ಶಿರಸಿ: ಶಿವರಾಮ್ ಹೆಬ್ಬಾರ್ ಕ್ಷೇತ್ರದ ಅಭಿವೃದ್ಧಿ ಅಥವಾ ಜನರಿಗಾಗಿ ರಾಜೀನಾಮೆ ನೀಡಿಲ್ಲ, ಪಕ್ಷಕ್ಕೆ ದ್ರೋಹ ಮಾಡಿ ದುಡ್ಡು ತೆಗೆದುಕೊಂಡು ಬಿಜೆಪಿಗೆ ಹೋಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ನನಗೆ ಏನು ಸಿಗುತ್ತದೆ, ಎಷ್ಟು ಲಾಭ ಆಗುತ್ತದೆ, ನನಗೆ ಯಾವ ಅಧಿಕಾರ ಸಿಗುತ್ತದೆ ಎಂದು ವಿಚಾರ ಮಾಡಿ ಹೆಬ್ಬಾರ್ ಬಿಜೆಪಿಗೆ ಹೋಗಿದ್ದಾರೆ. ಅಲ್ಲಿ ತಂದ ಹಣವನ್ನು ಚುನಾವಣೆಯಲ್ಲಿ ಚೆಲ್ಲುತ್ತಿದ್ದಾರೆ. ಜನರಿಗೆ ಎಲ್ಲವೂ ಅರ್ಥ ಆಗಿದೆ ಎಂದರು. ಯಲ್ಲಾಪುರದ ಕಾಂಗ್ರೆಸ್ ಅಭ್ಯರ್ಥಿ ಹುಮ್ಮಸ್ಸಿನಿಂದ ಕೆಲಸ ಮಾಡುತ್ತಿದ್ದು, ಎಲ್ಲಾ ಕಡೆ ಜನರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿಗೆ ಬಂದ ಕಡೆಗಳಲ್ಲಿ ಜನರು ಓಡಿಸುತ್ತಿದ್ದಾರೆ ಎಂದರು.