ETV Bharat / state

ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ: ಪ್ರವಾಸಿಗರಿಗೆ ಏಕರೂಪ ಟಿಕೆಟಿಂಗ್ ವ್ಯವಸ್ಥೆ! - ಈಟಿವಿ ಭಾರತ ಕನ್ನಡ

ಪ್ರವಾಸಿಗರಿಗೆ ಏಕರೂಪ ಟಿಕೆಟಿಂಗ್ ವ್ಯವಸ್ಥೆ - ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ - ಇನ್ನು ಮುಂದೆ ಆನ್​ಲೈನ್​ ಮೂಲಕ ಟಿಕೆಟ್​ ಬುಕ್ಕಿಂಗ್​

tourism
ಉತ್ತರ ಕನ್ನಡ ಪ್ರವಾಸೋದ್ಯಮ
author img

By

Published : Feb 25, 2023, 12:59 PM IST

Updated : Feb 25, 2023, 2:28 PM IST

ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಸ್ಪರ್ಶ

ಕಾರವಾರ: ಹತ್ತು ಹಲವು ಪ್ರವಾಸಿ ತಾಣಗಳನ್ನು ಒಡಲೊಳಗೆ ಬಚ್ಚಿಟ್ಟುಕೊಂಡು ಪ್ರವಾಸಿಗರ ಪಾಲಿಗೆ ಸ್ವರ್ಗದಂತಿರುವ ಉತ್ತರ ಕನ್ನಡಕ್ಕೆ ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ‌. ಹೀಗೆ ಬಂದವರು ಕಡಲತೀರ, ಧಾರ್ಮಿಕ ಕ್ಷೇತ್ರ, ಹಚ್ಚ ಹಸಿರಿನ ಪರಿಸರದ ನಡುವಿನ ಟ್ರಕ್ಕಿಂಗ್ ಜೊತೆಗೆ ಜಿಲ್ಲೆಯಲ್ಲಿನ ಜಲಸಾಹಸಿ ಕ್ರೀಡೆಗಳನ್ನು ಹೆಚ್ಚು ಎಂಜಾಯ್ ಮಾಡುತ್ತಾರೆ. ಆದರೆ, ಈ ಜಲಸಾಹಸಿ ಚಟುವಟಿಕೆಗಳತ್ತ ಆಕರ್ಷಿತರಾಗುವ ಪ್ರವಾಸಿಗರಿಗೆ ಇದೀಗ ಒಂದೇ ಆ್ಯಪ್ ಮೂಲಕ ಆನ್​ಲೈನ್​ ಟಿಕೆಟ್​ ನೀಡಿ ಆ ಮೂಲಕ ಡಿಜಿಟಲ್ ಸ್ಪರ್ಶ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಹೌದು, ಒಂದೆಡೆ ವಿಶಾಲವಾದ ಕರಾವಳಿ ತೀರ, ಇನ್ನೊಂದೆಡೆ ಪಶ್ಚಿಮಘಟ್ಟಗಳ ಸರಣಿಯನ್ನು ಹೊಂದಿರುವ ವಿಶಿಷ್ಠ ಜಿಲ್ಲೆ ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಸಾಕಷ್ಟು ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಗೆ ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ ಎಂಜಾಯ್ ಮಾಡಿ ತೆರಳುತ್ತಾರೆ. ಅದರಲ್ಲಿಯೂ ಮುರುಡೇಶ್ವರ, ಕಾರವಾರ, ಹೊನ್ನಾವರ, ದಾಂಡೇಲಿ ಭಾಗದಲ್ಲಿನ ಜಲಸಾಹಸಿ ಕ್ರೀಡೆಗಳತ್ತ ಹೆಚ್ಚು ಜನರು ಆಕರ್ಷಿತರಾಗುತ್ತಾರೆ.

ಆದರೆ, ಹೀಗೆ ಬಂದು ಎಂಜಾಯ್ ಮಾಡಿ ತೆರಳಿದರೂ ಈವರೆಗೂ ಯಾವೆಲ್ಲ ಸ್ಥಳಗಳಿಗೆ ಎಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ? ಅದರಿಂದಾಗಿ ಎಷ್ಟೆಲ್ಲಾ ಆದಾಯ ಬಂದಿದೆ? ಎನ್ನುವ ನಿಖರ ಮಾಹಿತಿ ಪ್ರವಾಸೋದ್ಯಮ ಇಲಾಖೆಗೆ ಸಿಗುತ್ತಿರಲಿಲ್ಲ. ಒಂದು ಅಂದಾಜಿನಲ್ಲಿಯೇ ಲೆಕ್ಕ ಹಾಕಿ ಸೌಲಭ್ಯ ಸೇರಿದಂತೆ ಮೂಲ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಆದರೆ, ಇದೀಗ ಪ್ರವಾಸೋದ್ಯಮ ಇಲಾಖೆ ಅಡಿ ಟಿಕೆಟ್‌ ಸೌಲಭ್ಯವಿರುವ ಎಲ್ಲ ಪ್ರವಾಸಿತಾಣಗಳಲ್ಲಿ ಒಂದೇ ವ್ಯವಸ್ಥೆಯಡಿ ಟಿಕೆಟ್ ನೀಡಲು ಆ್ಯಪ್ ರೂಪಿಸಲಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಡಿಜಿಟಲ್ ಸ್ಪರ್ಶ ನೀಡಲಾಗುತ್ತಿದೆ.

ಜಿಲ್ಲೆಯ ಪ್ರಮುಖ ಜಲಸಾಹಸಿ ಪ್ರವಾಸಿ ತಾಣಗಳಲ್ಲಿ ಎಲ್ಲೆಲ್ಲಿ ಟಿಕೆಟ್ ಪಡೆದು ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆಯೋ ಅಂತಹ ಎಲ್ಲ ಪ್ರವಾಸಿ ತಾಣಗಳನ್ನು ಟಿಕೆಟ್ ಇಂಟಿಗ್ರೇಷನ್ ಸಿಸ್ಟಮ್ ಅಡಿ ತರಲಾಗುತ್ತಿದೆ. ಈ ಮೂಲಕ ಆನ್​ಲೈನ್​ನಲ್ಲಿ ಎಲ್ಲಿಂದ ಬೇಕಾದರೂ ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೇ ಸ್ಥಳದಲ್ಲಿಯೇ ಬಂದು ಟಿಕೆಟ್​ಗಳನ್ನು ಪಡೆಯಬಹುದು ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ತಿಳಿಸಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ ಕ್ರಿಟಿಕ್ಸ್​ ಅಸೋಸಿಯೇಶನ್​ ಫಿಲ್ಮ್​ ಅವಾರ್ಡ್: 'ಆರ್​ಆರ್​ಆರ್' ಮುಡಿಗೇರಿದ 4 ಅತ್ಯುನ್ನತ ಪ್ರಶಸ್ತಿಗಳು

ಸದ್ಯ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಪಡೆದವರು ಟಿಕೆಟ್ ನೀಡಿ ಹಣ ಪಡೆದುಕೊಳ್ಳುತ್ತಿದ್ದಾರೆ. ನೂತನ ಟಿಕೆಟ್ ಇಂಟಿಗ್ರೇಷನ್ ಸಿಸ್ಟಮ್‌ನಲ್ಲಿ ಪ್ರತಿಯೊಂದು ಪ್ರವಾಸಿ ತಾಣದಲ್ಲಿ ಲಾಗಿನ್ ಮೂಲಕವೇ ಟಿಕೆಟ್ ನೀಡಬೇಕಾಗುವುದರಿಂದ ಎಷ್ಟು ಪ್ರವಾಸಿಗರು ಬರುತ್ತಿದ್ದಾರೆ? ಇವರಿಂದ ಎಷ್ಟು ಆದಾಯ ಬರುತ್ತಿದೆ? ಎಲ್ಲೆಲ್ಲಿಂದ ಪ್ರವಾಸಿಗರು ಬರುತ್ತಿದ್ದಾರೆ? ಯಾವ ಅವಧಿಯಲ್ಲಿ ಹೆಚ್ಚು ಪ್ರವಾಸಿಗರು ಬರುತ್ತಾರೆ? ಎಂಬ ಮಾಹಿತಿ ಕಲೆ ಹಾಕಲು ಸಾಧ್ಯವಾಗಲಿದೆ. ಅಲ್ಲದೇ ಆನ್‌ಲೈನ್‌ನಲ್ಲಿ ಎಲ್ಲಿಂದ ಬೇಕಾದರೂ ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಸಿಗುವುದರಿಂದ ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ.

ಇನ್ನು ಪ್ರವಾಸೋದ್ಯಮ ಇಲಾಖೆ ಜಾರಿಗೆ ತರಲು ಮುಂದಾಗಿರುವ ಈ ಯೋಜನೆಗೆ ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. "ಪ್ರವಾಸಿಗರು ಬಂದರೆ ಎಲ್ಲಿ ಟಿಕೆಟ್ ಪಡೆಯಬೇಕು? ಎಂಬ ಬಗ್ಗೆ ಮಾಹಿತಿ ಸಿಗದೇ ಪರದಾಡಬೇಕಿತ್ತು. ಆದರೆ ಇದೀಗ ಈ ರೀತಿ ಮಾಡಿರುವುದರಿಂದ ಆನ್​ಲೈನ್​ ಮೂಲಕವೇ ಟಿಕೆಟ್​ ಪಡೆದು ಎಲ್ಲಿಗೆ ತೆರಳಬಹುದು ಎಂಬುದರ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ ಬಂದ ಆದಾಯದ ಸಮರ್ಪಕ ಮಾಹಿತಿ ಸಿಗುವುದರಿಂದ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಸಮರ್ಥವಾಗಿ ಮಾಡಬಹುದು" ಎಂದು ಸ್ಥಳೀಯರಾದ ತಿಮ್ಮಪ್ಪ ಹರಿಕಾಂತ ಹೇಳಿದ್ದಾರೆ.

ಒಟ್ಟಾರೆಯಾಗಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ ಟಿಕೆಟ್ ಇಂಟಿಗ್ರೇಷನ್ ಸಿಸ್ಟಮ್ ಜಾರಿಗೊಳಿಸುತ್ತಿರುವುದು ನಿಜಕ್ಕೂ ಉತ್ತಮವಾದದ್ದೇ. ಆದರೆ ಇದರೊಂದಿಗೆ ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯನ್ನೂ ಇಲಾಖೆ ಮಾಡಿದ್ದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಇತರರಿಗೆ ಮಾದರಿಯಾಗುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ: 10 ಸಾವಿರದಷ್ಟಿದ್ದ ರಣಹದ್ದು ಈಗ 250ಕ್ಕೆ ಕುಸಿತ!: 3 ರಾಜ್ಯಗಳಲ್ಲಿ ಏಕಕಾಲಕ್ಕೆ ಜಟಾಯು ಸಮೀಕ್ಷೆ

Last Updated : Feb 25, 2023, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.