ETV Bharat / state

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಗಿತಗೊಳ್ಳುತ್ತಿರುವ ಡಯಾಲಿಸೀಸ್ ಕೇಂದ್ರ; ಕಿಡ್ನಿ ವೈಫಲ್ಯಕ್ಕೊಳಗಾದವರ ಪರದಾಟ - ಕಿಡ್ನಿ ವೈಫಲ್ಯಕ್ಕೊಳಗಾದವರ ಪರದಾಟ

ಕಂಪನಿ ಹಾಗೂ ಸರ್ಕಾರದ ನಡುವಿನ ಕಿತ್ತಾಟದಲ್ಲಿ ಉತ್ತರ ಕನ್ನಡ ಜಿಲ್ಲೆಯ ಡಯಾಲಿಸೀಸ್​ ಕೇಂದ್ರಗಳು ಕಾರ್ಯ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದು, ಕಿಡ್ನಿ ವೈಫಲ್ಯವಿರುವ ರೋಗಿಗಳು ಆತಂಕಕ್ಕೊಳಗಾಗಿದ್ದಾರೆ.

hospital
hospital
author img

By

Published : May 19, 2021, 10:38 PM IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕೇಂದ್ರಗಳು ತಮ್ಮ ಕಾರ್ಯ ಸ್ಥಗಿತ ಮಾಡುವ ಹಂತಕ್ಕೆ ತಲುಪಿದ್ದು, ರೋಗಿಗಳಿಗೆ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಿಡ್ನಿ ವೈಫಲ್ಯವಾದವರಿಗೆ ಡಯಾಲಿಸೀಸ್ ಮಾಡಿಸುವುದು ಕಡ್ಡಾಯ. ಕಿಡ್ನಿ ವೈಫಲ್ಯವಾದಾಗ ದೇಹದಲ್ಲಿ ರಕ್ತ ಶುದ್ದೀಕರಣ ಆಗದ ಹಿನ್ನೆಲೆ , ಡಯಾಲಿಸೀಸ್ ಯಂತ್ರದ ಮೂಲಕವೇ ಶುದ್ಧೀಕರಣ ಮಾಡಿಸಿ ಜೀವ ಉಳಿಸುವ ಕಾರ್ಯ ಮಾಡಲಾಗುತ್ತದೆ. ಡಯಾಲಿಸೀಸ್​​​ಗೆ ಸಹಾಯವಾಗಲು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಡಯಾಲಿಸಿಸ್ ಸೆಂಟರ್​ಗಳನ್ನ ತೆರೆದಿತ್ತು. ರಾಜ್ಯದ 27 ಜಿಲ್ಲೆಗಳ 122 ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕೇಂದ್ರವಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 11 ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಕೇಂದ್ರಗಳಿವೆ.

ಇನ್ನು ನಿತ್ಯ ಸಾಕಷ್ಟು ಜನ ಕಿಡ್ನಿ ವೈಫಲ್ಯವಾದವರೂ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಾರೆ. ರಾಜ್ಯದಲ್ಲಿ ಈ ಡಯಾಲಿಸೀಸ್ ಕೇಂದ್ರಗಳ ನಿರ್ವಹಣೆಯನ್ನ ಬಿ.ಆರ್. ಶೆಟ್ಟಿ ಹೆಲ್ತ್ ಅಂಡ್​ ರಿಸರ್ಚ್ ಎನ್ನುವ ಕಂಪನಿಗೆ ಆರೋಗ್ಯ ಇಲಾಖೆ ಗುತ್ತಿಗೆ ನೀಡಿತ್ತು. ಉತ್ತರ ಕನ್ನಡ ಜಿಲ್ಲೆಯ 11 ಆಸ್ಪತ್ರೆಗಳಲ್ಲಿನ ಡಯಾಲಿಸೀಸ್ ಕೇಂದ್ರದ ನಿರ್ವಹಣೆಯನ್ನು ಸಹ ಇದೇ ಕಂಪನಿ ಮಾಡುತ್ತಿತ್ತು. ಆದರೆ, ಕಂಪನಿ ಹಾಗೂ ಸರ್ಕಾರದ ನಡುವಿನ ಕಿತ್ತಾಟದಲ್ಲಿ ಸದ್ಯ ಕಂಪನಿಯವರು ಡಯಾಲಿಸೀಸ್ ಕೇಂದ್ರದ ನಿರ್ವಹಣೆಯನ್ನ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಡಯಾಲಿಸೀಸ್ ಕೇಂದ್ರ ನಿರ್ವಹಣೆಗೆ ಬೇಕಾಗುವ ವೈದ್ಯಕೀಯ ಉಪಕರಣಗಳ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ಉತ್ತರಕನ್ನಡದಲ್ಲಿ ಆರೋಗ್ಯ ಇಲಾಖೆಯವರೇ ಹರಸಾಹಸ ಪಟ್ಟು ವೈದ್ಯಕೀಯ ಉಪಕರಣ ಪೂರೈಸಿ ನಿರ್ವಹಿಸುವಂತಾಗಿದೆ. ಇನ್ನು ಒಂದು ವಾರ ಇದೇ ಪರಿಸ್ಥಿತಿ ಮುಂದುವರಿದರೆ ಡಯಾಲಿಸೀಸ್ ನಿರ್ವಹಣೆಯೇ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದ್ದು, ಸರ್ಕಾರ ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಡಯಾಲಿಸೀಸ್​​​ಗೆ ವೈದ್ಯಕೀಯ ಉಪಕರಣಗಳ ಕೊರತೆ ಇರುವ ಕಾರಣ ರೋಗಿಗಳಿಗೆ ಸರಿಯಾದ ಸಮಯಕ್ಕೆ ಡಯಾಲಿಸೀಸ್ ಮಾಡುತ್ತಿಲ್ಲ. ನಿತ್ಯ ಡಯಾಲಿಸೀಸ್ ಮಾಡಿಸಿಕೊಳ್ಳುತ್ತಿದ್ದವರಿಗೆ ವಾರಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಮಾಡಲಾಗುತ್ತಿದೆ. ಸರ್ಕಾರ ಈಗಾಗಲೇ ಖಾಸಗಿ ಕಂಪನಿಗೆ 28 ಕೋಟಿ ಹಣ ಕೊಡಬೇಕು ಎನ್ನಲಾಗಿದೆ. ಸರಿಯಾಗಿ ಹಣ ಕೊಡದ ಕಾರಣ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸರಿಯಾಗಿ ಸಂಬಳವಾಗದೇ, ಡಯಾಲಿಸೀಸ್ ಕೇಂದ್ರ ಮುಚ್ಚುವ ಹಂತಕ್ಕೆ ಬಂದಿದೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಬಳಿ ಕೇಳಿದ್ರೆ ವಿಷಯವನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅವರು ಬಗೆಹರಿಸುವ ವಿಶ್ವಾಸವಿದೆ ಎನ್ನುತ್ತಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸೀಸ್ ಮಾಡಿಸಲು ಸಾವಿರಾರು ರೂಪಾಯಿ ಖರ್ಚು ಮಾಡಬೇಕು. ಹಣ ಇಲ್ಲದ ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಆಸರೆ. ಆದರೆ, ಇದೇ ಸರ್ಕಾರಿ ಆಸ್ಪತ್ರೆಗಳು ಡಯಾಲಿಸೀಸ್ ಕೇಂದ್ರ ಮುಚ್ಚಿದರೆ ಎಲ್ಲಿ ಕರೆದುಕೊಂಡು ಹೋಗಬೇಕು ಎನ್ನುವುದು ಸ್ಥಳೀಯರ ಆತಂಕವಾಗಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಡಯಾಲಿಸೀಸ್ ಕೇಂದ್ರ ಮುಚ್ಚದಂತೆ ಕ್ರಮ ಕೈಗೊಳ್ಳಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.