಿಳಿಯದಂತೆ ವ್ಯಾಪಾರ ಮಳಿಗೆಗಳಿಗೆ ಹೆಚ್ಚಿನ ಜಾಗವನ್ನು ನಗರಸಭೆ ನಿಗಧಿಗೊಳಿಸಿದೆ ಎಂದು ಮಾಜಿ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ ಮೀನುಗಾರ ಮಹಿಳೆಯರು ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲೇ ಧರಣಿ ನಡೆಸಿದರು.
ಇನ್ನು ನಗರದಲ್ಲಿ ಈ ಹಿಂದೆ ಹಳೆಯ ಮಾರುಕಟ್ಟೆ ಇದ್ದ ಜಾಗದಲ್ಲಿ ನಗರಸಭೆ ನೂತನ ಮಾರುಕಟ್ಟೆಗಾಗಿ ಕಾಂಪ್ಲೆಕ್ಸ್ ಕಟ್ಟಡವನ್ನು ಕಟ್ಟುತ್ತಿದೆ. 4.96 ಕೋಟಿ ವೆಚ್ಚದಲ್ಲಿ 2017ರಿಂದ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ. ಆದರೆ 2018ರಲ್ಲೇ ಪೂರ್ಣಗೊಳ್ಳಬೇಕಿದ್ದ ಮಾರುಕಟ್ಟೆ ವರ್ಷ ಕಳೆದ್ರೂ ಇದುವರೆಗೂ ಪೂರ್ಣಗೊಂಡಿಲ್ಲ. ನೂತನ ಮಾರುಕಟ್ಟೆಯಲ್ಲಿ ಮಳಿಗೆಗಳಿಗೆ ಹೆಚ್ಚಿನ ಸ್ಥಳಾವಕಾಶ ನೀಡಿದ ವಿಚಾರವಾಗಿ ಮಾಜಿ ಶಾಸಕ ಸತೀಶ್ ಸೈಲ್ ನಗರಸಭೆಯ ಹಿಂದಿನ ಅಧಿಕಾರಿ ಹಾಗೂ ಎಂಜಿನಿಯರ್‌ರನ್ನ ತರಾಟೆಗೆ ತೆಗೆದುಕೊಂಡರು. ಮೀನುಗಾರ ಮಹಿಳೆಯರಿಗೆ ಮೋಸ ಮಾಡಿ ಮಳಿಗೆಗಳಿಗೆ ಸ್ಥಳಾವಕಾಶ ನೀಡಲು ಮುಂದಾಗಿರುವುದನ್ನ ನಿಲ್ಲಿಸಿ ಈ ಸಂಬಂಧ ಮತ್ತೊಮ್ಮೆ ಸಭೆ ನಡೆಸಬೇಕು ಅಂತಾ ಆಗ್ರಹಿಸಿದರು.
ಈ ವೇಳೆ ಡಿವೈಎಸ್ಪಿ ಶಂಕರ್ ಮಾರಿಯಾಳ್ ತಾವೇ ಈ ಸಂಬಂಧ ಸಭೆ ಕರೆಯೋದಾಗಿ ಭರವಸೆ ನೀಡಿದ ಬಳಿಕ ಸರಣಿಯನ್ನು ಹಿಂಪಡೆಯಲಾಯಿತು. ಇನ್ನು ಉಪಚುನಾವಣೆ ಹಿನ್ನಲೆ ನೀತಿಸಂಹಿತೆ ಜಾರಿ ಇದ್ದ ವೇಳೆ ಏಕಾಏಕಿ ಪ್ರತಿಭಟನೆ ನಡೆಸಿದ್ದು ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.