ಉತ್ತರಕನ್ನಡ/ಕಾರವಾರ: ರಾಜ್ಯದಲ್ಲಿ ಸದ್ಯ ಕೊರೊನಾ ವೈರಸ್ ಭೀತಿ ಉಂಟುಮಾಡಿರುವ ನಡುವೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಡೆಂಗ್ಯೂ ಆತಂಕ ಮೂಡಿಸಿದೆ.
ಕಾರವಾರದ ಬೈತಖೋಲ ಬಂದರು ಪ್ರದೇಶದಲ್ಲಿನ ಮೀನುಗಾರಿಕಾ ಬೋಟ್ ಕಾರ್ಮಿಕನೋರ್ವನಲ್ಲಿ ಇದೀಗ ಡೆಂಗ್ಯೂ ಕಾಣಿಸಿಕೊಂಡಿದೆ. ಕಳೆದ 11 ದಿನಗಳಿಂದ ಆಳ ಸಮುದ್ರ ಮೀನುಗಾರಿಕೆ ತೆರಳುವ ಬೋಟುಗಳನ್ನು ಬಂದರಿನಲ್ಲೇ ಲಂಗರು ಹಾಕಲಾಗಿದೆ. ಲಾಕ್ಡೌನ್ ಹಿನ್ನಲೆ ಬೋಟಿನ ಕಾರ್ಮಿಕರು ಊರಿಗೆ ತೆರಳಲಾಗದೇ ಬೋಟುಗಳಲ್ಲೇ ವಾಸ್ತವ್ಯ ಹೂಡಿದ್ದಾರೆ. ಆದ್ರೆ ಬೋಟುಗಳು ಒಂದೇ ಕಡೆಗಳಲ್ಲಿ ನಿಂತುಕೊಂಡಿದ್ದ ಪರಿಣಾಮ ಬೋಟುಗಳಲ್ಲಿ ಸಂಗ್ರಹವಾಗಿದ್ದ ನೀರಿನಿಂದ ಓರಿಸ್ಸಾ ಮೂಲದ ಕಾರ್ಮಿಕರಿಗೆ ಇದೀಗ ಡೆಂಗ್ಯೂ ಸೋಂಕು ಕಾಣಿಸಿಕೊಂಡಿದೆ.
ಈ ನಿಟ್ಟಿನಲ್ಲಿ ಬೈತಖೋಲಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದ್ದು, ಬಂದರು ಪ್ರದೇಶದಲ್ಲಿ ಫಾಗಿಂಗ್ ನಡೆಸಲಾಗಿದೆ. ಇದೀಗ ಬೋಟಿನ ಕಾರ್ಮಿಕರನ್ನ ಬೋಟು ಮಾಲೀಕರ ಯೂನಿಯನ್ ಕಚೇರಿ ಹಾಗೂ ಹಾಲ್ಗಳಲ್ಲಿ ಉಳಿದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.