ಕಾರವಾರ : ಮುರುಡೇಶ್ವರದ ಬಳಿ ಕಡಲಾಳದಲ್ಲಿ ಸ್ಕೂಬಾ ಡೈವರ್ಸ್ಗಳು ಕನ್ನಡದ ಬಾವುಟ ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ವಿನೂತನವಾಗಿ ಆಚರಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಮುರುಡೇಶ್ವರದ ನೇತ್ರಾಣಿ ದ್ವೀಪದ ಬಳಿ ತೆರಳಿದ 6 ಮಂದಿ ಸ್ಕೂಬಾ ಡೈವರ್ಸ್ಗಳು ಸುಮಾರು 20 ಅಡಿ ಉದ್ದದ ಕನ್ನಡ ಬಾವುಟವನ್ನು ಕಡಲಾಳದಲ್ಲಿ ಹಾರಾಡಿಸಿದ್ದಾರೆ.
ಹೆಚ್ಚಿನ ಓದಿಗೆ : ಕೇದಾರನಾಥೇಶ್ವರ ದೇವಾಲಯ ಮುಂದೆ ಮೊಳಗಿದ ಕನ್ನಡದ ಕಂಪು
ಸಮುದ್ರದ ಮೇಲೂ ಕೂಡ ಕನ್ನಡದ ಬಾವುಟ ರಾರಾಜಿಸಿದೆ. ಓಷಿಯನ್ ಅಡ್ವೆಂಚರ್ಸ್ ಹೆಸರಿನ ಬೋಟ್ ಮೇಲೆ ನಿಂತು ಬಾವುಟ ಹಾರಿಸಿದ ಕನ್ನಡ ಪ್ರೇಮಿಗಳು, ಕನ್ನಡಕ್ಕೆ ಜೈಕಾರ ಕೂಗಿದ್ದಾರೆ.
ಈ ಮೂಲಕ ಮುರುಡೇಶ್ವರ ಸಮುದ್ರದ ತೀರದಲ್ಲಿ ಒಳಗೂ ಹೊರಗೂ ಕನ್ನಡ ಬಾವುಟ ಹಾರಿಸುವ ಮೂಲಕ ವಿನೂತನವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿದೆ.